Phoolan devi life story : ಬೆಹಮಾಯಿ ಹ-ತ್ಯಾಕಾಂಡದ ಹಿಂದೆ ಕೇಳಿ ಬಂದಿದ್ದ ಫೂಲನ್ ದೇವಿ ಬಗ್ಗೆ ನಿಮಗೆಷ್ಟು ಗೊತ್ತು? ಗ್ರಾಮದ ಜನರನ್ನು ಗುಂಡಿ-ಕ್ಕಿ ಕೊ-ಲ್ಲಲು ಕಾರಣವಾಗಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ.. ಕೆಲವು ಮಹಿಳೆಯರ ಬದುಕಿನತ್ತ ಕಣ್ಣು ಹಾಯಿಸಿದರೆ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಸಹಜವಾಗಿಯೇ ಮೂಡುತ್ತದೆ. ಅದಲ್ಲದೇ ಕೆಲವರ ಬದುಕಿನಲ್ಲಿ ನಡೆದ ಘಟನೆಗಳು ಎಂತಹವರನ್ನು ಕೂಡ ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ. ಈ ಫೂಲನ್ ದೇವಿಯ ಅನೇಕರಿಗೆ ಗೊತ್ತಿರಬಹುದು.
1980 ರ ದಶಕದಲ್ಲಿ ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದ-ರೋಡೆಕೋರ ಗ್ಯಾಂಗ್‌ಗಳಲ್ಲಿ ಫೂಲನ್ ಒಬ್ಬರಾಗಿದ್ದರು ಎಂದರೆ ಅಚ್ಚರಿಯೆನಿಸಬಹುದು. 1981ರಲ್ಲಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ ನಡೆದ ಹ-ತ್ಯಾಕಾಂಡವು ಇವತ್ತಿಗೂ ಕೂಡ ಒಂದು ಕ್ಷಣ ಎಲ್ಲರ ಮೈ ಜುಮ್ಮ್ ಎನ್ನುವಂತೆ ಮಾಡಿ ಬಿಡುತ್ತದೆ. ಅಂದು ಫೆಬ್ರವರಿ14ರಂದು ಫೂಲನ್ ದೇವಿ ಸೇರಿದಂತೆ ಆಕೆಯ ಗ್ಯಾಂಗ್ ನಿಂದ ಮೇಲ್ವರ್ಗದ ಠಾಕೂರ್ ಸಮುದಾಯಕ್ಕೆ ಸೇರಿದ 20 ಮಂದಿಯನ್ನು ಶೂ-ಟ್ ಮಾಡಿ ಕೊಂ ದಿದ್ದರು.
ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ಕಳೆದ ಜನವರಿ 18 ರಂದು ಕಾನ್ಪುರ ಕೋರ್ಟ್ ಈ ಘಟನೆಗೆ ಸಂಬಂಧಪಟ್ಟಂತೆ ತೀರ್ಪು ನೀಡಿದೆ.ಹೌದು, 1963 ರಲ್ಲಿ ಜನಿಸಿದ ಫೂಲನ್ ದೇವಿ ಮೇಲ್ವರ್ಗದವರಿಂದ ತುಳಿತಕ್ಕೊಳಗಾಗಿದ್ದರು. ಆದಾದ ಬಳಿಕ ಈಕೆಯು ಕೂಡ ದರೋಡೆಕೋರರ ಗುಂಪನ್ನು ಸೇರಿಕೊಂಡಿದ್ದಳು. 70, 80 ಮತ್ತು 90 ರ ದಶಕಗಳಲ್ಲಿ, ದ’ರೋಡೆಕೋರ ಗ್ಯಾಂಗ್‌ಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕಣಿವೆಗಳಲ್ಲಿ ಇದ್ದವು. ಇತ್ತ ಬಡತನ ಮತ್ತು ದೌ-ರ್ಜನ್ಯಗಳಿಂದ ಸೋತೋಗಿದ್ದ ಫೂಲನ್ ಗ್ಯಾಂಗ್ ಸೇರಿಬಿಟ್ಟಿದ್ದಳು.

ಈ ವೇಳೆಯಲ್ಲಿ ಫೂಲನ್ ಆ ಗ್ಯಾಂಗ್‌ನಲ್ಲಿ ಮೇಲ್ಜಾತಿಯ ವಿಕ್ರಮ್ ಮಲ್ಲನನ್ನು ಪ್ರೀತಿಸಿದಳು. ಈ ಪ್ರೀತಿಯ ವಿಚಾರವು ಗುಂಪಿನಲ್ಲಿದ್ದವರನ್ನು ಕೆ’ರಳಿಸುವಂತೆ ಮಾಡಿತ್ತು. ಹೀಗಿರುವಾಗ ಗ್ಯಾಂಗ್ ಗಳ ನಡುವೆಯೇ ಗುಂ-ಡಿನ ಚಕಮಕಿಯಲ್ಲಿ ವಿಕ್ರಮ್ ಮಲ್ಲ ಜೀವ ತೆ’ಗೆದೇ ಬಿಟ್ಟರು. ಆದಾದ ಬಳಿಕ ಲಾಲಾ ರಾಮ್ ಮತ್ತು ಶ್ರೀ ರಾಮ್ ಎಂಬ ಇಬ್ಬರು ಗ್ಯಾಂಗ್ ಸದಸ್ಯರು ಫೂಲನ್ ದೇವಿಯನ್ನು ಅ”ಪಹರಿಸಿದ್ದರು. ಅದಲ್ಲದೇ ಈಕೆಯನ್ನು ಅಪಹರಿಸಿ ಬೆಹಮೈಗೆ ಕರೆದೊಯ್ದು ನಿರಂತರವಾಗಿ ಆ-ತ್ಯಾಚಾರ ಮಾಡುತ್ತಿದ್ದರು.
ತನ್ನ ಪ್ರೇಮಿಯನ್ನು ಕಣ್ಣಾರೆ ಕೊಂ-ದದ್ದನ್ನು ಕಂಡ ಫೂಲನ್ ತನ್ನ ಪ್ರೇಮಿಯ ಕೊ-ಲೆ ಮತ್ತು ಆ-ತ್ಯಾಚಾರಕ್ಕೆ ಸೇ-ಡು ತೀರಿಸಿಕೊಳ್ಳಲು ಮುಂದಾದಳು. ಹೀಗಾಗಿ 1981, ಫೆಬ್ರವರಿ14, ಪ್ರೇಮಿಗಳ ದಿನದಂದು, ತನ್ನ ಗ್ಯಾಂಗ್‌ನೊಂದಿಗೆ ಬೆಹಮಾಯಿ ಗ್ರಾಮದ ಮೇಲೆ ದಾ-ಳಿ ಮಾಡಿ ಎಲ್ಲವನ್ನು ಲೂ’ಟಿ ಮಾಡಿದ್ದಳು. ಅಷ್ಟೇ ಅಲ್ಲದೇ ತನ್ನನ್ನು ಆ-ತ್ಯಾಚಾರ ಮಾಡಿದ ಇಬ್ಬರು ದ-ರೋಡೆಕೋರರು ಸೇರಿದಂತೆ ಸಮುದಾಯದ 26 ಸದಸ್ಯರನ್ನು ಸಾಲುಗಟ್ಟಿ ಗುಂಡಿ-ಕ್ಕಿ ಕೊಂ’ದಳು. ಹೀಗಿರುವಾಗ ಅವರಲ್ಲಿ 6 ಮಂದಿ ಮಾತ್ರ ಬದುಕುಳಿದಿದ್ದು,
20 ಮಂದಿ ಸಾ-ವನ್ನಪ್ಪಿದ್ದರು. ಹ-ತ್ಯಾಕಾಂಡದ ಒಂದೆರಡು ವರ್ಷಗಳಲ್ಲಿ ಫೂಲನ್ ದೇವಿ ಕೂಡ ಶರಣಾದಳು. ಹದಿನೈದು ವರ್ಷ ಜೈ-ಲುವಾಸ ಅನುಭವಿಸಿದ್ದು, ಹೊರ ಬಂದ ಬಳಿಕ ರಾಜಕೀಯದಲ್ಲಿ ತೊಡಗಿದ್ದು, ಎರಡು ಬಾರಿ ಸಂಸದೆಯೂ ಆಗಿದ್ದರು. 2001 ರಲ್ಲಿ, ಅವರ ನಿವಾಸದ ಮುಂದೆ ಪ್ರತಿಸ್ಪರ್ಧಿ ಗ್ಯಾಂಗ್ ಆಕೆಯ ಕಥೆ ಮುಗಿಸಿ ಬಿಟ್ಟರು.ಅದಲ್ಲದೇ ಆ-ತ್ಯಾಚಾರಕ್ಕೆ ಪ್ರತೀಕಾರವಾಗಿ 20 ಠಾಕೂರರನ್ನು ಕೊಂ-ದಿರುವುದಾಗಿ ಫೂಲನ್ ದೇವಿ ಹೇಳಿಕೆ ನೀಡಿದ್ದಳು.
ಆದರೆ, ಫೂಲನ್ ದೇವಿಯ ಈ ವಾದವನ್ನು ಬೆಹಮಾಯಿ ಗ್ರಾಮಸ್ಥರು ನಿರಾಕರಿಸಿದ್ದರು. ಆ ಗ್ರಾಮಸ್ಥರಿಗೆ, ಈಕೆಯ ಮೇಲೆ ಆದ ಯಾವುದೇ ಆ-ತ್ಯಾಚಾರ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ಫೂಲನ್ ದೇವಿ ತಮ್ಮ ಗ್ರಾಮವನ್ನು ದ’ರೋಡೆ ಮಾಡಲು ಆಗಮಿಸಿದ್ದಳು. ಅವಳು 20 ಜನರನ್ನು ಗುಂಡಿಕ್ಕಿ ಕೊಂ-ದಿದ್ದಾಳೆ ಎನ್ನುವುದು ಮಾತ್ರ ಗ್ರಾಮಸ್ಥರ ಹೇಳುವ ಮಾತಾಗಿತ್ತು. ಹೀಗಾಗಿ ಈ ಪ್ರಕರಣದ ವಿಚಾರಣೆ ಕಾನ್ಪುರ ನ್ಯಾಯಾಲಯದಲ್ಲಿ ನಡೆದಿತ್ತು. ಕಳೆದ ಜ.6 ತೀರ್ಪು ನೀಡಬೇಕಿತ್ತು. ಆದರೆ, ಕೋರ್ಟ್ ಜೆ.ತೀರ್ಪು 16ಕ್ಕೆ ಮುಂದೂಡಿತು.

ಆದರೆ, ಬೆಹ್ಮಾಯಿ ಹ-ತ್ಯಾಕಾಂಡ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದಲ್ಲಿ 23 ಆ’ರೋಪಿಗಳಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಫೂಲನ್ ದೇವಿ ಸೇರಿದಂತೆ 16 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಇತರ ಏಳು ಆ’ರೋಪಿಗಳ ಪೈಕಿ ಪೋಸಾ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಇನ್ನುಳಿದ್ದಂತೆ ಭೀಕಾ, ವಿಶ್ವನಾಥ್ ಮತ್ತು ಶ್ಯಾಂಬಾಬು ಜಾಮೀನಿನ ಮೇಲೆ ಹೊರಗಿದ್ದಾರೆ. ಉಳಿದ ಮೂವರಾದ ಮಾನ್ ಸಿಂಗ್, ರಾಮಕೇಶ್ ಮತ್ತು ವಿಶ್ವನಾಥ್ ಅಕಾ ಅಶೋಕ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.