ದರ್ಶನ್ ರವರ 2ನೇ ಪತ್ನಿ ಪವಿತ್ರ ಗೌಡ ಅವರ ಮೊದಲ ಪತಿ ಏನಾಗಿದ್ರು ಗೊತ್ತಾ? ಪವಿತ್ರ ಗೌಡ ಅವರ ಮಗಳು ಅಪ್ಪ ಯಾರು?

ಸ್ನೇಹಿತರೆ ಈಗಾಗಲೇ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಓಡಾಡುತ್ತಿರುವ ಸುದ್ದಿ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪವಿತ್ರ ಗೌಡ ಅವರನ್ನು ಎರಡನೇ ಮದುವೆಯಾಗಿ ಈಗಾಗಲೇ ಹತ್ತು ವರ್ಷಗಳ ಕಳೆದಿವೆ ಎನ್ನುವಂತಹ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೀವನದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಸಾಕಷ್ಟು ವಿವಾದಾತ್ಮಕ ವಿಚಾರಗಳು ಈಗಾಗಲೇ ಹೊರ ಬರುತ್ತಿರುವುದನ್ನು ನೀವು ಕಣ್ಣಾರೆ ನೋಡಿದ್ದೀರಿ. ಈಗ ಆ ಸುದ್ದಿಗೆ ಇದು ಮತ್ತೊಂದು ಸೇರ್ಪಡೆ ಎಂದು ಹೇಳಬಹುದು.

ಇನ್ನು ಇದರ ಬಗ್ಗೆ ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ದರ್ಶನ್ ರವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದ ಕಾರಣದಿಂದಾಗಿ ಪವಿತ್ರ ಗೌಡ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವೊಂದು ವಿಚಾರಗಳನ್ನು ಬಹಿರಂಗ ಪಡಿಸಿರುವುದು ಕೂಡ ಈಗ ಇನ್ನಷ್ಟು ಹೆಚ್ಚಿನ ಸುದ್ದಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.

ನಾನು ಮೊದಲನೇ ಮದುವೆಯಾಗಿ ನಂತರ ಖುಷಿ ಗೌಡ ಎನ್ನುವಂತಹ ಮಗಳು ಜನಿಸಿದ್ದಾಳೆ ಹಾಗೂ ನಂತರ ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನಾನು ತನ್ನ ಮೊದಲ ಗಂಡ ಸಂಜಯ್ ಸಿಂಗ್ ರವರಿಂದ ವಿವಾಹ ವಿಚ್ಛೇದವನ್ನು ಪಡೆದುಕೊಂಡು ಕಳೆದ ಹತ್ತು ವರ್ಷಗಳಿಂದಲೂ ಕೂಡ ದರ್ಶನ್ ರವರ ಜೊತೆಗೆ ಪ್ರೀತಿಯಿಂದ ಇದ್ದೇನೆ ಹಾಗೂ ಯಾವತ್ತೂ ಕೂಡ ನನ್ನ ಮಗಳು ಖುಷಿ ದರ್ಶನ್ ಶ್ರೀನಿವಾಸ್ ಅವರ ಮಗಳು ಎಂಬುದಾಗಿ ಎಲ್ಲಿ ಕೂಡ ನಾನು ಹೇಳಿಕೊಂಡಿಲ್ಲ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಕೂಡ ನಾನು ಮತ್ತು ದರ್ಶನ್ ಶ್ರೀನಿವಾಸರವರು ಜೊತೆಗೆ ಇರುವುದು ಅವರ ಮೊದಲ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಕೂಡ ತಿಳಿದಿದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರ ಗೌಡ ಅವರ ಮೊದಲನೇ ಗಂಡ ಸಂಜಯ್ ಸಿಂಗ್ ಅವರ ಬಗ್ಗೆ ಕೆಲವೊಂದು ಮಾಹಿತಿಗಳು ಕೂಡ ದೊರಕಿವೆ.

ಪವಿತ್ರ ಗೌಡ ಅವರು 18ನೇ ವಯಸ್ಸಿನಲ್ಲಿ ಸಂಜಯ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಎಂಬುದಾಗಿ ತಿಳಿದು ಬಂದಿದ್ದು ಸಂಜಯ್ ಸಿಂಗ್ ರವರು ಕಿರಾಣಿ ಅಂಗಡಿಯ ಮಾಲೀಕರಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಇನ್ನು ಈಗ ದಂಪತಿಗಳಿಗೂ ಕೂಡ ಖುಷಿ ಗೌಡ ಎನ್ನುವ ಮಗಳು ಜನಿಸಿದ್ದಳು ಎಂಬುದನ್ನು ಕೂಡ ನಾವು ಇಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ದಿನದಿಂದ ದಿನಕ್ಕೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *