ದಿಢೀರನೆ ಮರಣ ಹೊಂದಿದ ಪೂನಂ ಪಾಂಡೆ: ನಟಿಯ ಮರಣಕ್ಕೆ ನಿಜವಾದ ಕಾರಣ ಏನು ಗೊತ್ತಾ?

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಅನಿರೀಕ್ಷಿತವಾಗಿ ಮರಣ ಹೊಂದುತ್ತಿರುವುದು ನಿಜಕ್ಕೂ ಕೂಡ ಅವರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸುತ್ತಿದೆ ಎಂದು ಹೇಳಬಹುದಾಗಿದ್ದು, ಈಗ ಈ ಸಾಲಿಗೆ ಬಾಲಿವುಡ್ ಚಿತ್ರರಂಗದ ಖ್ಯಾತ ಮಾಡೆಲ್ ಹಾಗೂ ಮಾದಕ ನಟಿ ಆಗಿರುವಂತಹ ಪೂನಂ ಪಾಂಡೆ ಕೂಡ ಸೇರಿಕೊಂಡಿದ್ದಾರೆ. ಹೌದು ನಿನ್ನೆ ರಾತ್ರಿ ಅವರು ಮರಣ ಹೊಂದಿದ್ದಾರೆ ಎನ್ನುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಸೆಲೆಬ್ರಿಟಿಗಳ ಜೀವನದಲ್ಲಿ ಏನೇ ಆದರೂ ಕೂಡ ಖಂಡಿತವಾಗಿ ಅವರ ಅಭಿಮಾನಿಗಳಿಗೆ ಅದು ಸಾಮಾನ್ಯ ವಿಚಾರಕ್ಕಿಂತ ಹೆಚ್ಚಿನದಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಪೂನಂ ಪಾಂಡೆ ಅವರು ತಮ್ಮ ಮಾದಕ ನೋಟಗಳಿಂದ ಹಾಗೂ ಕೆಲವೊಂದು ವಿಚಾರಗಳಿಂದಾಗಿ ಸದಾ ಕಾಲ ಸುದ್ದಿಯಲ್ಲಿ ಇದ್ದಂತಹ ನಟಿಯಾಗಿದ್ದರು. ಸರಿಯಾದ ರೀತಿಯಲ್ಲಿ ಗಮನಿಸುವುದಾದರೆ 2011 ರಲ್ಲಿ ಭಾರತ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಪೂನಂ ಪಾಂಡೆ ಅವರು ಸಖತ್ ಸುದ್ದಿಯಲ್ಲಿದ್ದರು.

ಒಂದು ವೇಳೆ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ತಾನು ಸಂಪೂರ್ಣವಾಗಿ ಬಟ್ಟೆ ಬಿಚ್ಚುತ್ತೇನೆ ಎಂಬುದಾಗಿ ಹೇಳಿಕೆಯನ್ನು ನೀಡಿದ್ದರು. ಇದಾದ ನಂತರ ಈಗ ಅವರು ದಿಢೀರನೆ ರಾತ್ರಿ ಸಂದರ್ಭದಲ್ಲಿ ಮರಣ ಹೊಂದಿರುವಂತಹ ಸುದ್ದಿ ಕೇಳಿ ಬಂದಿರುವುದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿದೆ. ಹಾಗಿದ್ರೆ ಬನ್ನಿ ಅವರು ಮರಣ ಹೊಂದುವುದಕ್ಕೆ ನಿಜವಾದ ಕಾರಣ ಏನಾಗಿತ್ತು ಎನ್ನುವುದನ್ನು ತಿಳಿಯೋಣ.

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಪೂನಂ ಪಾಂಡೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮರಣವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಪೂನಂ ಪಾಂಡೆ ಅವರಿಗೆ ಕೇವಲ 32 ವರ್ಷ ವಯಸ್ಸಾಗಿದ್ದು ಇಷ್ಟೊಂದು ಚಿಕ್ಕ ವಯಸ್ಸಿಗೆ ಇಹಲೋಕ ಯಾತ್ರೆಯನ್ನು ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ಅಗಲಿರುವಂತಹ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಆಪ್ತೇಷ್ಟರಿಗೆ ಅವರನ್ನು ಕಳೆದುಕೊಂಡಿರುವಂತಹ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

Leave a Reply

Your email address will not be published. Required fields are marked *