Prema marriage : ನಟಿ ಪ್ರೇಮಾ ಎಲ್ಲರಿಗೂ ಪರಿಚಯ ಇರುವ ನಟಿ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿದ್ದಾರೆ. ಇವರು 1995 ರಲ್ಲೀ ನಟ ಶಿವರಾಜ್ ಕುಮಾರ್ ಅವರ ಸವ್ಯಸಾಚಿ’ ಮತ್ತು ರಾಘವೇಂದ್ರ ರಾಜಕುಮಾರ್ ಅವರ ಆಟ ಹುಡುಗಾಟ ಚಿತ್ರದಿಂದ ತಮ್ಮ ಮೊದಲ ಸಿನಿ ಪಯಣ ಆರಂಭಿಸಿದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆ ಕಾಲದ ಜನಪ್ರಿಯ ನಟಿಗಳಲ್ಲಿ ಇವರು ಕೂಡ ಒಬ್ಬರು.ಶಿವಣ್ಣರವರ `ಓಂ’ ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996 ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ’ ಚಿತ್ರದಲ್ಲಿ ಅದ್ಭುತವಾಗಿ ನಟಿ ಜನರ ಮನಸ್ಸನ್ನು ಕದ್ದರು.ಇವರು ಜನಿಸಿದ್ದು,1977 ಜನೇವರಿ 6 ರಂದು ಕೊಡಗಿನ ನೆರವಂಡ ಕುಟುಂಬದಲ್ಲಿ . ಇವರು ಮೂರ್ನಾಡು ಜೂನಿಯರ್ ಕಾಲೇಜಿನಿಂದ ಪಿಯುಸಿ ಮುಗಿಸಿದರು.
ನಟಿ ಅವರು ಪ್ರೇಮಾ ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿಕೊಂಡಿದ್ದು ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿದ್ದಾರೆ.ನಟಿ ಪ್ರೇಮಾ ಅವರು ಕನ್ನಡ ಮಾತ್ರವಲ್ಲ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿ ಅಲ್ಲಿಯೂ ತಮ್ಮ ಅಭಿನಯದಿಂದ ಸಿನಿಪ್ರಿಯರ ಮನಸು ಕದ್ದರು. `ನಾನು ನನ್ನ ಹೆಂಡ್ತೀರು’,
‘ಯಜಮಾನ’ ,`ಕನಸುಗಾರ’,`ಆಪ್ತಮಿತ್ರ’ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ `ಸಿಂಗಾರೆವ್ವ’ ಎಂಬ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಸುಮಾರು ಏಳು ಚಿತ್ರಗಳಲ್ಲಿ ನಟಿಸಿದ್ದಾರೆ. 2006 ರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾದ ಇವರು ತಮ್ಮ ಸಿನಿಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿದರು. ನಂತರ 2009 ರಲ್ಲಿ `ಶಿಶಿರ’ ಎಂಬ ಚಿತ್ರದಲ್ಲಿ ನಟಿಸಿದರು.
ನಟಿ ಪ್ರೇಮಾ ಅವರು ಸುಮಾರು 70 ಕ್ಕೂ ಹೆಚ್ಚು ಕನ್ನಡ ಮತ್ತು 28 ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2016 ರಲ್ಲಿ ತಮ್ಮ ಹತ್ತು ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿ ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು.ಇವರ ದಾಂಪತ್ಯ ಜೀವನ 2016ಕ್ಕೆ ಮುಕ್ತಾಯವಾಯಿತು.
ಹಲವು ವರ್ಷಗಳಿಂದ ವಿಚ್ಚೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದರು. ಈಗ ಎರಡನೇ ಮದುವೆ ಆಗಲು ನಿರ್ಧರಿಸಿದ್ದಾರೆ.ಕಂಕಣ ಭಾಗ್ಯ ಕರುಣಿಸುವಂತೆ ಕಾಪು ಕೊರಕಜ್ಜ ಸನ್ನಿಧಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಇವರ ಜೊತೆ ಇವರ ತಮ್ಮ ಅಯ್ಯಪ್ಪ ಮತ್ತು ಇವರ ಪತ್ನಿ ಅನು ಅಯ್ಯಪ್ಪ ಕೂಡಾ ಇದ್ದರು. ಇವರು ಹೋಗಿ ಪ್ರಾರ್ಥನೆ ಸಲ್ಲಿಸಿದ್ದು ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿಯಲ್ಲಿ.