ಪುನೀತ್ ರಾಜ್ ಕುಮಾರ್ ಅವರನ್ನು ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅಪ್ಪು ದೈಹಿಕವಾಗಿ ಇಲ್ಲದೇನೆ ಅಕ್ಟೋಬರ್ 29 ಕ್ಕೆ ಒಂದು ವರ್ಷವಾಗಿದೆ. Puneeth ಅಂದಹಾಗೆ, ವೈಯುಕ್ತಿಕ ಬದುಕಿನಲ್ಲಿ ಹಾಗೂ ಸಿನಿಮಾ ಬದುಕಿನಲ್ಲಿ ಯಾರೊಂದಿಗೂ ಮನಸ್ತಾಪವನ್ನು ಮಾಡಿಕೊಳ್ಳದ ಮಹಾನುಭಾವ. ಅದರ ಜೊತೆಗೆ, ಸಮಾಜ ಮುಖಿ ಕೆಲಸಗಳನ್ನು ಮಾಡಿದರೂ ಎಂದಿಗೂ ಪ್ರಚಾರವನ್ನು ಇಷ್ಟ ಪಟ್ಟವರಲ್ಲ.
ಅಪ್ಪು ಒಬ್ಬ ಸ್ಟಾರ್ ನಟ ಮಾತ್ರವಲ್ಲ, ಅದಕ್ಕಿಂತ ಮಿಗಿಲಾಗಿ ಹೃದಯವಂತ ವ್ಯಕ್ತಿ. ಯಾವುದೇ ಸ್ವಾರ್ಥವನ್ನು ಇಟ್ಟು ಕೊಳ್ಳದೇ ಮಾಡಿದ ಸೇವೆಗಳಿಂದ ಅಪ್ಪುವನ್ನು ದೇವರ ಸ್ಥಾನದಲ್ಲಿಟ್ಟು ಅಭಿಮಾನಿಗಳು ಪೂಜಿಸುತ್ತಿದ್ದಾರೆ. ಇವತ್ತಿಗೂ ಅಪ್ಪುವಿನ ಗುಣವನ್ನು ಹೊಗಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇವತ್ತಿಗೂ ಕೂಡ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.
ಅಪ್ಪು ಎಲ್ಲರೊಂದಿಗೂ ಕೂಡ ಬೆರೆಯುತ್ತಿದ್ದರು. ಪುನೀತ್ ಅವರ ಆಪ್ತರಲ್ಲಿ ಜರ್ನಲಿಸ್ಟ್ ಹಾಗೂ ಬಿಗ್ ಬಾಸ್ ಮನೆಯ ಸ್ಪರ್ಧಿಯು ಆಗಿದ್ದ ಪ್ರಶಾಂತ ಸಂಬರಗಿ ಕೂಡ ಒಬ್ಬರಾಗಿದ್ದರು. ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ ತನ್ನ ಹಾಗೂ ಅಪ್ಪು ನಡುವಿನ ಸ್ನೇಹದ ಬಗ್ಗೆ ಬಹಿರಂಗ ಪಡಿಸಿದ್ದರು. ಅಪ್ಪುವಿನ ಹವ್ಯಾಸ ಹಾಗಿ ಸಾವಿನ ಅಸಲಿ ಸತ್ಯ ವನ್ನು ರಿವೀಲ್ ಮಾಡಿದ್ದರು. Puneeth
ಅಂದಹಾಗೆ, ಕಾರ್ ಹಾಗೂ ಸೈಕಲ್ ಕ್ರೇಜ್ ಅಪ್ಪುಗೆ ಇತ್ತು. ಹೀಗಾಗಿ ಬೆಂಗಳೂರಿಗೆ ಯಾವುದೇ ಹೊಸ ಮಾಡೆಲ್ ಕಾರ್ ಪ್ರವೇಶ ಮಾಡಿದ್ರು ಮೊದಲು ಅದರ ಟೆಸ್ಟಿಂಗ್ ಗೆ ಅಪ್ಪು ಅವರನ್ನೇ ಅಪ್ರೋಚ್ ಆಗುತ್ತಿದ್ದರು. ಇನ್ನು ಹೀಗೆ ಯಾವುದೇ ಕಾರ್ ಕಂಪನಿ ಪುನೀತ್ ಅವರನ್ನ ಮೀಟ್ ಆಗ್ಬೇಕು ಅಂದ್ರೆ ಪ್ರಶಾಂತ್ ಸಂಬರಗಿಯವರೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ.

ಮಾಧ್ಯಮದೊಂದಿಗೆ ಮಾತನಾಡಿದ್ದ, ಪ್ರಶಾಂತ್ ಸಂಬರ್ಗಿ,’ ನಾವಿಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ವಿ ಅವರ ಜೊತೆಗೆ ಕಳೆದ ಸಮಯ ನಿಜಕ್ಕೂ ಅದ್ಭುತ ಅದು ಗೋಲ್ಡನ್ ಡೇಸ್. ನಾನು ಪುನೀತ್ ಜೊತೆಗೆ ಇರುವ ಫೋಟೋಗಳನ್ನು ಯಾರಾದರೂ ನನಗೆ ಕಳಿಸಿ ನೀವು ಈ ಸಮಾರಂಭದಲ್ಲಿ ಒಟ್ಟಿಗೆ ಇದ್ದರೆ ನೋಡಿ ಅಂತ ಹೇಳಿದಾಗ ನನಗೆ ನಿಜಕ್ಕೂ ಖುಷಿ ಅನ್ನಿಸುತ್ತೆ. ಸಾ ವು ಯಾರಿಗೆ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಯಾಕಂದ್ರೆ ನಾನು ಹಾಗೂ ಪುನೀತ್ ಅವರು ಸೇರಿ ಒಂದು ಸಿನಿಮಾ ಮಾಡುವುದಿತ್ತು.
ಈ ಬಗ್ಗೆ ಅವರೊಂದಿಗೆ ನಾನು ಮಾತನಾಡಿದ್ದೆ. ಅಕ್ಟೋಬರ್ 2 ನನಗೆ ಕರೆ ಮಾಡಿ ಮುಂಬೈನ ನಿರ್ಮಾಪಕರನ್ನು ಕರೆದುಕೊಂಡು ಬರುವಂತೆ ಪುನೀತ್ ಹೇಳಿದ್ರು. ಅದಾಗಿ 10 ದಿನ ಕಳೆದ ನಂತರ ಒಂದು ಮೆಸೇಜ್ ಮಾಡಿದ್ರು. ಅದಾದ ಬಳಿಕ ನನ್ನ ಕಿವಿಗೆ ಬಿದ್ದಿದೆ ಅಪ್ಪು ಸಾ’ ವಿನ ಸುದ್ದಿ ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ಘಟನೆ” ಎಂದಿದ್ದರು. ಇನ್ನು, ಸಣ್ಣ ವಯಸ್ಸಿನಲ್ಲಿಯೇ ಹೃ’ದಯಾಘಾತ ಆಗುವುದಕ್ಕೆ ಕಾರಣ ಏನು ಇರಬಹುದು ಅಂತ ನಾನು ಕೆಲವು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದರು.
ಈ ವೇಳೆಯಲ್ಲಿ ಅವರ ಸಾವಿಗೆ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದರು. ಅದಲ್ಲದೆ, ಲಾಕ್ ಡೌನ್ ಸಮಯದಲ್ಲಿ ಅಪ್ಪು ಹೊಸ ಅಭ್ಯಾಸ ಶುರು ಮಾಡಿದ್ದರಂತೆ. Puneeth ಪುನೀತ್ ರಾಜಕುಮಾರ್ ಅವರು ಶೂಟಿಂಗ್ ಇಲ್ಲದ ವೇಳೆ ದಿನಕ್ಕೆ ಎರಡು ಸಿನಿಮಾ ನೋಡುವ ಅಭ್ಯಾಸವನ್ನು ಶುರು ಮಾಡಿಕೊಂಡಿದ್ದರು. ಸಂಜೆ 8 ರಿಂದ ಬೆಳಗಿನ ಜಾವ ಎರಡರವರೆಗೂ ಸಿನಿಮಾ ನೋಡುವುದು ನಂತರ ಅದರ ವಿಮರ್ಶೆ ಸಿನಿಮಾದ ಬಗ್ಗೆ ಸ್ನೇಹಿತರಿಗೆ ಕರೆ ಮಾಡಿ ಹೇಳುವುದು ಹೀಗೆ ಅವರ ನಿದ್ದೆಯ ಅವಧಿ ಕೇವಲ ನಾಲ್ಕು ಗಂಟೆ ಆಗಿತ್ತು.
ಬೆಳಗಿನ ಜಾವ ಜಿಮ್ ಟ್ರೈನರ್ ಬಂದ ಕೂಡಲೇ ಅವರನ್ನು ಕಾಯಿಸುವುದು ಬೇಡ ಅಂತ ತಕ್ಷಣವೇ ಎದ್ದು ಜಿಮ್ ಮಾಡುವುದಕ್ಕೆ ಹೊರಟುಬಿಡುತ್ತಿದ್ದರು. ಲಾಕ್ ಡೌನ್ ಮುಗಿದ ನಂತರವೂ ಶೂಟಿಂಗ್ ಇದ್ದರೂ ಕೂಡ ಮನೆಗೆ ಬಂದ ನಂತರ ಇದೇ ಪ್ರಾಕ್ಟೀಸ್ ಮುಂದುವರೆಸಿದ್ರು. ಪುನೀತ್ ಎಷ್ಟೇ ಫಿಟ್ ಆಗಿ ಇದ್ದರೂ ಅವರ ನಿದ್ದೆ ಕಡಿಮೆಯಾಗಿರುವುದೇ ಅವರ ಹಾರ್ಟ್ ಅ ಟ್ಯಾಕ್ ಗೆ ಒಂದು ಕಾರಣ ಎಂದಿದ್ದರು.