ದಾಳಿಂಬೆ ಹಣ್ಣನ್ನು ಈ ರೀತಿ ತಿನ್ನುವುದರಿಂದ ನಿಮಗೆ ಯಾವ ಜನ್ಮದಲ್ಲೂ ಸಕ್ಕರೆ ಕಾಯಿಲೆ ಬರುವುದಿಲ್ಲ ..!!

Pomegranate benefits : ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…ರುಚಿಯಾದ ರಸಭರಿತ ಹಣ್ಣುಗಳನ್ನು ಚಪ್ಪರಿಸಿ ತಿನ್ನುವುದರ ಮಜವೇ ಬೇರೆ. ಕೆಲವು ಹಣ್ಣುಗಳು ಅವುಗಳ ಸುಂದರ ಬಣ್ಣದಿಂದಲೇ ನಮ್ಮನ್ನು ಆಕರ್ಷಿಸಿದರೆ ಕೆಲವು ತಮ್ಮ ಸುಗಂಧಗಳಿಂದ ತಿನ್ನಲೇಬೇಕೆಂದೆನಿಸುವಂತೆ ಮಾಡುತ್ತವೆ. ಪೋಷಕಾಂಶ, ನೀರಿನಾಂಶ, ಖನಿಜಾಂಶ, ನಾರಿನಾಂಶ ಹೀಗೆ ದೇಹಕ್ಕೆ ಅವಶ್ಯಕತೆ ಇರುವ ಆಹಾರ ಘಟಕಗಳನ್ನು ಹಣ್ಣುಗಳು ಹೊಂದಿರುತ್ತವೆ.

ಗುಲಾಬಿ ಮಿಶ್ರಿತ ಕೆಂಪು ಬಣ್ಣದ ದಾಳಿಂಬೆ ಹಣ್ಣುಗಳು ಸವಿಯಲು ರುಚಿ ಆಗಿರುವುದಷ್ಟೇ ಅಲ್ಲದೆ ಆರೋಗ್ಯಕರವಾಗಿಯೂ ಹಿತ…ಆಂಟಿ ಆಕ್ಸಿಡೆಂಟ್, ಆಂಟಿವೈರಲ್, ಆಂಟಿ ಟ್ಯೂಮರ್ ಗುಣಗಳನ್ನು ಹೊಂದಿರುವ ದಾಳಿಂಬೆ ಹಣ್ಣುಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಪೋಲಿಕ್ ಆಮ್ಲಗಳಿವೆ. ದಾಳಿಂಬೆ ಹಣ್ಣುಗಳನ್ನು ಪ್ರತಿನಿತ್ಯವು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗುವುದಲ್ಲದೆ ಮಧುಮೇಹ, ರಕ್ತದೊತ್ತಡಗಳು ಹದ ಸ್ಥಿತಿಗೆ ಬರುತ್ತವೆ.

Pomegranate benefitsin kannada :

ದಾಳಿಂಬೆ ಹಣ್ಣಿನಲ್ಲಿ ಸಾಕಷ್ಟು ನಾರಿನಂಶಗಳಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದರಿಂದಾಗಿ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ನೆನಪಿನಲ್ಲಿಡಬೇಕಾದ ವಿಷಯವೆಂದರೆ ದಾಳಿಂಬೆ ಬೀಜಗಳಲ್ಲಿ ಫೈಬರ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ದಾಳಿಂಬೆ ಹಣ್ಣಿನ ಸೇವನೆಯಿಂದ ರಕ್ತವು ಸರಿಯಾಗಿ ಸುಲಭವಾಗಿ ಹರಿಯಲು ಸಹಾಯವಾಗುತ್ತದೆ. ಯಾಕೆಂದರೆ ಇದು ರಕ್ತದ ಪ್ಲೇಟ್ಲೆಟ್ಸ್ ಗಳು ಅತಿಯಾಗಿ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೆ ಸಣ್ಣ ಪುಟ್ಟ ಹೃದಯದ ತೊಂದರೆಗಳು ಕೂಡ ನಿವಾರಣೆಯಾಗುತ್ತದೆ.

Pomegranate benefits
Pomegranate benefits

ಅನವಶ್ಯಕ ಕೊಲೆಸ್ಟ್ರಾಲ್ ಗಳ ಪ್ರಮಾಣವನ್ನು ಕೂಡ ಕಡಿಮೆಗೊಳಿಸುತ್ತದೆ. ಪಾರ್ಶ್ವವಾಯುವಿನಂತಹ ರೋಗಗಳಿಗೆ ತುತ್ತಾಗುವುದರಿಂದ ನಿಮ್ಮನ್ನು ಪಾರು ಮಾಡುತ್ತದೆ. ಸಂಧಿವಾತ, ಕೀಲು ನೋವುಗಳ ನಿವಾರಣೆಗೂ ಕೂಡ ದಾಳಿಂಬೆ ಹಣ್ಣುಗಳು ಸಹಕಾರಿಯಾಗಿದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ದಾಳಿಂಬೆ ಹಣ್ಣಿನ ರಸ ಅಥವಾ ತಿರುಳುಗಳ ಸೇವನೆಯು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ.

ಇವುಗಳ ಸೇವನೆಯಿಂದಷ್ಟೇ ಅಲ್ಲದೆ ಚರ್ಮಕ್ಕೆ ಲೇಪಿಸುವುದರಿಂದಲೂ ಹಲವಾರು ಉಪಯೋಗಗಳಿವೆ. ದಾಳಿಂಬೆ ಹಣ್ಣುಗಳನ್ನು ನೈಸರ್ಗಿಕ ಟೋನರ್ ಗಳಾಗಿ ಉಪಯೋಗಿಸುತ್ತಾರೆ. ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದು ಬಳಿಕ ಸ್ವಲ್ಪ ದಾಳಿಂಬೆ ರಸದೊಂದಿಗೆ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ ವಾರಕ್ಕೆ 2 ರಿಂದ 3 ಬಾರಿ ಹಚ್ಚುವುದರಿಂದ ವಿಶೇಷವಾದ ಹೊಳಪು ಮತ್ತು ಬಣ್ಣ ದೊರೆಯುತ್ತದೆ.

ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರು ಕೆಲವೊಂದಿಷ್ಟು ಹಣ್ಣುಗಳನ್ನು ಸೇವಿಸಬಾರದು ಎಂದಿರುತ್ತದೆ ಆದರೆ ದಾಳಿಂಬೆ ಹಣ್ಣುಗಳು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾಗಿದ್ದು, ಗರ್ಭಿಣಿಯರು ಕೂಡ ಸೇವಿಸಬಹುದಾಗಿದೆ.ದಾಳಿಂಬೆ ಹಣ್ಣಿನ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…

Leave a Reply

Your email address will not be published. Required fields are marked *