ಮನೆಗೆ ಬಂದ ಪ್ರೀತಿಯ ತಂಗಿಗೆ ಈರುಳ್ಳಿ ಬಜ್ಜಿ ಪಲಾವ್ ಮಾಡಿ ಕೊಟ್ಟ ಅಶ್ವಿನಿ! ಸೀರಿಯಲ್ ಅಕ್ಕ ತಂಗಿಯ ಭಾಂದವ್ಯ ಹೇಗಿದೆ ನೋಡಿ!!

ಗಟ್ಟಿಮೇಳ’ (Gattimela) ಧಾರಾವಾಹಿ ಖ್ಯಾತಿಯ ಪ್ರಿಯಾ ಜೆ ಆಚಾರ್ (Priya J Achar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತೆರೆ ಮೇಲೆ ತನ್ನ ಮುದ್ದು ಮುದ್ದಾದ ನಟನೆಯಲ್ಲಿ ಎಲ್ಲರ ಮನಸ್ಸು ಗೆದ್ದುಕೊಂಡರೆ, ಸೋಶಿಯಲ್ ಮೀಡಿಯಾ ದಲ್ಲಿ ರೀಲ್ಸ್ (Reels) ಎಂದು ನೆಟ್ಟಿಗರ ಹೃದಯವನ್ನು ಗೆದ್ದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಈ ನಟಿ ಕನ್ನಡ ಕಿರುತೆರೆಯ ಜನಪ್ರಿಯ ನಟ ಸಿದ್ದು ಮೂಲಿಮನಿ (Siddhu Mulimane) ಯವರನ್ನು ವಿವಾಹವಾಗಿದ್ದಾರೆ.

ವೃತ್ತಿ ಬದುಕಿನ ಜೊತೆಗೆ ಸಂಸಾರಿಕ ಜೀವನವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ.ಹೌದು ಪ್ರಿಯಾ ಜೆ ಆಚಾರ್ ಅವರದ್ದು ಯೂ ಟ್ಯೂಬ್ ಚಾನೆಲ್ ( You Tube Chanel) ಇದ್ದು, ಇದರಲ್ಲಿ ಬಿಡುವು ಸಿಕ್ಕಾಗಲೆಲ್ಲಾ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತಾರೆ. ಅಕ್ಕ ಮನೆಗೆ ತೆರಳಿ ಅಕ್ಕ ಮನೆಯಲ್ಲಿ ವಿಡಿಯೋ ಮಾಡಿದ್ದಾರೆ.

ಹೌದು ಅಕ್ಕನ ಮನೆಯಲ್ಲಿ ಪ್ರಿಯಾ ಜೆ ಆಚಾರ್ ಅವರು ಒಂದು ದಿನ ಕಳೆದಿದ್ದಾರೆ. ಪ್ರಿಯಾ ಜೆ ಆಚಾರ್ ಅವರ ಅಕ್ಕನ ಹೆಸರು ಅಶ್ವಿನಿ (Ashwini). ಈ ವಿಡಿಯೋದಲ್ಲಿ ಪ್ರಿಯಾ ಜೆ ಆಚಾರ್ ಅವರು ಅಕ್ಕನ ಜೊತೆಗೆ ಸಮಯ ಕಳೆದಿದ್ದಾರೆ. ನಟಿಯ ಈ ವಿಡಿಯೋ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮದುವೆಯಾದ ಬಳಿಕ ಪ್ರಿಯಾ ಹಾಗೂ ಸಿದ್ದು ಮೂಲಿಮನಿ ದುಬೈ ಪ್ರವಾಸ (Dubai Trip) ಎಂಜಾಯ್ ಮಾಡಿದ್ದರು.

ದುಬೈಗೆ ಹಾರುವುದಕ್ಕಿಂತ ಮುನ್ನ ಬೆಂಗಳೂರಿನ ಅಂತರಾಷ್ಟ್ರೀಯ ಏರ್‌ಪೋರ್ಟ್‌ (Banglore International Airport) ನಿಂದ ಪ್ರವಾಸದ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಶುರು ಮಾಡಿದ್ದರು. ಪ್ರಿಯಾ ದುಬೈ ಪ್ರವಾಸವನ್ನು ತನ್ನ ಕುಟುಂಬದ ಜೊತೆಗೆ ಎಂಜಾಯ್ ಮಾಡಿದ್ದರು. ಪತಿ ಸಿದ್ದು ಮೂಲಿಮನಿ ಹಾಗೂ ಕುಟುಂಬದೊಂದಿಗೆ ದುಬೈ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದರು.

ದುಬೈನಲ್ಲಿ ಸುತ್ತಿದ ಪ್ರಿಯಾ ಮತ್ತು ಸಿದ್ದು ಸಖತ್ ಎಂಜಾಯ್ ಮಾಡಿದ್ದರು. ದುಬೈ ಪ್ರವಾಸದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.ಮದುವೆಯಾದ ಬಳಿಕ ಸಿದ್ದು ಮೂಲಿಮನಿ ದಂಪತಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಪ್ರೇಮೋತ್ಸವ (Suvarna Premostava) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ‘ಸುವರ್ಣ ಪ್ರೇಮೋತ್ಸವ’ದಲ್ಲಿ ಸಿದ್ಧು ಮತ್ತು ಪ್ರಿಯಾ ಹಂಚಿಕೊಂಡಿದ್ದರು. “ಮದುವೆ ಮಾತಕತೆ ಬರುವ ತನಕ ನಾವು ಪ್ರೀತಿ ವಿಚಾರ ಮಾತನಾಡಿರಲಿಲ್ಲ. ಅಟ್ರ್ಯಾಕ್ಷನ್‌ಗೂ ಮೀರಿದ ಪ್ರೀತಿ ಇತ್ತು ಪದಗಳಲ್ಲಿ ಅದನ್ನು ವರ್ಣಿಸಲು ಆಗುತ್ತಿರಲಿಲ್ಲ. ಮನೆಯವರಿಗೆ ಗೊತ್ತಾಗಿ ಮುಂದುವರೆದಿದ್ದು ನನಗೆ ನಾಚಿಕೆ ಇತ್ತು ಹೇಳಿಕೊಳ್ಳಲು. ತಂದೆ ತಾಯಿ ಬಳಿ ನಮಗೆ ನಾಚಿಕೆ ಇರಲಿಲ್ಲ ನಮ್ಮಿಬ್ಬರ ನಡುವೆ ನಾಚಿಕೆ ಇತ್ತು.

ಮೊದಲು ಸಿದ್ಧು ಮನೆಯಲ್ಲಿ ವಿಚಾರ ತಿಳಿಸಿದ್ದು ಆನಂತರ ನಾನು ಮನೆಯಲ್ಲಿ ಮಾತನಾಡಿದೆ ಆದರೆ ನಾವಿಬ್ಬರೂ ಮಾತನಾಡಿಕೊಂಡಿರಲಿಲ್ಲ’ ಎಂದಿದ್ದರು.”ನನಗೆ ಕವಿಗೆ ಬರೆಯುವ ಹುಚ್ಚು ಹೆಚ್ಚಿಗೆ ಪ್ರಿಯಾಗೋಸ್ಕರ ಬರೆದು ಕಳುಹಿಸುತ್ತಿದ್ದೆ. ಹೇಗ್ ಹೇಗೋ ಓದಬಾರದು ಎಂದು ನಾನೇ ರೆಕಾರ್ಡ್‌ ಮಾಡಿ ಮ್ಯೂಸಿಕ್ ಹಾಕಿ ಕಳುಹಿಸುತ್ತಿದ್ದೆ. ತಂದೆ ತಾಯಿ ಮತ್ತು ತಂಗಿ ಜೊತೆ ಪ್ರಿಯಾ ಪ್ರಯಾಣ ಮಾಡುವಾಗ ಹಾಡು ಕೇಳಿಸಿಕೊಳ್ಳಬೇಕು ಎಂದು ಮೊಬೈಲ್‌ನ ಕಾರಿನ ಕನೆಕ್ಟ್‌ ಮಾಡಿದ್ದರು. ಆಗ ನಾನು ಕಳುಹಿಸಿದ ಕವಿತೆ ಬಂದಿದೆ.

ನನ್ನ ಭಾವನೆಗಳನ್ನು ಅ ಕವಿತೆಯಲ್ಲಿ ಹೇಳಿದೆ..ಇದನ್ನು ಅವರ ತಂದೆ ಕೇಳಿಸಿಕೊಂಡಿದ್ದಾರೆ. ಎರಡು ಗಂಟೆ ಪ್ರಯಾಣ ಮುಗಿದ ಮೇಲೆ ಈ ಘಟನೆ ಬಗ್ಗೆ ತಂದೆ ಚರ್ಚೆ ಮಾಡಿದ್ದು. ನಮ್ಮ ತಂದೆ ಅವರ ತಂದೆ ಭೇಟಿ ಮಾಡಿದ ಮೇಲೆ ಮದುವೆ ಚರ್ಚೆ ಶುರು ಮಾಡಿದ್ದು’ ಎಂದಿದ್ದರು. ಸದ್ಯಕ್ಕೆ ಕಿರುತೆರೆಯ ಈ ಮುದ್ದಾದ ಜೋಡಿ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನು ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

Leave a Reply

Your email address will not be published. Required fields are marked *