ಕಪ್ಪು ಬಣ್ಣದ ಸೀರೆಯಲ್ಲಿ ಹಾಟ್ ಆಗಿರುವ ಫೋಟೋ ಹಂಚಿಕೊಂಡ ಖ್ಯಾತ ನಟಿ ಪ್ರಣೀತಾ ಸುಭಾಷ್.. ಫೋಟೋ ನೋಡಿ ಶೇಕ್ ಆದ ಕರ್ನಾಟಕ!!!

ಚಂದನವನದ ನಟ ಪ್ರಣೀತಾ ಸುಭಾಷ್ (Actress Pranitaa Subhash) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಮಗುವಾದ ಬಳಿಕ ಸಿನಿ ಲೋಕದಿಂದ ದೂರವಿದ್ದ ನಟಿ ಪ್ರಣೀತಾ ಸುಭಾಷ್ ಅವರು ಮತ್ತೆ ಸಿನಿ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಮಗಳ ಲಾಲನೆ ಪಾಲನೆ ಹಾಗೂ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫೋಟೋ ಹಾಗೂ ವಿಡಿಯೋ ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಪ್ರಣೀತಾ ಸುಭಾಷ್ ಅವರು ಸುದ್ದಿಯಾಗಿದ್ದಾರೆ.

ನಟಿ ಪ್ರಣೀತಾ ಸುಭಾಷ್ ಅವರು ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುವುದಿದೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿಯೂ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಕಪ್ಪು ಬಣ್ಣದ ಸೀರೆಯುಟ್ಟು ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ನಟಿಯು ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ನಟಿಯ ಈ ಫೋಟೋಗೆ ಮೆಚ್ಚುಗೆವ್ಯಕ್ತವಾಗಿವೆ.

ದಕ್ಷಿಣ ಭಾರತದ ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು ನಿತಿನ್ ರಾಜ್ (Nitin Raj) ಅವರ ಜೊತೆಗೆ ಸಪ್ತಪದಿ ತುಳಿದಿದ್ದರು. ಆದಾದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ಆದರೆ ಮಗುವಿನ ಹೆಸರನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಹೀಗಿರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಹೆಸರನ್ನು ಮತ್ತು ಫೋಟೋವನ್ನು ಅವರು ಹಂಚಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಆರ್ನಾ ಫೋಟೋವನ್ನು ಹಂಚಿಕೊಂಡಿರುವ ಪ್ರಣಿತಾ, ‘ಆರ್ನಾಳನ್ನು ಪರಿಚಯಿಸುತ್ತಿದ್ದೇನೆ..’ ಎಂದು ಹೇಳಿಕೊಂಡಿದ್ದರು.

 

View this post on Instagram

 

A post shared by Pranita Subhash (@pranitha.insta)

ನಟಿ ಪ್ರಣೀತಾ ಸುಭಾಷ್ ಕನ್ನಡ (Kannada), ತೆಲುಗು (Telugu) ಮತ್ತು ತಮಿಳು (Tamil) ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಮಾತ್ರವಲ್ಲದೆ, ಮಾಡೆಲ್ ಕೂಡ ಹೌದು. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಮೊದಲು ಬಣ್ಣ ಹಚ್ಚಿದ್ದು ದರ್ಶನ್‌ರ `ಪೊರ್ಕಿ’ (Porki) ಚಿತ್ರದಲ್ಲಿ ನಾಯಕಿಯಾಗಿ. ನಂತರ ತೆಲುಗುವಿನಲ್ಲಿ ಸಿದ್ಧಾರ್ಥ ಜೊತೆ `ಭಾವ’ (Bhava) ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಆದಾದ ಬಳಿಕ ನಟಿ ಪ್ರಣೀತಾರವರಿಗೆ ಸಾಲು ಸಾಲು ಅವಕಾಶಗಳು ಬಂದವು.

ನಟನೆ ಮಾತ್ರವಲ್ಲದೇ, ಜಾಹೀರಾತಿ (Advertisement) ನಲ್ಲಿಯೂ ನಟಿ ಪ್ರಣೀತಾರವರು ರಾಯಭಾರಿಯಾಗಿದ್ದಾರೆ. ಹಾಸ್ಪಿಟಾಲಿಟಿ ಉದ್ಯಮದಲ್ಲಿ ಹೆಚ್ಚು ಶೇರುಗಳನ್ನು ಹೊಂದಿರುವ ಇವರು ಬೆಂಗಳೂರಿನಲ್ಲಿ ಒಂದು ರೆಸ್ಟೊರೆಂಟ್ (Restorent) ಹೊಂದಿದ್ದಾರೆ. ಇತ್ತ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಸುದ್ದಿಯಾಗುತ್ತಿದ್ದಾರೆ. ಸದ್ಯಕ್ಕೆ ಸಿನಿ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಬ್ಯುಸಿಯಾಗಿದ್ದು ನಟಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *