ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್, 75 ಲಕ್ಷ ಮನೆಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ

ಮಾರುಕಟ್ಟೆಯಲ್ಲಿ ದಿನೇ ದಿನೇ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೆ ಇರುತ್ತಿದ್ದಂತೆ ಸಿಲಿಂಡರ್ ಬೆಲೆ (Cyliner Price) ಯೂ ದುಬಾರಿಯಾಗಿತ್ತು. ಹೀಗಾಗಿ ಮಧ್ಯಮ ವರ್ಗದ ಜನರಿಗೆ ತಲೆ ನೋವು ಶುರುವಾಗಿತ್ತುಗಿತ್ತು. ಹೀಗಿರುವಾಗಲೇ ಕಳೆದ ಆರು ತಿಂಗಳಿನಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಸ್ಥಿರವಾಗಿತ್ತು.

ಆದರೆ ಇದೇ ಸೆಪ್ಟೆಂಬರ್ (September) ತಿಂಗಳ ಮೊದಲ ದಿನವೇ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿಯೊಂದು ಸಿಕ್ಕಿತ್ತು. ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ 158 ರೂ ಕಡಿತ ಮಾಡಿದ್ದು ಹೊಸ ದರ ಘೋಷಣೆ ಮಾಡಿದ್ದು ಜನರಿಗೆ ಸಂತಸವನ್ನು ತಂದಿತ್ತು. ಹೀಗಾಗಿ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 157 ರಿಂದ 158 ರೂ.ವರೆಗೆ ಇಳಿಕೆ ಕಂಡ ಖುಷಿಯಲ್ಲಿ ಗ್ರಾಹಕರಿದ್ದಾರೆ.

ಆದರೆ ಇದೀಗ ಮತ್ತೆ ಕೇಂದ್ರ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್ ವೊಂದು ಹೊರಬಿದ್ದಿದೆ. ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆಯಡಿಯಲ್ಲಿ (Ujjwala Scheme) ಉಚಿತವಾಗಿ ಅಡುಗೆ ಅನಿಲ ಸಂಪರ್ಕಕ್ಕಾಗಿ 1,650 ಕೋಟಿ ರೂ. ಮೀಸಲಿಟ್ಟಿದೆ. ಈ ಯೋಜನೆಗೆ ಸಂಬಂಧ ಪಟ್ಟಂತೆ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ (Union Cabinet) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೇಂದ್ರ ಸರ್ಕಾರ (Central Government) ವು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojana) ಜಾರಿಗೊಳಿಸಿದ್ದು ಈಗಾಗಲೇ ಸಾಕಷ್ಟು ಕುಟುಂಬಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಇದೀಗ ಉಜ್ವಲ ಯೋಜನೆ ಅನ್ವಯ ದೇಶದ 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹೆಚ್ಚಿನ ಹಣ ವಿನಿಯೋಗಿಸಲು ತೀರ್ಮಾನಿಸಲಾಗಿರುವರುವ ಸುದ್ದಿ ದೇಶದ ಜನರಿಗೆ ಸಂತಸವನ್ನು ತಂದಿದೆ.

Leave a Reply

Your email address will not be published. Required fields are marked *