ಆಗಷ್ಟೇ ಮದುವೆ ಆಗಿದ್ದೆ, ಮಲ್ಲ ಸಿನೆಮಾ ಬಿಡುಗಡೆ ಆಗಿತ್ತು, ನಾನು ಟಾರ್ಗೆಟ್ ಆಗಿದ್ದೆ, ಅಂದು ನಡೆದ ಘಟನೆಯ ಬಗ್ಗೆ ಎಲ್ಲವನ್ನೂ ಹೊರ ಹಾಕಿದ ನಟಿ ಪ್ರಿಯಾಂಕ! ಹೇಳಿದ್ದೇನು ನೋಡಿ!!

ಕನ್ನಡ ಸಿನಿಮಾಲೋಕಲ್ಲಿ ಪ್ರೇಮ ಲೋಕವನ್ನು ಸೃಷ್ಟಿಸಿದವರು ರವಿಚಂದ್ರನ್. ಪರಭಾಷಾ ಚಿತ್ರರಂಗದ ಕೆಲವು ತಾರೆಗಳನ್ನು ಹಾಕಿಕೊಂಡು ಸಿನಿಮಾವನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಇವರ ಬಹುತೇಕ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಇದ್ದೆ ಇರುತ್ತಿದ್ದವು. ಅಂದಹಾಗೆ, ಇವರ ಅಭಿನಯದ ಮಲ್ಲ ಸಿನಿಮಾವು ಹೆಚ್ಚು ಸದ್ದು ಮಾಡಿದ ಸಿನಿಮಾವಾಗಿತ್ತು. ಹೌದು, ನಟಿ ಪ್ರಿಯಾಂಕಾ ಉಪೇಂದ್ರ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಆ ಕಾಲಕ್ಕೆ ಈ ಸಿನಿಮಾ ಹಿಟ್ ಆಗಿ ಭಾರಿ ಕಲೆಕ್ಷನ್ ಗಳಿಸಿತ್ತು. ಪ್ರಿಯಾಂಕಾ ಉಪೇಂದ್ರ ಹಾಗೂ ರವಿಚಂದ್ರನ್ ಅವರ ಕಾಂಬಿನೇಷನ್ ವರ್ಕೌಟ್ ಆಗಿ, ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟಿ ಪ್ರಿಯಾಂಕಾ ಉಪೇಂದ್ರರವರು, ರವಿಚಂದ್ರನ್ ಗೆ ಜೋಡಿಯಾಗಿ ಕಾಣಿಸಿಕೊಂಡರೆ, ಇನ್ನು ಕೋಟಿ ರಾಮು ಅವರು ನಿರ್ಮಾಣ ಮಾಡಿದ್ದರು. ಇನ್ನು ಅನೇಕರ ತಾರಾಬಳಗವನ್ನು ಹೊಂದಿದ್ದ ಈ ಸಿನಿಮಾವು 2004 ರಲ್ಲಿ ಬಿಡುಗಡೆಯಾಯಿತು.

ಅಷ್ಟು ಮಾತ್ರವಲ್ಲದೇ, ಐದು ವರ್ಷಗಳಿಗೂ ಹೆಚ್ಚು ದಿನ ಹೌಸ್ ಫುಲ್, ಬರೋಬ್ಬರಿ ಎಂಟು ಕೋಟಿ ಕಲೆಕ್ಷನ್ ಮಾಡುವ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರರವರು ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಈ ಸಿನಿಮಾದ ನಿರ್ಮಾಣದ ಸಮಯದಲ್ಲಿಯೇ ಪ್ರಿಯಾಂಕ ಉಪೇಂದ್ರ ಅವರನ್ನು ಮದುವೆಯಾದರು. ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಪ್ರಿಯಾಂಕ ಅವರ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿದ್ದರು.

ರವಿಚಂದ್ರನ್ ಅವರು ಪ್ರಿಯಾಂಕ ಅವರನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ದಾರೆ ಎಂದು ಉಪೇಂದ್ರರವರ ಬಳಿ ಹೇಳಿದ್ದರು. ಇದರಿಂದ ರಿಯಲ್ ಸ್ಟಾರ್ ಉಪೇಂದ್ರ ಕೂಡ ವಿಚಲಿತರಾಗಿದ್ದರು. ಇನ್ನು ಈ ಸಿನಿಮಾದಲ್ಲಿ ಪ್ರಿಯಾಂಕಾಅವರು ಈ ಸಿನಿಮಾದಲ್ಲಿ ನಟಿಸುವಾಗ ಉಪೇಂದ್ರ ಅವರನ್ನು ಕೇಳಿಯೇ ನಟಿಸಿದ್ದರು. ಆದರೂ ಸಿನಿಮಾ ರಿಲೀಸ್ ಆದ ಬಳಿಕ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಕೆಲವರ ಮಾತುಗಳು ಪ್ರಿಯಾಂಕಾರವರಿಗೆ ನೋವುಂಟು ಮಾಡಿತ್ತು..

ಈ ಬಗ್ಗೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಲ್ಲ ಸಿನಿಮಾದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ ನಾನು ಮಲ್ಲ ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೆ ಇದರ ಬಗ್ಗೆ ನನಗೆ ಪಶ್ಚಾತಾಪವೇನು ಇಲ್ಲ. ಆದರೆ ಆ ಆರು ತಿಂಗಳು ನಾನು ಸ್ವಲ್ಪ ಡಿಸ್ಟರ್ಬ್ ಆಗಿದ್ದೆ. ಜನ ಆಗ ನನ್ನನ್ನೇ ಟಾರ್ಗೆಟ್ ಮಾಡಿದ್ರು. ನಾನು ಹೆಚ್ 2 ಓ ಸಿನಿಮಾದಲ್ಲಿಯೂ ಕೂಡ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೆ ಅದರ ಬಗ್ಗೆ ಯಾರು ಮಾತನಾಡಲಿಲ್ಲ. ಆದರೆ ಮಲ್ಲ ಬಗ್ಗೆ ಮಾತನಾಡಿದರು.

ನಾನು ಅಬ್ರಾಡ್ ನಲ್ಲಿ ಬೆಳೆದಿದ್ದು ಹಾಗಾಗಿ ನನಗೆ ಇದು ದೊಡ್ಡ ವಿಷಯ ಎನಿಸಲಿಲ್ಲ. ನಿಜ ಹೇಳಬೇಕು ಅಂದ್ರೆ ನಾನು ಆ ಸಿನಿಮಾದಲ್ಲಿ ಚೆನ್ನಾಗಿಯೇ ಕಾಣುತ್ತಿದ್ದೆ. ರವಿ ಸರ್ ಜೊತೆ ಸಿನಿಮಾ ಮಾಡೋದಕ್ಕೆ ಖುಷಿ ಇದೆ. ಅವರು ಅತ್ಯುತ್ತಮ ನಿರ್ಮಾಪಕ. ಈಗಲೂ ಅವಕಾಶ ಸಿಕ್ಕರೆ ನಾನು ರವಿ ಸರ್ ಜೊತೆ ಮತ್ತೆ ನಟಿಸುತ್ತೇನೆ. ಮದುವೆಯ ನಂತರವೂ ಕ್ರೇಜಿ ಸ್ಟಾರ್ ಸಿನಿಮಾದಲ್ಲಿಯೂ ರವಿ ಸರ್ ಜೊತೆ ಅಭಿನಯಿಸಿದ್ದೇನೆ.

ಇದಕ್ಕೆ ಉಪೇಂದ್ರ ಅವರಿಂದಲೂ ಯಾವುದೇ ವಿರೋಧ ಇಲ್ಲ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೂ ಜನ ಆ ಸಮಯದಲ್ಲಿ ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಬೇಸರ ಇದೆ” ಎಂದಿದ್ದಾರೆ.. ಅದೇನೇ ಇರಲಿ ಗ್ಲಾಮರಸ್ ಪಾತ್ರಕ್ಕೂ ಸೈ. ಟ್ರೆಡಿಶನಲ್ ಪಾತ್ರಕ್ಕೂ ಸೈ ಎನ್ನುವ ನಟಿ ಪ್ರಿಯಾಂಕಾ ಉಪೇಂದ್ರ ಸದ್ಯಕ್ಕೆ ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *