ವಿವಾಹ ವಾರ್ಷಿಕೋತ್ಸವಕ್ಕೆ ಮಡದಿಗೆ ನೀನು ದುರಹಂಕಾರಿ ಮೊದಲಿನ ಹಾಗೆ ಇಲ್ಲ ಎಂದು ಪತ್ರ ಬರೆದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್, ಪತ್ರ ವೈರಲ್

ಸೆಲೆಬ್ರಿಟಿ ಜೋಡಿಗಳಳಾದ ತಮಿಳಿನ ಜನಪ್ರಿಯ ನಿರೂಪಕಿ ಮಹಾಲಕ್ಷ್ಮೀ (Mahalakshmi) ಅವರು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrashekhar) ಎಲ್ಲರಿಗೂ ಕೂಡ ಚಿರಪರಿಚಿತರು. ನಿರೂಪಕಿ ಮಹಾಲಕ್ಷ್ಮೀ ಅವರು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ರವರು ಮದುವೆಯಾದ ಖ್ಯಾತಿ ಗಳಿಸಿಕೊಂಡಿದ್ದರು.

ಹೌದು, ಕಳೆದ ವರ್ಷ ಸೆಪ್ಟೆಂಬರ್ 1 (September 1) ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯು ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗಿದ್ದರು.ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್​ ಇದೀಗ ಸೆಪ್ಟೆಂಬರ್​ 1ರಂದು ವಿವಾಹ ವಾರ್ಷಿಕೋತ್ಸವ (Wedding Anniversary) ನ್ನು ಆಚರಿಸಿಕೊಂಡಿದ್ದಾರೆ.

ಈ ಸಂಭ್ರಮದ ನಡುವೆ ರವೀಂದರ್‌ ಪತ್ನಿಗೆ ವಿಶೇಷ ಪತ್ರದ ಮೂಲಕ ಶುಭಾಶಯ ಕೋರಿದ್ದು, ಈ ಪತ್ರವು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿವೆ. ರವಿಂದರ್‌ ತಮ್ಮ ಪತ್ರದಲ್ಲಿ ʻʻಇದು ನಮ್ಮಿಬ್ಬರ ಮೊದಲ ವಿವಾಹ ವಾರ್ಷಿಕೋತ್ಸವ. ಕಳೆದ ವರ್ಷ ನಮ್ಮ ದೇಶದಲ್ಲಿ ಮೊದಲ ಸಮಸ್ಯೆ ಆಗಿದ್ದು ನಮ್ಮಿಬ್ಬರ ವಿವಾಹ. ನನ್ನ ಜೀವನಕ್ಕೆ ನೀನು ಸಿಕ್ಕ ವರ.

ನಾನು ನಿಜವಾಗಿಯೂ ಮಹಾಲಕ್ಷ್ಮಿಯ ಪ್ರೀತಿ ಮತ್ತು ಪ್ರಾಮಾಣಿಕತೆಗೆ ಅರ್ಹನಲ್ಲ. ಆದರೂ ಪರವಾಗಿಲ್ಲ ನಮ್ಮ ಜೀವನ ತುಂಬ ಸುಂದರವಾಗಿದೆ. ಸಂತೋಷದಲ್ಲಿ ನಮ್ಮನ್ನು ನಗಿಸುವ ಹುಡುಗಿ ಮತ್ತು ಸಂತೋಷದಲ್ಲಿ ನಮ್ಮನ್ನು ಅಳುವಂತೆ ಮಾಡುವ ಹುಡುಗಿ ಮಾತ್ರ ನಮಗೆ ಅತ್ಯುತ್ತಮವಾದ ಜೀವನವನ್ನು ನೀಡಬಲ್ಲಳು. ನನ್ನ ಬಂಗಾರ ಈಕೆ ನನ್ನ ಪತ್ನಿ ಮಹಾಲಕ್ಷ್ಮೀʼʼಎಂದು ಬರೆದುಕೊಂಡಿದ್ದಾರೆ.

ʻʻಮದುವೆಯಾದ ಹೊಸತರದಲ್ಲಿ ಆಕೆಯ ಕೆಲವು ವಿಷಯಗಳು ನನಗೂ ಅಚ್ಚರಿ ತಂದಿದ್ದವು. ಆಕೆಯನ್ನು ಮದುವೆಯಾದಾಗ, ನನ್ನ ಮನೆಕೆಲಸ, ಕಾಫಿ, ಅಡುಗೆ ಎಲ್ಲವನ್ನು ಮನೆ ಕೆಲಸದವರೇ ಮಾಡಬೇಕು ಎಂದುಕೊಂಡಿದ್ದೆ. ಬೆಳಗ್ಗೆ ಬೇಗ ಎದ್ದು ಕಾಫಿ ಮಾಡಿ ಕೊಡುತ್ತಾಳೆ. ಒಮ್ಮೊಮ್ಮೆ ಕೆಟ್ಟದಾದ ಅಡುಗೆ ಮಾಡಿದ್ದೂ ಇದೆ.

ಆಗ ಆನ್​ಲೈನ್​ ಮೂಲಕ ತಿನಿಸು ತರಿಸಿಕೊಂಡಿದ್ದೂ ಇದೆ. ಟಿವಿಯಲ್ಲಿ ಕಾಣುವಂತೆ ಆಕೆ ಇಲ್ಲ. ಸ್ವಭಾವ ಬದಲಿದೆ. ಅವಳಿಗೆ ಕೊಂಚ ಆಟಿಟ್ಯೂಡ್‌ ಇದೆ. ದುರಂಹಕಾರಿಯೂ ಹೌದು. ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಬಂದಾಗ, ಆಕೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಾಳೆ. ನನಗಾಗಿ ಏನಾದರೂ ಮಾಡಿ ತರುತ್ತಾಳೆ.

ನಾವು ದೂರವಾಗಿದ್ದೇವೆ ಎಂದು ಯೂಟ್ಯೂಬ್‌ಗಳಲ್ಲಿ ಸುದ್ದಿಗಳು ಬಂದಾಗ, ನಾವು ಅವರೆಲ್ಲರ ಮುಂದೆ ಬಾಳಿ ಬದುಕಬೇಕು ಎಂದು ಹೇಳುತ್ತಾಳೆ. ಅದನ್ನು ನಾವು ಸಾಬೀತುಪಡಿಸಬೇಕು ಎನ್ನುತ್ತಾಳೆʼʼ ಎಂದಿದ್ದಾರೆ. ಅದಲ್ಲದೆ, ಪತಿಯ ಪತ್ರವನ್ನು ಕಂಡು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದು ಮಹಾಲಕ್ಷ್ಮೀ ʻ ನನ್ನ ಪ್ರೀತಿಯನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಲು ನನಗೆ ತಿಳಿದಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಬೆಟರ್‌ ಹಾಫ್‌ʼʼಎಂದಿದ್ದಾರೆ.

Leave a Reply

Your email address will not be published. Required fields are marked *