ಯಾರೇ ಆದರೂ ಒಮ್ಮೆ ಸೆಲೆಬ್ರಿಟಿ ಪಟ್ಟ ಅಲಂಕರಿಸಿದರೆ ಸಾಕು, ಅವರ ವೈಯುಕ್ತಿಕ ವಿಚಾರದಿಂದ ಹಿಡಿದು ಸಿನಿಮಾ ವಿಚಾರ ಗಳು ಕೂಡ ದೊಡ್ಡ ಮಟ್ಟಿಗೆ ಸುದ್ದಿ ಯಾಗುತ್ತವೆ. ಅಂದಹಾಗೆ ಬಾಹುಬಲಿ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು. ಸದ್ಯಕ್ಕೆ ಪ್ರಭಾಸ್ ಅವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಶೂಟಿಂಗ್ ಎಂದು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಆದರೆ ಇತ್ತೀಚಿಗೆ ನಟ ಪ್ರಭಾಸ್ ಅವರು ಚೆಲುವಿನ ರಿಯಾಲಿಟಿ ಶೋ ಕಾರ್ಯಕ್ರಮ ಒಂದಕ್ಕೆ ಧರಿಸಿದ್ದ ಬಟ್ಟೆಯ ಬೆಲೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣ ವಾಗಿದೆ. ಹೌದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಾರಣ ಒಂದು ಸಿನಿಮಾ ದುಬಾರಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಅಂದಹಾಗೆ, 50-100 ಕೋಟಿ ಗಟ್ಟಲೆ ಸಂಭಾವನೆ ಪಡೆಯುವ ಪ್ರಭಾಸ್ ಅವರು ಒಂದು ಶರ್ಟ್ ಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಎನ್ನುವುದನ್ನು ನಂಬಲೇ ಬೇಕು.
ಇತ್ತೀಚೆಗಷ್ಟೇ ನಟ ಪ್ರಭಾಸ್ ಅವರು, ನಂದಮೂರಿ ಬಾಲಕೃಷ್ಣ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಅನ್ ಸ್ಟಾಫ್ ಪೆಬಲ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ಸಮಯದಲ್ಲಿ ಪ್ರಭಾಸ್ ಪೋಲೊ ರಲ್ಫ್ ಲಾರೆನ್ ಕಂಪನಿಯ ಶರ್ಟ್ ಧರಿಸಿದ್ದರು. ಈ ಒಂದು ಶರ್ಟ್ ನ ಬೆಲೆ ಇಂಟರ್ನೆಟ್ ನಲ್ಲಿ ನೆಟ್ಟಿಗರು ಹುಡುಕಿದ್ದು, ಈ ಶರ್ಟ್ ಬೆಲೆ ನೋಡಿ ಶಾಕ್ ಆಗಿದ್ದಾರೆ.
ಹೌದು, ಇಂಟರ್ನೆಟ್ ನಲ್ಲಿ ಪ್ರಭಾಸ್ ಅವರ ದರ್ಶನ ಪೋಲೋ ಕಂಪನಿಯ ಶರ್ಟ್ ನ ಬೆಲೆ 100 ರಿಂದ 200 ಪೌಂಡ್ ಎಂದು ತೋರಿಸುತ್ತಿದ್ದು, ಭಾರತದ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ, ಒಂದು ಶರ್ಟ್ ಬೆಲೆ ಬರೋಬ್ಬರಿ 11 ರಿಂದ 20 ಸಾವಿರ ರೂಪಾಯಿಗಳಾಗುತ್ತದೆ. ಕೇವಲ ಶರ್ಟ್ ಗೆ ಪ್ರಭಾಸ್ ಅವರ 20,000 ಗಳಷ್ಟು ಖರ್ಚು ಮಾಡುತ್ತಿದ್ದಾರೆ ಪ್ರಭಾಸ್ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೇ ಪ್ರಭಾಸ್ ಅವರು ಶೂಟಿಂಗ್ ಗೆ ತೆರಳಿದಾಗ ಬಳಸುವ ಕ್ಯಾರವೆನ್ ವಾಹನದ ಬೆಲೆ ಆರೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅದರ ಜೊತೆಗೆ ತಮ್ಮ ಕ್ಯಾರವೆನ್ ವಾಹನದ ಇಂಟೀರಿಯರ್ ಡಿಸೈನ್ ಗೆ ಅಂತಲೇ ಎರಡು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆಯಷ್ಟೇ ‘ಬಾಹುಬಲಿ’ ಚಿತ್ರದಿಂದ ಪ್ರಭಾಸ್ಗೆ ಒಂದು ನಷ್ಟ ಆಗಿದೆ ಎನ್ನುವ ಮಾಹಿತಿ ರಿವೀಲ್ ಮಾಡಿದ್ದರು.
ರಾಧೆ ಶ್ಯಾಮ್ ಸಿನಿಮಾದ ಪ್ರಚಾರದಲ್ಲಿ, ಈ ವಿಚಾರವನ್ನು ಬಹಿರಂಗ ಪಡಿಸಿದ್ದರು. ಬಾಹುಬಲಿ’ ಬಳಿಕ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಎಲ್ಲ ಸಿನಿಮಾಗಳು ಕೂಡ ‘ಬಾಹುಬಲಿ’ ರೀತಿಯೇ ಅದ್ಭುತವಾಗಿ ಕಲೆಕ್ಷನ್ ಮಾಡಬೇಕು ಎಂದು ಜನರು ನಿರೀಕ್ಷಿಸಲು ಆರಂಭಿಸಿದರು.
ಆ ಒತ್ತಡವನ್ನು ಎದುರಿಸುವುದು ಸುಲಭವಲ್ಲ. ಬೇರೆ ಎಲ್ಲ ಸಿನಿಮಾಗಳನ್ನು ‘ಬಾಹುಬಲಿ’ಗೆ ಜನರು ಹೋಲಿಸಲು ಆರಂಭಿಸಿದ್ದಾರೆ. ಆ ಒತ್ತಡದ ಕಾರಣಕ್ಕೆ ಪ್ರಭಾಸ್ ಅವರಿಗೆ ಬೇರೆ ಸಿನಿಮಾದಲ್ಲಿ ಹಿನ್ನಡೆ ಆಗುತ್ತಿದೆ. ಬಾಹುಬಲಿ’ ಚಿತ್ರದಿಂದ ಹೊಸ ಐಡೆಂಟಿಟಿ ಸಿಕ್ಕಿತು. ಎಲ್ಲೇ ಹೋದರೂ ಅವರನ್ನು ಬಾಹುಬಲಿ ಎಂದೇ ಜನರು ಗುರುತಿಸುತ್ತಾರೆ. ಆ ಬಗ್ಗೆ ಅವರಿಗೆ ಖುಷಿ ಇದೆ.
ಆದರೆ ಮತ್ತೆ ಮತ್ತೆ ಪ್ರಭಾಸ್ ಅವರು ಆ ರೀತಿಯ ಆ್ಯಕ್ಷನ್ ಸಿನಿಮಾಗಳನ್ನೇ ಮಾಡಬೇಕು ಅಂತ ಜನರು ಬಯಸುತ್ತಾರೆ. ‘ಅಂಥ ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದು ಸುಲಭ. ಆದರೆ ನಾನು ಪ್ರಯೋಗ ಮಾಡಲು ಬಯಸುತ್ತೇನೆ’ ಎಂದಿದ್ದರು. ಪ್ರಭಾಸ್ ನಟನೆಯ ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾಗಳು ಸೋಲು ಕಂಡಿತು. ಸದ್ಯ ಪ್ರಭಾಸ್ ಆದಿಪುರುಷ್, ಸಲಾರ್ ಸೇರಿದಂತೆ ಇನ್ನೂ ಹೆಸಡಿದ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.