Prakash paul student utpal : ಮನುಷ್ಯನು ವಿದ್ಯಾವಂತ, ಬುದ್ದಿವಂತನಾಗುತ್ತಿದ್ದಂತೆ ಸಂಬಂಧಗಳು ಬೆಲೆಯನ್ನು ಕಳೆದುಕೊಳ್ಳುತ್ತಿದೆ. ಯಾರನ್ನು ನಂಬುವುದು ಬಿಡುವುದು ಎನ್ನುವ ಹಂತಕ್ಕೆ ಬಂದು ನಾವೆಲ್ಲರೂ ತಲುಪಿರುವುದು ನಿಜಕ್ಕೂ ವಿಪರ್ಯಾಸ. ಪ್ರಾಥಮಿಕ ಶಾಲಾ ಶಿಕ್ಷಕ ಬಂಧು ಪ್ರಕಾಶ್ ಪಾಲ್, ಪಾಲ್ ಅವರ ಎಂಟು ತಿಂಗಳ ಗ ರ್ಭಿಣಿ ಪತ್ನಿ ಸೌಂದರ್ಯ ಮತ್ತು ಎಂಟು ವರ್ಷದ ಮಗ ಅಂಗನ್ ಅವರ ಜೀ ವ ತೆಗೆದ ಪಾಲ್ ಮಾಜಿ ವಿದ್ಯಾರ್ಥಿಯನ್ನು ಬರ್ಹಾಂಪೋರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಬಂಧನದ ಹಿಂದಿನ ಅಸಲಿ ಕಾರಣ ತಿಳಿದರೆ ಶಾಕ್ ಆಗುವುದು ಪಕ್ಕಾ. ಕೇವಲ 20 ವರ್ಷ ವಯಸ್ಸಿನ ಉತ್ಪಲ್ ಬೆಹೆರಾ ಅವರು ತಮ್ಮ ತಂದೆ ಮಾಧಬ್ ಅವರಿಂದ 24,160 ರೂ ಸಾಲವನ್ನು ಪಡೆದಿದ್ದು, ಶಿಕ್ಷಕ ಪಾಲ್ ಅವರ ಒತ್ತಾಯದ ಮೇರೆಗೆ ಬ್ಯಾಂಕ್ ವಿಮಾ ಯೋಜನೆಯಲ್ಲಿ “ಹೂಡಿಕೆ” ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಹಲವಾರು ವಾರಗಳವರೆಗೆ ರಶೀದಿ ಅಥವಾ ಮರುಪಾವತಿಗಾಗಿ ಪಾಲ್‌ನನ್ನು ಹಿಂಬಾಲಿಸುತ್ತಿದ್ದರು. ಕೊನೆಗೆ ಭೀ’ಕರ ಹ-ತ್ಯೆಯೊಂದು ನಡೆದಿತ್ತು. ಸಾಗರ್ದಿಘಿಯ ಬರಾಲ ನಿವಾಸಿ ಉತ್ಪಾಲ್‌ನನ್ನು ಬಂಧಿಸಿದಾಗ ಸರಿಯಾದ ಸಾಕ್ಷ್ಯಾಧಾರಗಳು ಸಿಗದ ಕಾರಣ ಉತ್ಪಾಲ್‌ನನ್ನು ಬಿಟ್ಟುಬಿಡಲಾಯಿತು ಎಂದು ಹೇಳಿದ್ದರು.
ಆದರೆ ಮುರ್ಷಿದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಕುಮಾರ್, “ ಪಾಲ್ ಅವರ ಜಿಯಾಗಂಜ್ ಮನೆಯಲ್ಲಿ ಪತ್ತೆಯಾದ ಎಲ್ಲಾ ವಿಮೆ ಸಂಬಂಧಿತ ಪೇಪರ್‌ಗಳಲ್ಲಿ, ಬೆಹೆರಾಗೆ ಸಂಬಂಧಿಸಿದ ಒಂದು ರ’ಕ್ತದ ಕಲೆಯಿತ್ತು. ಅಲ್ಲದೆ, ಈ ಘಟನೆ ನಡೆಯುವ ಹಿಂದಿನ ದಿನ ಬೆಹೆರಾ ಎಲ್ಲಿದ್ದಾನೆ ಎಂದು ಗೊತ್ತಾಗಬಾರದೆಂದು ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದನು.
ಜಿಯಾಗಂಜ್ ಪೊಲೀಸ್ ಠಾಣೆಯಲ್ಲಿ ತೀವ್ರ- ವಿಚಾರಣೆಯ ವೇಳೆಯಲ್ಲಿ ಆತನು ತನ್ನ ಅ-ಪರಾಧವನ್ನು ಒಪ್ಪಿಕೊಂಡಿದ್ದನು. ಫೋರೆನ್ಸಿಕ್ಸ್ ಫಿಂಗರ್‌ಪ್ರಿಂಟ್‌ಗಳು ಮತ್ತು ಇತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಬೆಹೆರಾರವರ ವಿಚಾರಣೆಯ ವೇಳೆಯಲ್ಲಿ ಅಕ್ಟೋಬರ್ 3 ರಂದು ಪೂರ್ವ ಮಿಡ್ನಾಪುರದ ಎಗ್ರಾದಲ್ಲಿ ಡ್ರೆಸ್ ಖರೀದಿಸಿದ್ದರು ಎಂದು ತಿಳಿದುಬಂದಿತ್ತು.

ತದನಂತರ ಬೆಹರಾ ಅಜಿಮ್‌ಗುಂಜ್ ರೈಲ್ವೆ ನಿಲ್ದಾಣದ ಬಳಿಯಿಂದ ಚಾಪರ್ ಖರೀದಿಸಿದ್ದನು.ಕೊ-ಲೆಯ ಹಿಂದಿನ ದಿನ ಪಾಲ್ ಅವರ ಮನೆಗೆ ಎರಡು ಬಾರಿ ಭೇಟಿ ನೀಡಿದ್ದನು. ಅದಲ್ಲದೇ ಪಾಲ್ ಅವರ ಮನೆಗೆ ಕಾಲಿಡುವ ಮೊದಲು, ಪಾಲ್ ಹೆಸರು ಕರೆದಿದ್ದನು. ಕೊನೆಗೆ ಪಾಲ್ ಬಾಗಿಲು ತೆರೆಯುತ್ತಿದ್ದಂತೆ ಆತನು ಪಾಲ್ ಮೇಲೆ ದಾ-ಳಿ ಮಾಡಿ ಕಥೆ ಮುಗಿಸಿದ್ದನು.
ಈ ನಡುವೆ ಪ್ರತ್ಯಕ್ಷದರ್ಶಿಗಳಾದ ಪಾಲ್ ಪತ್ನಿ ಹಾಗೂ ಮಗನ ಜೀವ ತೆಗೆದಿದ್ದನು ಆದರೆ ತಪ್ಪಿಸಿಕೊಳ್ಳುವ ಬರದಲ್ಲಿ ಚಪ್ಪಲಿಯನ್ನು ಅಲ್ಲೇ ಬಿಟ್ಟಿದ್ದ. ಆದರೆ ಅಲ್ಪನಾ ಮೊಂಡಲ್ ಎನ್ನುವ ವ್ಯಕ್ತಿಯೂ, ಕೊ-ಲೆ ಮಾಡಿದ ಬಳಿಕ ಬೆಹೆರಾನು ತನ್ನ ಬಟ್ಟೆಗಳನ್ನು ಕೊಳದಲ್ಲಿ ಎಸೆದು ಪರಾರಿಯಾಗುವುದನ್ನು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದರು.