ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅರೆಸ್ಟ್, ಇಲ್ಲಿದೆ ಅಸಲಿ ವಿಚಾರ?

ಕಳೆದ ವರ್ಷ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸೆಲೆಬ್ರಿಟಿ ದಂಪತಿಗಳ ಸಾಲಿಗೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi)ಜೋಡಿ ಕೂಡ ಒಂದು. ಇಬ್ಬರಿಗೂ ಕೂಡ ಎರಡನೇ ಮದುವೆಯಾಗಿದ್ದರೂ ಕೂಡ ನಿರೂಪಕಿ ಮಹಾಲಕ್ಷ್ಮಿಯವರು ರವೀಂದರ್ ಚಂದ್ರಶೇಖರ್ ಅವರನ್ನು ಹಣಕ್ಕಾಗಿ ಮದುವೆಯಾದರು ಎಂದು ನೆಟ್ಟಿಗರು ಹೇಳಿದ್ದರು.

ಆದರೆ ಯಾವುದೇ ಟ್ರೋಲ್ (Troll) ಗಳಿಗೂ ನೆಟ್ಟಿಗರ ಕಾಮೆಂಟ್ ಗಳಿಗೂ ತಲೆ ಕೆಡಿಸಿಕೊಳ್ಳದ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi)ಯವರು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಆದರೆ ಈ ಸಂತೋಷದಲ್ಲಿರುವಾಗಲೇ ಈ ದಂಪತಿಗಳಿಗೆ ಏಕಾಏಕಿ ಶಾಕ್ ವೊಂದು ಎದುರಾಗಿದೆ.

ಹೌದು, ನಿರ್ಮಾಪಕ ರವೀಂದರ್​ ಚಂದ್ರಶೇಖರನ್ ಅವರನ್ನು ಪೊಲೀಸರು ಅ-ರೆಸ್ಟ್​ ಮಾಡಿದ್ದಾರೆ. ​15.83 ಕೋಟಿ ರೂಪಾಯಿ ವಂ-ಚಿಸಿದ್ದಾರೆ ಎನ್ನಲಾಗಿದೆ. ಕೇಂದ್ರ ಅ-ಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅ-ಕ್ರಮ ಹಣ ವರ್ಗಾವಣೆ ಪ್ರಕರಣವೊಂದು ದಾಖಲು ಮಾಡಲಾಗಿದೆ. ಅಮೆರಿಕ (America) ದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ (Vijay) ಎನ್ನುವ ವ್ಯಕ್ತಿಯು ಈ ನಿರ್ಮಾಪಕನ ವಿರುದ್ಧ ಕೇ-ಸ್ ಹಾಕಿದ್ದಾರೆ.

ಹಣ ವಂಚನೆಯ ವಿರುದ್ಧ ಪ್ರ-ಕರಣ ದಾಖಲಾದ ಕೂಡಲೇ ವಿಚಾರಣೆಯಲ್ಲಿ ಭಾಗಿಯಾಗುವಂತೆ ರವಿಂದರ್ ಅವರಿಗೆ ನೋಟಿಸ್​ (Notice) ನೀಡಲಾಗಿದ್ದು, ಈ ವಿಚಾರಣೆಯಲ್ಲಿ ನಿರ್ಮಾಪಕ ರವೀಂದರ್ ಅವರು ಭಾಗಿಯಾಗಿದ್ದಾರೆ. ನಿರ್ಮಾಪಕ ರವೀಂದರ್​ ಅವರ ಜೊತೆಗೆ ಸೇರಿಕೊಂಡು ವಿಜಯ್ ಅವರು ಪ್ರಾಜೆಕ್ಟ್​ (Cinema Project) ಗೆ ಹಣ ಹಾಕಿದ್ದರು ಎನ್ನುವುದು ತಿಳಿದು ಬಂದಿದೆ.

ಆದರೆ ಈ ಸಿನಿಮಾ ಪ್ರಾಜೆಕ್ಟ್ ಬಗ್ಗೆ ರವೀಂದರ್ ಅವರು ಯಾವುದೇ ಅಪ್ಡೇಟ್ ನೀಡಿರಲಿಲ್ಲ. ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಮೋಸ ಹೋಗಿದ್ದೇನೆ. ಸಾಲವನ್ನು ವಾಪಸ್​ ನೀಡುವಂತೆ ಹಲವು ಬಾರಿ ಕೇಳಿಕೊಂಡರೂ ಯಾವುದೇ ಪ್ರಯೋಜನ ಕೂಡ ಆಗಿಲ್ಲ. ಹೀಗಾಗಿ ದೂರು ದಾಖಲಿಸಿರುವುದಾಗಿ ವಿಜಯ್​ ಹೇಳಿಕೊಂಡಿದ್ದಾರೆ. ವಿಜಯ್ ಅವರು ನಿರ್ಮಾಪಕನ ವಿರುದ್ಧ ದೂರನ್ನು ಆನ್ಲೈನ್ (Online) ನಲ್ಲಿ ದಾಖಲು ಮಾಡಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗವು ಈ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆಯಲ್ಲಿ ತೊಡಗಿಕೊಂಡಿದೆ.

ನಿರ್ಮಾಣ ಕಂಪೆನಿ ಲಿಬ್ರಾ ಪ್ರೊಡಕ್ಷನ್​ನ ಮಾಲೀಕ (Production Owner) ರವೀಂದರ್ ಚಂದ್ರಶೇಖರ್ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕುತ್ತಿದೆ. ಇತ್ತ ವಿಚಾರಣೆಯ ನೋಟಿಸ್ ಬಂದ ಕೂಡಲೇ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆವಿಜಯ್ ಹಾಗೂ ನಿರ್ಮಾಪಕ ರವೀಂದರ್ ಅವರು ನೀಡಿರುವ ಸಾಕ್ಷ್ಯಗಳುಹಾಗೂ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣವು ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *