ತನಿಷಾ ವಿಚಾರಣೆ ಮಾಡಲು ಬಿಗ್ ಬಾಸ್ ಮನೆಗೆ ಬಂದ ಪೊಲೀಸರು!! ಇದ್ದಕ್ಕಿದ್ದಂತೆ ತನಿಷಾ ಮನೆಯಿಂದ ಆಚೆ?..

ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ನಡೆದು ಸ್ಟೇಜ್ ಮೇಲೆ ಹೋಗುವವರಿಗಿಂತ ಜಾಸ್ತಿ ಪೊಲೀಸ್ ಠಾಣೆಗೆ ಹೋಗುವವರು ಜಾಸ್ತಿ ಆಗಿದ್ದಾರೆ.. ಹುಲಿ ಉಗುರಿನ ವಿಚಾರವಾಗಿ ವರ್ತೂರು ಸಂತೋಷ್ ಅವರು ಬಂಧನಕ್ಕೆ ಒಳಗಾಗಿದ್ದರು ಬಿಗ್ ಬಾಸ್ ಮನೆಯಿಂದಲೇ ಪೊಲೀಸ್ ಅವರು ಸಂತೋಷ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಅಲ್ಲೇ ಕೂರಿಸಿಕೊಂಡು ವಿಚಾರಣೆ ಮಾಡಿದ್ದರು..

ಇದೀಗ ತನಿಷಾ ಅವರಿಗೆ ಕೂಡ ಇದೇ ಸಂಕಷ್ಟ ಎದುರಾಗಿದೆ. ಹಾಗಾದರೆ ತನೀಶ ಅವರನ್ನು ವಿಚಾರಣೆ ಮಾಡಲು ಕಾರಣ ಏನು ಗೊತ್ತಾ ಮನೆಯಲ್ಲಿ ತನಿಷ್ ಅವರು ಡ್ರೋನ್ ಪ್ರತಾಪ್ ಅವರ ಜೊತೆ ಮಾತನಾಡುವ ಸಂದರ್ಭದಲ್ಲಿ ವಡ್ಡನ ತರ ಆಡಬೇಡ ಎಂದು ಹೇಳಿದರು. ಬಿಗ್ ಬಾಸ್ ವೇದಿಕೆಯಲ್ಲಿ ಅಥವಾ ಯಾವುದೇ ಒಂದು ಪಬ್ಲಿಕ್ ವೇದಿಕೆಯಲ್ಲಿ ಜಾತಿ ವಾಚಕ ಶಬ್ದಗಳನ್ನು ಬಳಸುವುದು ನಿಷೇಧ.

ತನಿಷಾ ಕುಪ್ಪಂಡ ಅವರು ಬಳಸಿದ ಈ ಒಂದು ವಡ್ಡ ಎಂಬ ಪದ ನಿಷೇಧಾತ್ಮಕ ಹೇಳಿಕೆಯಾಗಿದೆ. ಮತ್ತು ಈ ಪದ ಭೋವಿ ಜನಾಂಗದವರನ್ನು ಅವಮಾನಿಸಿದಂತೆ ಎಂದು ತನಿಷ ಅವರ ವಿರುದ್ಧ ಆರೋಪ ಮಾಡಿದ್ದಾರೆ.ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವವರು ದೂರು ನೀಡಿದ್ದಾರೆ.

ಬೆಂಗಳೂರಿನ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಪಿ. ಪದ್ಮಾ ಅವರು ತನಿಷ ಅವರ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಪದ್ಮಾ ಅವರು ನೀಡಿದ ದೂರಿನಲ್ಲಿ ಈ ರೀತಿಯಾಗಿ ಹೇಳಿಕೆ ನೀಡಲಾಗಿದೆ.. ‘ಖಾಸಗಿ ವಾಹಿನಿಯ Bigg Boss Reality Showನಲ್ಲಿ ತನಿಷಾ ಕುಪ್ಪಂಡ ಅವರು ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಈ ಮೂಲಕ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು, ಅವರು ಮತ್ತು ಬಿಗ್‌ ಬಾಸ್‌ ಮುಖ್ಯಸ್ಥರು ಕ್ಷಮೆ ಯಾಚಿಸಬೇಕುʼʼ ಎಂದು ಆಗ್ರಹಿಸಲಾಗಿದೆ.

ಈ ದೂರನ್ನು ದಾಖಲಿಸಿಕೊಂಡು ಡಿವೈಎಸ್ಪಿ ಪ್ರವೀಣ್, ಕುಂಬಳಗೋಡು ಇನ್ಸ್ ಪೆಕ್ಟರ್ ಶಿವಾರೆಡ್ಡಿ ಅವರು ತಮ್ಮ ತಂಡವನ್ನು ಕರೆದುಕೊಂಡು ಬಿಗ್ ಬಾಸ್ ವೇದಿಕೆ ಗೆ ಭೇಟಿ ಕೊಟ್ಟು ತನಿಶಾ ಮತ್ತು ಡ್ರೋನ್ ಪ್ರತಾಪ್ ಇಬ್ಬರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.. ಈ ಒಂದು ಪ್ರಕರಣ ಮುಂದೆ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ. ತನಿಷಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಗುತ್ತದೆಯಾ.. ಅಥವಾ ಬಹಿರಂಗವಾಗಿ ಕ್ಷಮೆಯಾಚನೆ ಮಾಡುತ್ತಾರಾ.. ಎಂಬುದನ್ನು ಕಾದು ನೋಡಬೇಕಾಗಿದೆ..

Leave a Reply

Your email address will not be published. Required fields are marked *