ಸ್ನೇಹಿತನಿಂದ ಆತನ ಸುಂದರವಾದ ಹೆಂಡತಿಯನ್ನು ದೂರ ಮಾಡಿ, ತಾನು ಆಕೆಯ ಜೊತೆ ಮಂಚದಾಟ ಆಡುತ್ತಿದ್ದ ಯುವಕ! ಮಗುವನ್ನು ಮುಂದೆ ಇಟ್ಕೊಂಡು ಎಂತಾ ಆಟ ಆಡಿದ್ದಾರೆ ನೋಡಿ!!

ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಹಾಗೂ ನಾವು ಬೇರೆಯವರಿಂದ ಕೇಳುವ ಘಟನೆಗಳು ಮನುಷ್ಯನ ಮನಸ್ಥಿತಿಯೂ ಇತ್ತ ಸಾಗಿದೆ ಪ್ರಶ್ನೆಯೊಂದನ್ನು ಹುಟ್ಟುಹಾಕಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಮನುಷ್ಯನು ಬಬೇರೆ ವಿಚಾರದಲ್ಲಿ ಬಿಡಿ, ಸಂಬಂಧಗಳ ವಿಚಾರದಲ್ಲಿ ನಂಬಿಕೆಗೆ ದ್ರೋ-ಹ ಬಗೆಯುತ್ತಿದ್ದಾನೆ ಎನ್ನುವುದು ವಿಷಾದನೀಯವಾದ ಸಂಗತಿ.

ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಬೆಚ್ಚಿ ಬೀಳಿಸುವಂತೆ ಮಾಡಿದೆ. ಸ್ನೇಹಿತನೆಂದುಕೊಂಡವನೇ, ಸ್ನೇಹಿತನ ಪತ್ನಿಯೊಂದಿಗೆ ಸಂಬಂಧದಲ್ಲಿದ್ದು, ಆಕೆಯನ್ನು ಮದುವೆಯಾಗಿದ್ದಾನೆ. ಅದಲ್ಲದೇ ಇದೀಗ ಮೊದಲ ಗಂಡನ ಮಗನನ್ನು ಜೀವವನ್ನು ತೆಗೆದ ಪ್ರಕರಣವೊಂದು ಬಾಗಲೂರಿನಲ್ಲಿ ಬೆಳಕಿಗೆ ಬಂದಿದ್ದು ಎಲ್ಲರಿಗೂ ಶಾಕ್ ನೀಡಿದೆ.

ಹೌದು, ಈ ಪ್ರವೀಣ್ ಮತ್ತು ಸಂಪತ್​​ ಇಬ್ಬರು ಸ್ನೇಹಿತರಾಗಿದ್ದು, ಆಗಾಗ ಪ್ರವೀಣ್​ ತನ್ನ ಮನೆಗೆ ಸ್ನೇಹಿತನನ್ನು ಕರೆದುಕೊಂಡು ಬರುತ್ತಿದ್ದನು. ಪ್ರವೀಣ್ ನಂಬಿದ್ದ ಸ್ನೇಹಿತ ಸಂಪತ್ ಅವರ ಸಂಸಾರವನ್ನು ಒಡೆದಿದ್ದಾನೆ. ಪ್ರವೀಣ್ ಪತ್ನಿಯೊಂದಿಗೆ ಸಂಪತ್​ ಸಂಬಂಧ ಹೊಂದಿದ್ದನು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪ್ರವೀಣ್​ ತನ್ನ ಹೆಂಡತಿ ಪುಷ್ಪಗೆ ಡೈವೋರ್ಸ್ ನೀಡಿದ್ದಾನೆ.

ಈ ಪ್ರವೀಣ್ ಟಿಪ್ಪರ್ ಲಾರಿ ಡ್ರೈವರ್ ಆಗಿದ್ದನು. ಈ ಪ್ರವೀಣನು ಸ್ನೇಹಿತ ಸಂಪತ್​ನನ್ನು ಕಣ್ಣು ಮುಚ್ಚಿ ನಂಬಿಬಿಟ್ಟಿದ್ದ. ಇತ್ತ ಪ್ರವೀಣ್ ಪತ್ನಿ ಪುಷ್ಪ ಜೊತೆಗೆ ಸಂಬಂಧ ಹೊಂದಿದ್ದು, ಪ್ರವೀಣ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಸಂಪತ್​​ ಯಾವಾಗಲೂ ಮನೆ ಬರುತ್ತಿದ್ದನು. ಈ ವಿಚಾರವು ತಿಳಿಯುತ್ತಿದ್ದಂತೆ ಪ್ರವೀಣ್ ಪುಷ್ಪನಿಂದ ದೂರವಾಗಲು ಮುಂದಾದ. ಹೀಗಾಗಿ ಪ್ರವೀಣ್ ಪುಷ್ಪಗೆ ಡೈವೋರ್ಸ್ ನೀಡಿದ್ದನು.

ಆದಾದ ತಕ್ಷಣವೇ ಈ ಸಂಪತ್ ಪುಷ್ಪಳನ್ನು ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾದನು. ಪುಷ್ಪಳ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆದ ಸಂಪತ್​ ಕೆಜಿಎಫ್ ನಲ್ಲಿದ್ದನು. ಈ ಪುಷ್ಟ ಮಾತ್ರ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಳು. ಹೀಗಿರುವಾಗಲೇ ಪುಷ್ಪಳ ಮೇಲೆ ಸಂಪತ್ ಪದೇ ಪದೇ ಅ-ನುಮಾನ ಪಡುತ್ತಿದ್ದು, ಈ ವಿಚಾರವಾಗಿ ಜಗಳ ಮಾಡುತ್ತಿದ್ದನು. ಇದರಿಂದ ಮಾನಸಿಕವಾಗಿ ನೊಂದಿದ್ದ ಪುಷ್ಪ ಸಂಪತ್ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಳು.

ಹೀಗಿರುವಾಗ ಸಂಪತ್ ಪುಷ್ಪಳ ಮನೆಯ ಬಳಿ ಸಾಕಷ್ಟು ಬಾರಿ ಹೋಗಿದ್ದ, ಆದರೆ ಸಂಪತ್ ಗೆ ಮಾತ್ರ ಪುಷ್ಪ ಸಿಕ್ಕಿರಲಿಲ್ಲ. ಹೀಗಿರುವಾಗ ಸಂಪತ್ ತಲೆಯಲ್ಲಿ ಕೆ-ಟ್ಟವಾದ ಯೋಚನೆಯೊಂದು ಓಡಾಡಲು ಶುರುವಾಗಿದೆ. ಅದುವೇ ಮಕ್ಕಳನ್ನು ಇಟ್ಟುಕೊಂಡು ಬ್ಲಾ-ಕ್ ಮೇಲ್ ಮಾಡುವುದು. ಹೀಗಾಗಿ ಮೊದಲು ಮನೆ ಬಳಿ ಪುಷ್ಪ ಮಗಳನ್ನು ಕರೆದು ಕೊಂಡು ಹೋಗಲು ಪ್ರಯತ್ನ ಮಾಡಿದ್ದನು. ಆದರೆ ಪುಷ್ಪಳ ಮಗಳು ಬರಲು ಕೇಳಿರಲಿಲ್ಲ.

ತದನಂತರದಲ್ಲಿ ಪುಷ್ಪ ಮಗ ಚೇತನ್ ರೆಡ್ಡಿಯನ್ನು ಕಿ-ಡ್ನಾಪ್ ಮಾಡಲು ಮುಂದಾದ. ಹೌದು, ಪ್ರವೀಣ್ ಪುತ್ರ ಚೇತನ್ ರೆಡ್ಡಿಯನ್ನು ಪುಷ್ಪ ಚಿಲ್ಡ್ರನ್ ವುಡ್ ಕೇಂದ್ರಕ್ಕೆ ಸೇರಿಸಿದ್ದಳು. ಇತ್ತ ಸಂಪತ್ ಚೇತನ್​​ಗೆ ಬಿರಿಯಾನಿ ಹಾಗೂ ಚಾಕಲೇಟ್ ಕೊಡಿಸುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದ. ತದನಂತರ ಪುಷ್ಪಳಿಗೆ ಕರೆ ಮಾಡಿದ್ದು, ಪುಷ್ಪ ಸಂಪತ್ ನಂಬರ್ ಬ್ಲಾಕ್ ಮಾಡಿದ್ದರಿಂದ ಕಾಲ್ ರಿಸೀವ್ ಮಾಡಿರಲಿಲ್ಲ.

ಆದರೆ ಈ ಸಂಪತ್ ಮಾತ್ರ ಪುಷ್ಪಳಿಗೆ ಬುದ್ಧಿ ಕಲಿಸುವುದಕ್ಕೆ, ​​ ಅಲ್ಲೇ ಪಕ್ಕದಲ್ಲಿದ್ದ ಕೆರೆಗೆ ಚೇತನ್ ನನ್ನ ತಳ್ಳಿದ್ದನು. ಹೀಗಿರುವಾಗ ಮಗನನ್ನು ಸಂಪತ್​ ಕರೆದುಕೊಂಡು ಹೋಗಿದ್ದಾನೆಂದು ಪ್ರವೀಣ್ ಹಾಗೂ ಪುಷ್ಪಗೆ ತಿಳಿದಿದೆ. ಹೀಗಾಗಿ ಸಂಜೆ ಪ್ರವೀಣ್ ಮತ್ತು ಪುಷ್ಪ ಇಬ್ಬರು ಸಂಪತ್ ಬಳಿ ನನ್ನ ಮಗ ಎಲ್ಲಿ ಎಂದೂ ಕೇಳಿದ್ದು, ನನಗೆ ಗೊತ್ತಿಲ್ಲ ಎಂದು ರೂಂ ಸೇರಿದವನು ಪಾಲಿಡಾಲ್ ಕುಡಿದಿದ್ದನು.

ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆಯಾದ ಒಂದು ವಾರದ ಬಳಿಕ ಅಸಲಿ ವಿಚಾರಗಳು ಹೊರ ಬಿದ್ದಿದೆ. ಹೌದು,ಕೆರೆಯಲ್ಲಿ ಹುಡುಕಾಟ ನಡೆಸಿದಾಗ 9 ದಿನಗಳ ನಂತರ ಚೇತನ್ ಮೃ-ತ ದೇಹ ಪತ್ತೆಯಾಗಿದೆ. ಈ ಪ್ರಕರಣ ದಾಖಲಿಸಿ ಕೊಂಡಿದ್ದ ಬಾಗಲೂರು ಪೊಲೀಸರಿಂದ ಆರೋಪಿ ಸಂಪತ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *