600 ಕೋಟಿ ಬಜೆಟ್ ನ ಆದಿಪುರುಷ ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಸೋತು ಸುಣ್ಣವಾಗಿದ್ದಾರೆ ಪ್ರೋಡುಸರ್!!

Prabhas remuneration in adipurush movie : ನಟ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ‘ಆದಿಪುರುಷ’ ( AadiPurush) ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ರೂ. 140 ಕೋಟಿ ಕಲೆಕ್ಷನ್ ಮಾಡಿದೆ. ಓಂ ರಾವತ್ (Om Raavat) ನಿರ್ದೇಶನದ ರಾಮಾಯಣ ಕೃತಿ ಆಧಾರಿತ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿದೆ.

ಈಗಾಗಲೇ ಆದಿಪುರುಷ್ ಸಿನಿಮಾವು ಬಿಡುಗಡೆಯಾಗಿದ್ದು, ಈ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 140 ಕೋಟಿ ರೂ. ಗಳಿಸಿಕೊಂಡಿದ್ದು ಸಿನಿ ಪ್ರಿಯರ ಮನಸ್ಸು ಗೆದ್ದುಕೊಂಡಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಆದರೆ ಇದೀಗ ಈ ಸಿನಿಮಾ ಮೂರು ದಿನದ 300 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಅದಲ್ಲದೇ ಐದೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆದಿಪುರುಷ್ ಸಿನಿಮಾದಲ್ಲಿನ ನಟನೆಗಾಗಿ ಪ್ರಭಾಸ್ (Prabhas) ಸೇರಿದಂತೆ ಇನ್ನಿತ್ತರರು ಪಡೆದ ಸಂಭಾವನೆಯ ಕುರಿತು ಬಾರಿ ಚರ್ಚೆಯಾಗುತ್ತಿದೆ. ಇತ್ತ ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಲು ಪ್ರಭಾಸ್ ಪಡೆದ ಸಂಭಾವನೆ ಬರೋಬ್ಬರಿ 100 ಕೋಟಿ ಎನ್ನಲಾಗಿದೆ.ಇನ್ನು ಉಳಿದಂತೆ ಕೃತಿ ಸನೋನ್ (Kruti Sanon) 30 ಕೋಟಿ, ಸೈಫ್ ಆಲಿ ಖಾನ್ (Saif Ali Khan) 12 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಸನ್ನಿ ಸಿಂಗ್ (Sanni Sing) ಹಾಗೂ ದೇವದತ್ತ ನಾಗೆ (Devadatta Nage) ಇವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಆದಿಪುರುಷ್ ಸಿನಿಮಾ ತೆರೆಗೆ ಬಂದ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗಿವೆ. ಆದರೆ, ಈ ಚಿತ್ರದಲ್ಲಿನ ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸಿ ನೇಪಾಳದಲ್ಲಿ ‘ಆದಿಪುರುಷ್’ ಗೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಹಿಂದೂ ಪರ ಸಂಘಟನೆಗಳು ಸಹ ಆದಿಪುರುಷ್ ಚಿತ್ರದ ಸಂಭಾಷಣೆಗಳ ಕುರಿತು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಸೇರಿ ಪಡಿಸಬೇಕೆಂದು ಆಗ್ರಹಿಸಿದ್ದವು. ಕೊನೆಗೂ ಚಿತ್ರ ತಂಡವು ಒಪ್ಪಿಕೊಂಡಿದೆ.

ಈ ಮೂಲಕವಾಗಿ ಚಿತ್ರತಂಡವು ಸಾಮಾಜಿಕ ಜಾಲತಾಣ ಟ್ವಿಟರ್ (Twitter) ನಲ್ಲಿ ಟ್ವೀಟ್ ಮಾಡಿದ್ದು, ಆದಿಪುರುಷ್ ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮಾರ್ಪಡಿಸಲು ಸಿದ್ಧರಿದ್ದೇವೆ ಎಂದು ಬರೆದುಕೊಂಡಿದೆ.

Leave a Reply

Your email address will not be published. Required fields are marked *