ವಾಸ್ತು ಪ್ರಕಾರ ಅದೃಷ್ಟಕ್ಕೆ ಮತ್ತೊಂದು ಹೆಸರೇ ಈ ಜೇಡ್ ಸಸ್ಯ,ಈ ಒಂದು ಜೇಡ್ ಸಸ್ಯ ಮನೆಯಲ್ಲಿ ಇದ್ದರೆ ಕಥೆ ನೇ ಬೇರೆ! ಇಲ್ಲಿದೆ ಅಸಲಿ ವಿಚಾರ

ಕೆಲವು ಸಸ್ಯಗಳು ಅದೃಷ್ಟ (Luck) ವನ್ನು ಸೂಚಿಸುತ್ತದೆ. ಈ ಸಸ್ಯಗಳು ತಾವು ಇರುವ ಸ್ಥಳಗಳಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ. ಅಂತಹ ಸಸ್ಯಗಳಲ್ಲಿ ಜೇಡ್ ಸಸ್ಯ (Jade plant) ಗಳು ಕೂಡ ಒಂದು. ಫೆಂಗ್ ಶೂಯಿಯಲ್ಲಿ ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುವ ಸುಂದರವಾದ ಹಸಿರು ಸಸ್ಯಗಳಾಗಿವೆ. ಜೇಡ್ ಸಸ್ಯವು ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಎರಡರಲ್ಲೂ ಭಾರಿ ಮಹತ್ವವನ್ನು ಹೊಂದಿದೆ.

ವಾಸ್ತು ಪ್ರಕಾರ, ಈ ಸಸ್ಯವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ವಿವಿಧ ಲಾಭಗಳನ್ನು ಪಡೆಯಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿದು ಕೊಳ್ಳಬಹುದಾಗಿದೆ. ಮನೆಯಲ್ಲಿ ಜೇಡ್ ಸಸ್ಯವನ್ನು ಇಟ್ಟುಕೊಂಡರೆ ಮ್ಯಾಜಿಕ್ ನಂತೆಯೇ ಕೆಲಸ ಮಾದುತ್ತದೆ. ಆದರೆ ಈ ಸಸ್ಯವನ್ನು ವಾಸ್ತು ಪ್ರಕಾರವಾಗಿ ನಿಮ್ಮ ಮನೆಯ ಮಧ್ಯದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಹೀಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸುಖ ಶಾಂತಿ ಹಾಗೂ ಸಾಮರಸ್ಯದಿಂದ ಕೂಡಿದ ವಾತಾವರಣವು ಸೃಷ್ಟಿಯಾಗುತ್ತದೆ. ಕುಟುಂಬ ಸದಸ್ಯರ ಆರೋಗ್ಯ (Health) ವು ಸುಧಾರಿಸುವುದರ ಜೊತೆಗೆ ಸಕಾರಾತ್ಮಕ ಅಂಶಗಳು ತುಂಬಿರುತ್ತದೆ.

ಅಂಗಡಿ ಅಥವಾ ವ್ಯವಹಾರ (Shop) ಸ್ಥಳದಲ್ಲಿ ಜೇಡ್ ಸಸ್ಯವನ್ನು ಇಟ್ಟುಕೊಂಡರೆ ಆರ್ಥಿಕ ಪ್ರಯೋಜನಗಳನ್ನು ತರುತ್ತದೆ. ಮಾರಾಟದ ವೇಳೆಯಲ್ಲಿ ಅಧಿಕ ಲಾಭ (Profit) ವನ್ನು ಪಡೆಯಬಹುದು. ವಾಸ್ತು ಪ್ರಕಾರ, ಜೇಡ್ ಪ್ಲಾಂಟನ್ನು ಕ್ಯಾಶ್ ಕೌಂಟರ್ (Cash Counter)ಬಳಿ ಇಡುವುದು ಉತ್ತಮವಾಗಿದೆ. ಈ ಸಸ್ಯವನ್ನು ಇಟ್ಟುಕೊಂಡರೆ ನಷ್ಟದ ಪ್ರಮಾಣ ಕಡಿಮೆ ಮಾಡುತ್ತದೆ.ಇನ್ನು ಈ ಕಚೇರಿಯಲ್ಲಿ ಈ ಜೇಡ್ ಸಸ್ಯವನ್ನು ಇಡುವುದರಿಂದ ಸಕಾರಾತ್ಮಕತೆಯಿಂದ ತುಂಬಿದ ವಾತಾವರಣವನ್ನು ಸೃಷ್ಟಿಯಾಗುತ್ತದೆ. ವ್ಯಾಪಾರ ಹಾಗೂ ವ್ಯವಹಾರವು ಲಾಭದಾಯಕವಾಗಿರುತ್ತದೆ ಜೇಡ್ ಸಸ್ಯವು ಕೆಲಸದ ಸ್ಥಳ ಅಥವಾ ಕಚೇರಿ ಪ್ರಗತಿ (Improvement) ಯನ್ನು ಹೆಚ್ಚಿಸುತ್ತದೆ ಹೊಸ ವೃತ್ತಿ ಅವಕಾಶ ಅಥವಾ ವ್ಯವಹಾರ ಒಪ್ಪಂದಗಳ ಅವಕಾಶಗಳನ್ನು ಮಾಡಿಕೊಡಬಹುದು.

ಅದಲ್ಲದೇ ವಾಸ್ತು ಪ್ರಕಾರ ಜೇಡ್ ಸಸ್ಯವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎನ್ನುವುದನ್ನು ತಿಳಿಯುವುದು ಮುಖ್ಯ. ಈ ವಾಸ್ತು ಶಾಸ್ತ್ರದ ಪ್ರಕಾರ, ಜೇಡ್ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅದರ ಸಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಆಗ್ನೆಯ ದಿಕ್ಕಿನಲ್ಲಿ ಜೇಡ್ ಸಸ್ಯವನ್ನು ಇಟ್ಟರೆ ಅತ್ಯಂತ ಪ್ರಯೋಜನಕಾರಿಯಾಗಲಿದೆ.

ಆರ್ಥಿಕ ಪರಿಸ್ಥಿತಿ (Financial Status) ಯನ್ನು ಸುಧಾರಿಸಲು ನಿಮ್ಮ ಅಂಗಡಿ ಅಥವಾ ಮನೆಯ ಆಗ್ನೆಯದಲ್ಲಿ ಈ ಸಸ್ಯವನ್ನು ಇರಿಸುವುದು ಉತ್ತಮ. ಹಣದ ಸಮಸ್ಯೆಯನ್ನು ನಿವಾರಿಸಿ ಲಾಭವನ್ನು ನೀಡುತ್ತದೆ.ಇನ್ನು, ಜೇಡ್ ಸಸ್ಯವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿದರೆ, ಅದು ನಿಮ್ಮ ಕುಟುಂಬಕ್ಕೆ ದೀರ್ಘಾಯುಷ್ಯವನ್ನು ನೀಡುತ್ತದೆ ಉತ್ತಮ ಆರೋಗ್ಯ (Good Health) ವನ್ನು ನೀಡುವುದರ ಜೊತೆಗೆ, ಮನಸ್ಸಿನ ಶಾಂತಿ ಮತ್ತು ಉತ್ತಮ ಮಾನಸಿಕ ಆರೋಗ್ಯವನ್ನು ಪಡೆಯಬಹುದು.

ಪಶ್ಚಿಮ ದಿಕ್ಕಿನಲ್ಲಿ ಈ ಜೇಡ್ ಸಸ್ಯವನ್ನು ಇಟ್ಟುಕೊಂಡರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ವೃತ್ತಿಯಲ್ಲಿ ತೊಡಗಿಕೊಂಡವರು ಕಚೇರಿಯ ಪಶ್ಚಿಮದಲ್ಲಿ ಇಡುವುದು ಉತ್ತಮ. ಹೀಗೆ ಇಟ್ಟರೆ ಜ್ಞಾನದ ವಾತಾವರಣವನ್ನು ಸೃಷ್ಟಿಸಿ, ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *