ಪೋಸ್ಟ್ ಆಫೀಸಿನ ಈ ಯೋಜನೆಯಲ್ಲಿ 15 ಸಾವಿರ ಹೂಡಿಕೆ ಮಾಡಿದರೆ ಸಿಗುತ್ತದೆ 35 ಲಕ್ಷ ಅಧಿಕ ಆದಾಯ, ಇಲ್ಲಿದೆ ನೋಡಿ ಮಾಹಿತಿ..

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ದುಡಿಮೆಯ ಒಂದಷ್ಟು ಹಣವನ್ನು ಉಳಿತಾಯ ಹಾಗೂ ಹೂಡಿಕೆ (Saving and Investment) ಯೆಂದು ಕೂಡಿಡುತ್ತಾರೆ. ಹೂಡಿಕೆ ಅಥವಾ ಉಳಿತಾಯ ಎನ್ನುವುದು ಭವಿಷ್ಯ ದೃಷ್ಟಿಯಿಂದ ಬಹಳ ಅನುಕೂಲಕಾರಿಯಾಗಿದೆ. ಅಷ್ಟೇ ಅಲ್ಲದೇ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ವಿವಿಧ ಉಳಿತಾಯ ಯೋಜನೆ (Saving Scheme)ಗಳು ಲಭ್ಯವಿದ್ದು, ಆದರೆ ಹೆಚ್ಚಿನವರು ಪೋಸ್ಟ್ ಆಫೀಸಿನಲ್ಲಿರುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

ಹೌದು, ಪೋಸ್ಟ್‌ ಆಫೀಸ್‌ ನಲ್ಲಿರುವ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದೇ ಹೆಚ್ಚಿನವರು ಇಲ್ಲಿ ಹೂಡಿಕೆ ಬಯಸುವ ಮುಖ್ಯ ಕಾರಣವಾಗಿದೆ. ಆದರೆ ಭಾರತೀಯ ಅಂಚೆ ಇಲಾಖೆ ಉಳಿತಾಯ ಮಾಡುವ ಗ್ರಾಹಕರಿಗಾಗಿಯೇ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಅಧಿಕ ಲಾಭವನ್ನು ಗಳಿಸಬಹುದಾಗಿದೆ. ತಿಂಗಳಿಗೆ ಕೇವಲ 1500 ರೂಪಾಯಿಗಳ ಹೂಡಿಕೆ ಮಾಡಿದರೆ 35 ಲಕ್ಷ ರೂಪಾಯಿಗಳನ್ನು ಗಳಿಸುವ ಸುವರ್ಣವಕಾಶವಿದೆ.

ಭಾರತೀಯ ಅಂಚೆ ಇಲಾಖೆಯು ಪರಿಚಯಿಸಿದ ಈ ಯೋಜನೆಯ ಹೆಸರು ‘ಗ್ರಾಮ ಸುರಕ್ಷಾ ಯೋಜನೆ’ (Grama Suraksha Scheme). ಈ ಯೋಜನೆಯಲ್ಲಿ ಉಳಿತಾಯ ಮಾಡಲು ಬಯಸಿದರೆ 19 ರಿಂದ 55 ವರ್ಷ ವಯಸ್ಸಾಗಿರಬೇಕು. ಈ ಯೋಜನೆಯಡಿಯಲ್ಲಿ 19 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂ, 58 ವರ್ಷಗಳಿಗೆ 1463 ರೂ ಮತ್ತು 60 ವರ್ಷಗಳಿಗೆ 1411 ರೂವನ್ನು ಈ ಯೋಜನೆಯಡಿಯಲ್ಲಿ ಪಾವತಿಮಾಡಬೇಕು.

55 ವರ್ಷಗಳ ನಂತರದಲ್ಲಿ 31.60 ಲಕ್ಷ ರೂಪಾಯಿಗಳು, 58 ವರ್ಷಗಳ ನಂತರ ಹೂಡಿಕೆ ಮಾಡಿದರೆ 33.40 ಲಕ್ಷ ರೂ. ಹಾಗೂ 60 ವರ್ಷಗಳ ಹೂಡಿಕೆಯ ಅವಧಿಯಲ್ಲಿ ಸರಿಸುಮಾರು 34.60 ಲಕ್ಷ ರೂಪಾಯಿಗಳು ಹೂಡಿಕೆದಾರರ ಕೈ ಸೇರುತ್ತದೆ. ಈ ಯೋಜನೆಯಡಿಯಲ್ಲಿ ಒಂದೊಮ್ಮೆ ಪಾಲಿಸಿದಾರನು ಮರಣಹೊಂದಿದರೆ ವಿಮಾ ಮೊತ್ತವನ್ನು ನಾಮಿನಿ (Nominee) ಸಿಗುತ್ತದೆ.

ಈ ಹೂಡಿಕೆ ಯೋಜನೆಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸುವ ಅವಕಾಶವನ್ನು ನೀಡಲಾಗಿದೆ. ತು-ರ್ತು ಸಂದರ್ಭದಲ್ಲಿ ಬಳಕೆದಾರರ ಶುಲ್ಕವನ್ನು ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಒದಗಿಸಲಾಗಿದ್ದು, ಯಾವುದೇ ಅ-ಪಾಯದ ಭ-ಯವಿಲ್ಲದೇ ಹಣ ಹೂಡಿಕೆ ಮಾಡಿ ಅಧಿಕ ಆದಾಯ (Income) ವನ್ನು ಪಡೆಯಬೇಕೆಂದುಕೊಂಡವರಿಗೆ ಈ ಯೋಜನೆಯು ಬೆಸ್ಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *