ಮದುವೆ ಆಗಿ 10 ವರ್ಷ ಆದರೂ ಕೂಡ ಬಾಳೆ ಎಲೆಯಂತೆ ಬಗ್ಗಿ ವರ್ಕ್ ಔಟ್ ಮಾಡುತ್ತಾಳೆ ದೇವರಾಜ್ ಸೊಸೆ ರಾಗಿಣಿ ಪ್ರಜ್ವಲ್!! ಈಕೆಯ ವರ್ಕ್ ಔಟ್ ನೋಡಿ ಶಾಕ್ ಆಗ್ತೀರಾ?

ಚಂದನವನದ ನಟ ಪ್ರಜ್ವಲ್ ದೇವರಾಜ್ (Prajwal Devaraj) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ನಟ ಪ್ರಜ್ವಲ್ ದೇವರಾಜ್ ಅವರಷ್ಟೇ ಅವರ ಪತ್ನಿ ರಾಗಿಣಿ ಪ್ರಜ್ವಲ್ (Ragini Prajwal) ಕೂಡ ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು, ಜಿಮ್, ಡ್ಯಾನ್ಸ್ ಹಾಗೂ ಔಟಿಂಗ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರ ಜೊತೆಗೆ ಅತ್ಯದ್ಭುತ ಡ್ಯಾನ್ಸರ್ (Dancer) ಆಗಿಯೂ ಗುರುತಿಸಿಕೊಂಡಿರುವ ಇವರ ಡಾನ್ಸ್ ವಿಡಿಯೋಗಳು ಕೂಡ ವೈರಲ್ ಆಗುತ್ತಿರುತ್ತದೆ.

ಕಳೆದ ಕೆಲವು ವರ್ಷಗಳಿಂದ ಫಿಟ್ನೆಸ್ ಕುರಿತು ಸಾಕಷ್ಟು ಜ್ಞಾನ ಹೊಂದಿದ್ದು, ತಮ್ಮದೇ ಆದ ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುತ್ತಿದ್ದಾರೆ. ಅದಲ್ಲದೇ, ನಟನೆ, ಜಾಹೀರಾತು, ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿರುವ ರಾಗಿಣಿ ಪ್ರಜ್ವಲ್ ಸಿಕ್ಕಾಪಟ್ಟೆ ಆಕ್ಟಿವ್. ಇದೀಗ ನಟನ ಮಡದಿ ರಾಗಿಣಿ ಪ್ರಜ್ವಲ್ ಅವರು ಸುದ್ದಿಯಾಗಿದ್ದಾರೆ. ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಕಮ್ ಮಾಡೆಲ್ ರಾಗಿಣಿ ಪ್ರಜ್ವಲ್ ಅವರು ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ಈ ವರ್ಕ್ ಔಟ್ ಹೇಳಿಕೊಡುತ್ತಿರುವ ವಿಡಿಯೋವೊಂದು ಶೇರ್ ಮಾಡಿದ್ದು, ಫ್ಯಾನ್ಸ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿವೆ.

ರಾಗಿಣಿ ಪ್ರಜ್ವಲ್ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡವರು. ಇವರ ಹಿನ್ನಲೆಯ ಬಗ್ಗೆ ಹೇಳುವುದಾದರೆ, ತಂದೆ ಚಂದ್ರನ್ ಬಾಲು (Chandran Balu), ತಾಯಿ ರಮಾ (Ramaa). ರಾಗಿಣಿ ಪ್ರಜ್ವಲ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಡ್ಯಾನ್ಸ್ ಎಂದರೆ ರಾಗಿಣಿ ಪ್ರಜ್ವಲ್ ಅವರಿಗೆ ಅಚ್ಚುಮೆಚ್ಚು.

ಹೀಗಾಗಿ ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಚಂದ್ರನ್ ಆರಂಭಿಸಿದರು. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಹಾಗೂ ವಿಶ್ವಾದ್ಯಂತ ಕಥಕ್ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಅದಲ್ಲದೇ ಚಂದನವನದಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿದ್ದು, ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ’ (Rishaba Priya) ದಲ್ಲಿ ನಟಿಸಿದ್ದರು. ಪುನೀತ್ ರಾಜಕುಮಾರ್ ನಿರ್ಮಾಣದ `ಲಾ’ (Laa) ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು.

 

View this post on Instagram

 

A post shared by Ragini Chandran (@u_rhythmix)

ಸದ್ಯಕ್ಕೆ ಶಾನುಭೋಗರ ಮಗಳು (Shanubhogara Magalu) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ (Shreemathi bhagya Krishnamurthi) ಅವರ ಕಾದಂಬರಿ ಆಧಾರಿತ ಶಾನುಭೋಗರ ಮಗಳು ಚಿತ್ರದಲ್ಲಿ ಶಾನುಭೋಗರ ಮಗಳಾಗಿ ರಾಗಿಣಿಯವರು ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *