ಭವಿಷ್ಯಕ್ಕಾಗಿ ಹಣ ಉಳಿತಾಯ (Saving) ಹಾಗೂ ಹೂಡಿಕೆ (Investment) ಮಾಡುವುದು ಬಹಳ ಮುಖ್ಯವಾಗಿದೆ. ಕಷ್ಟದ ಸಮಯದಲ್ಲಿ ಈ ಹೂಡಿಕೆಯಹಣವು ಉಪಯೋಗಕ್ಕೆ ಬರುತ್ತದೆ. ಕೆಲವರು ಆಸ್ತಿ (Property) ಅಥವಾ ಚಿನ್ನ (Gold) ದ ಮೇಲೆ ಹಣವನ್ನು ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಬೇರೆ ಬೇರೆಯ ಯೋಜನೆಗಳಲ್ಲಿ ಹಣ ಹೂಡಿಕೆ (Money Investment) ಮಾಡುವ ಮೂಲಕ ಉಳಿತಾಯದತ್ತ ಗಮನ ಕೊಡುತ್ತಾರೆ.
ಅದರಲ್ಲಿಯು ಹಣ ಹೂಡಿಕೆಗೆ ವಿಚಾರಕ್ಕೆ ಬಂದರೆ ಅಂಚೆ ಕಚೇರಿ (Post Office) ಯ ಯೋಜನೆಯು ಬೆಸ್ಟ್ ಎನ್ನಬಹುದು. ಅದರಲ್ಲಿಯು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office Monthly Income Scheme) ಯಡಿ, ಪತಿ ಮತ್ತು ಪತ್ನಿ ಪ್ರತಿ ತಿಂಗಳು ಹಣ ಹೂಡಿಕೆ ಮಾಡಿ ಅತೀ ಹೆಚ್ಚು ರಿಟರ್ನ್ ಗಳನ್ನು ಪಡೆಯಬಹುದಾಗಿದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 7.4 ರಷ್ಟು ವಾರ್ಷಿಕ ಬಡ್ಡಿ (Yearly Interest) ಯನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ ಸ್ಥಿರ ಬಡ್ಡಿಯನ್ನು ಪಡೆಯಲು ಸಾಧ್ಯ.ಅಂಚೆ ಕಛೇರಿಯ ಈ ಯೋಜನೆಯಲ್ಲಿ, ಒಂದು ಖಾತೆ (Single Account) ಮತ್ತು ಜಂಟಿ ಖಾತೆ (Joint Account) ಗಳನ್ನು ತೆರೆಯಲು ಅವಕಾಶವಿದೆ. ಜಂಟಿ ಖಾತೆಯಲ್ಲಿ ಗರಿಷ್ಠ 3 ಜನರು ಏಕಕಾಲದಲ್ಲಿ ಖಾತೆಯನ್ನು ತೆರೆಯಬಹುದು.
ಈ ಜಂಟಿ ಖಾತೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರು ಜೊತೆಯಾಗಿ ಹೂಡಿಕೆ ಮಾಡಬಹುದಾಗಿದೆ. ಅದರೊಂದಿಗೆ ಅಪ್ರಾಪ್ತ/ಅಸ್ವಸ್ಥರ ಪರವಾಗಿ ಪೋಷಕರು ಖಾತೆ ತೆರೆಯಲು ಅವಕಾಶವಿದೆ. ತನ್ನ ಹೆಸರಿನಲ್ಲಿ 10 ವರ್ಷ ಮೇಲ್ಪಟ್ಟ ಅಪ್ರಾಪ್ತರು ತೆರೆಯಬಹುದಾಗಿದೆ. ಅಂಚೆ ಕಚೇರಿಯ ಈ ಮಾಸಿಕ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಗಳ ಹೂಡಿಕೆ ಮಾಡಬಹುದು.
ಅದಲ್ಲದೇ ಗರಿಷ್ಠ ಹೂಡಿಕೆಯ ಮೊತ್ತ 9 ಲಕ್ಷ ರೂಪಾಯಿಯಾಗಿದ್ದು, ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆಯ ಮೊತ್ತವಾಗಿದ್ದು, ಹೂಡಿಕೆದಾರರಿಗೆ ದೊಡ್ಡ ಮಟ್ಟದಲ್ಲಿ ಉಳಿತಾಯ ಮಾಡಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,500 ರೂಪಾಯಿ ಆದಾಯ, ಜಂಟಿ ಖಾತೆಯಡಿ 15 ಲಕ್ಷ ರೂಪಾಯಿ ಹೂಡಿದರೆ 9,250 ರೂಪಾಯಿ ಆದಾಯವನ್ನು ಪಡೆಯಬಹುದಾಗಿದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಡಿಯಲ್ಲಿ ಒಂದು ವರ್ಷಕ್ಕೆ ಮುಚ್ಚಬಹುದು. ಈ ವೇಳೆಯಲ್ಲಿ ಶೇಕಡಾ 2ರಷ್ಟು ಶುಲ್ಕವನ್ನು ಕಡಿತ ಮಾಡಲಾಗುತ್ತದೆ. 3 ವರ್ಷಗಳ ನಂತರದಲ್ಲಿ ಈ ಖಾತೆಯನ್ನು ಮುಚ್ಚಿದ್ದರೆ, ಶೇಕಡ 1 ರಷ್ಟು ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಅಂಚೆಕಚೇರಿಯ ಮಾಸಿಕ ಆದಾಯ ಯೋಜನೆಯು ಸುರಕ್ಷಿತ ಹಾಗೂ ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಿದೆ.