ಮದುವೆ ವಿಚಾರದಲ್ಲಿ ಎಡವಿದೆ ಈಗ ಗಂಡ ಬೇಕು ಅನ್ನಿಸುತ್ತಿದೆ, ಎಂದ ತೆಲುಗು ನಟಿ ಪ್ರಗತಿ, ಅಷ್ಟಕ್ಕೂ ನಟಿ ಬಿಚ್ಚಿಟ್ಟ ಅಸಲಿ ಸತ್ಯವೇನು ಗೊತ್ತಾ?

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರ ಬದುಕು ಸುಂದರವಾಗಿರಬೇಕೆಂದೇನಿಲ್ಲ. ಹೌದು ನಟ ನಟಿಯರು ತಮ್ಮ ವೈಯುಕ್ತಿಕ ಬದುಕಿನಲ್ಲಿಯೂ ಸಾಕಷ್ಟು ಏರಿಳಿತವನ್ನು ಕಾಣುತ್ತಾರೆ. ಆದರೆ ಆ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಪ್ರಗತಿ (Pragathi) ಸುದ್ದಿಯಾಗಿದ್ದಾರೆ.

ಪ್ರಗತಿ (Pragathi) ಯವರು 1994ರಲ್ಲಿ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1997ರ ವರೆಗೂ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದವು. ಆದರೆ ವೈಯುಕ್ತಿಕ ಬದುಕಿನ ಕಡೆಗೆ ಗಮನ ಹರಿಸಿದ ನಟಿ ಪ್ರಗತಿಯವರು, ಮದುವೆ ಮಕ್ಕಳು ಸಂಸಾರ ಎಂದು ಬ್ಯುಸಿಯಾದರು. ಆದಾದ ಬಳಿಕ ಮಹೇಶ್ ಬಾಬು ನಟನೆಯ ಬಾಬಿ ಸಿನಿಮಾ ಮೂಲಕ ಬೆಳ್ಳಿ ತೆರೆಯತ್ತ ಮುಖ ಮಾಡಿದರು. ಆದರೆ ವೈವಾಹಿಕ ಬದುಕು ಅಷ್ಟೇನು ಉತ್ತಮವಾಗಿರಲಿಲ್ಲ. ಪತಿಗೆ ಕೆಲಸವಿರಲಿಲ್ಲ, ಹೀಗಾಗಿ ಆರ್ಥಿಕವಾಗಿ ತೊಂದರೆಗೆ ಒಳಗಾಗಬೇಕಾಯಿತು. ಈ ಕಾರಣದಿಂದಾಗಿ ಪತಿಗೆ ವಿಚ್ಛೇಧನ (Divorce) ನೀಡಿದರು.

ಇತ್ತೀಚೆಗಷ್ಟೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಗತಿ, “ಪ್ರಯಾಣದಲ್ಲಿ ನಾನು ತುಂಬಾ ಆವೇಶ ಮತ್ತು ಈಗೋ ಹೊಂದಿದ್ದೆ ಎಂದು ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿದ್ದೆ. ಒಂದು ತಪ್ಪಿನಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ನಾಯಕಿಯಾಗಿ ನಟಿಸುತ್ತಿದ್ದೆ, ವೃತ್ತಿ ಜೀವನದ ಪೀಕ್‌ ಸಮಯದಲ್ಲೇ ಮದುವೆ ಆದೆ. ಅದರಿಂದ ನಾನು ಸಾಕಷ್ಟು ಕಳೆದುಕೊಂಡೆ” ಎಂದಿದ್ದಾರೆ.

“ಈಗ ಪೋಷಕ ನಟಿಯಾಗಿ ಶ್ರಮಿಸುತ್ತಿರುವ ರೀತಿಯಲ್ಲಿಯಲ್ಲಿ ನಾಯಕಿಯಾಗಿದ್ದಾಗ ಶ್ರಮ ಹಾಕಿ ಕೆಲಸ ಮಾಡಿದ್ದರೆ ನನ್ನ ಲೈಫ್‌ ಸೂಪರ್ ಆಗಿರುತ್ತಿತ್ತು ಬೇರೆ ತರ ಇರುತ್ತಿತ್ತು. ಪ್ರೈಮ್ ಸಮಯದಲ್ಲಿ ಮದುವೆ ಮಕ್ಕಳನ್ನು ಮಾಡಿಕೊಂಡು ತಪ್ಪು ನಿರ್ಧಾರ ತೆಗೆದುಕೊಂಡೆ. ಈಗ ನೋಡಿ ನಾನು ಟಿವಿಯಲ್ಲಿ ಕ್ಯಾರೆಕ್ಟರ್ ರೂಲ್ ಮಾಡುವ ಪರಿಸ್ಥಿತಿ ಬಂದಿದೆ. ಮದುವೆ ವಿಚಾರದಲ್ಲಿ ನಾನು ಹೇಳುವುದು ಒಂದೇ ಮದುವೆ ಆಗುವುದಕ್ಕಿಂತ ಮಿಗಿಲಾಗಿ ಬಾಳಿಗೆ ಸಂಗಾತಿ ಬೇಕು” ಎಂದಿದ್ದಾರೆ ನಟಿ ಪ್ರಗತಿ.

“ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಕೆಲವೊಂದು ವಿಚಾರದಲ್ಲಿ ನಾನು ನಿರ್ದಿಷ್ಟ ಇದಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವೆ. ಈಗ ಮತ್ತೊಬ್ಬರ ಆಗಮನದಿಂದ ನಾನು ಬದಲಾಗಬೇಕು ಅಂದ್ರೆ ಕಷ್ಟ. ಬದಲಾವಣೆ ಬಿಡಿ ಹೊಂದಿಕೊಳ್ಳುವುದು ಕಷ್ಟ. ಹೊಂದಿಕೊಂಡು ಜೀವನ ಮಾಡುವ ಬದಲು ನಾನು ಒಂಟಿಯಾಗಿ ಜೀವನ ನಡೆಸುವೆ’ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ ನಟಿ.

“ಈಗ ನನ್ನ ಮಕ್ಕಳು ನನ್ನ ಪ್ರಪಂಚ. ವೃತ್ತಿ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ದೊಡ್ಡವರಾಗಿದ್ದಾರೆ. ಇದು ನನಗೆ ನಿಜವಾದ ಯಶಸ್ಸು. ನನ್ನ ತಾಯಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು ನಾನು ಅವರಂತೆ ಒಂಟಿಯಾಗಿ ಜೀವನ ನಡೆಸಬಾರದು ಎಂದು ನನ್ನ ಗಂಡನ ಜೊತೆ ಮಾತನಾಡಿ ಸಮಸ್ಯೆ ಸರಿ ಮಾಡಲು ಪ್ರಯತ್ನ ಪಟ್ಟರು ಆದರೆ ಆಗಲಿಲ್ಲ ಅವರ ಶ್ರಮಕ್ಕೆ ಬೆಲೆ ಇಲ್ಲ. ಹೀಗಾಗಿ ನಾನು ಡಿವೋರ್ಸ್‌ ಪಡೆದುಕೊಂಡೆ ” ವೈವಾಹಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *