ಪತಿ ರವೀಂದರ್ ICU ನಲ್ಲಿ ಮಲಗಿದ್ದರೆ.. ಇತ್ತ ನಟಿ ಮಹಾಲಕ್ಷ್ಮಿಯ ಹಬ್ಬದ ದಿನ ಏನು ಟ್ರೋಲ್ ಆದ ನಿರ್ಮಾಪಕನ ಮಡದಿ?

ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi) ಸದಾ ಸುದ್ದಿಯಲ್ಲಿರುತ್ತಾರೆ. ಟ್ರೋಲಿಗರ ಬಾಯಿಗೆ ಪದೇ ಪದೇ ಆಹಾರವಾಗುತ್ತಿರುವ ಈ ಜೋಡಿಯು ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಕಳೆದ ವರ್ಷ ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾ-ಕಿಂಗ್​ ಎದುರಾಗಿತ್ತು.ನಿರ್ಮಾಪಕ ರವೀಂದರ್​ ಚಂದ್ರಶೇಖರನ್ ಅವರನ್ನು ಪೊಲೀಸರು ಅರೆಸ್ಟ್​ ಮಾಡಿ ಬಂ-ಧನದಲ್ಲಿದ್ದರು. ಆದಾದ ಬಳಿಕ ಜೈ-ಲಿನಿಂದ ಬಿಡುಗಡೆಯಾಗಿ ಬಂದ ರವೀಂದರ್ ರವರ ಆರೋಗ್ಯವು ತೀರಾ ಹದಗೆಟ್ಟಿದೆ.

ಹೌದು, ಇತ್ತೀಚಿಗೆ ನಿರ್ಮಾಪಕ ರವೀಂದರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಶ್ವಾಸಕೋಶದ ಸಮಸ್ಯೆಯಿಂದ ರವೀಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.ತೀವ್ರ ಅನಾರೋಗ್ಯದಿಂದ ಅವರು ಬಳಲುತ್ತಿರುವ ಹಿನ್ನೆಲೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಉಸಿರಾಡಲು ರವೀಂದರ್​ ಕಷ್ಟವಾಗಿದೆ.

ಹೀಗಾಗಿ ಆಕ್ಸಿಜನ್​ ಮಾಸ್ಕ್​ ಹಾಕಿಕೊಂಡು ಅವರು ಮಾತನಾಡುತ್ತಿರುವ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿರುವುದನ್ನು ಗಮನಿಸಿರಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದರು. ಪತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ನಟಿ ಮಹಾಲಕ್ಷ್ಮಿಯವರು ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ.

ಹೌದು ನಟಿ ಮಹಾಲಕ್ಷ್ಮಿ ಜೋರಾಗಿ ಸಂಕ್ರಾತಿ ಸೆಲೆಬ್ರೇಟ್ ಮಾಡಿದ್ದಾರೆ ಸೀರೆ ಉಟ್ಟು, ಪೊಂಗಲ್​ ಹಬ್ಬ (Pongal Festival) ಆಚರಿಸಿದ್ದು, ಈ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ.ನಟಿ ಮಹಾಲಕ್ಷ್ಮಿ ಎಲ್ಲರಿಗೂ ಪೊಂಗಲ್ ಶುಭಾಶಯ ಕೋರಿದ್ದಾರೆ. ಫೋಟೋ ನೋಡುತ್ತಿದ್ದಂತೆ ನೆಟ್ಟಿಗರು ನೆಟ್ಟಿಗರು ರವೀಂದ್ರ ಹೇಗಿದ್ದಾರೆ ಎಂದು ಕೇಳುತ್ತಿದ್ದಾರೆ.

ಇನ್ನೊಂದೆಡೆ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇಷ್ಟೆಲ್ಲಾ ಬೇಕಿತ್ತ ಎಂದು ಕೇಳಿದ್ದು ಮಹಾಲಕ್ಷ್ಮಿಯವರನ್ನು ಟ್ರೋಲ್ ಮಾಡಿದ್ದಾರೆ. ಗಂಡ ಆಸ್ಪತ್ರೆಯಲ್ಲಿರುವಾಗಲೇ ಹಬ್ಬ ಆಚರಿಸಿಕೊಂಡು, ಫೋಟೋ ಶೂಟ್ ಮಾಡಿಸಿಕೊಂಡಿದ್ದನ್ನು ಕಂಡು ದುಡ್ಡಿಗಾಗಿ ಮದುವೆಯಾಗಿದ್ದಾ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಇತ್ತ ರವೀಂದರ್ ಫ್ಯಾನ್ಸ್ ಬೇಗ ಹುಷಾರಾಗಿ ಬನ್ನಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *