ಪ್ರಥಮ್ ನನ್ನ ಮದುವೆಯಾಗಿರುವ ಹುಡುಗಿ ಯಾರು ಗೊತ್ತಾ? ಈಕೆ ವಿದ್ಯಾಭ್ಯಾಸ ಮತ್ತು ವೃತ್ತಿ ಏನು ನೋಡಿ!!

ಒಳ್ಳೆ ಹುಡುಗ ಪ್ರಥಮ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಬಿಗ್ ಬಾಸ್. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಒಳ್ಳೆ ಹುಡುಗ ಪ್ರಥಮ್ ಕರ್ನಾಟಕದದ್ಯಂತ ಮನೆ ಮಾತಾಗಿದ್ದಾನೆ. ಹತ್ತು ಬಿಗ್ ಬಾಸ್ ಸೀಸನ್ ಗಳು ಮುಗಿದರೂ ಕೂಡ ಪ್ರಥಮ್ ಇದ್ದ ಬಿಗ್ ಬಾಸ್ ಸೀಸನ್ ಅನ್ನು ಇನ್ನೂ ಕೂಡ ಜನ ಮರೆತಿಲ್ಲ.

ಇದೀಗ ಪ್ರಥಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಷ್ಟಕ್ಕೂ ಪ್ರಥಮ್ನನ್ನು ಕೈ ಹಿಡಿದಿರುವ ಅದೃಷ್ಟವಂತ ಹುಡುಗಿ ಯಾರು ಎಂಬ ಪ್ರಶ್ನೆ ನಿಮಗೆಲ್ಲ ಕಾಡ ಬಹುದು. ಪ್ರಥಮ ಅವರದ್ದು ಅರೇಂಜ್ ಮ್ಯಾರೇಜ್.. ತಂದೆ ತಾಯಿ ತೋರಿಸಿದ ಹುಡುಗಿಯನ್ನು ಕಣ್ಣು ಮುಚ್ಚಿಕೊಂಡು ಓಕೆ ಹೇಳಿ ಮದುವೆಯಾಗಿದ್ದಾರೆ.

ಪ್ರಥಮ ಅವರ ಹೆಂಡತಿಯ ಹೆಸರು ಭಾನುಶ್ರೀ. ಈಕೆ ಮಂಡ್ಯದ ಹಳ್ಳಿ ಹುಡುಗಿ. Bhanushree ಡಿಗ್ರಿ ಮುಗಿಸಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾಳೆ.. ಇನ್ನೂ ಕೂಡ ಕಾಲೇಜ್ ವಿದ್ಯಾರ್ಥಿ ನಿ. ಮೊದಲನೇ ಭೇಟಿಯಲ್ಲಿ ಪ್ರಥಮ್ ಮತ್ತು ಭಾನುಶ್ರೀ ಅವರು ಒಬ್ಬರನ್ನೊಬ್ಬರು ಇಷ್ಟಪಟ್ಟರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ ಅವರನ್ನು ನೋಡಿ ಭಾನುಶ್ರೀ ಅವರು ಮೊದಲೇ ಪ್ರಥಮ್ ಅವರನ್ನು ಇಷ್ಟಪಟ್ಟಿದ್ದರಂತೆ.. ಅಷ್ಟೇ ಅಲ್ಲದೆ ಆಶ್ಚರ್ಯಕರ ಸಂಗತಿ ಏನೆಂದರೆ ಪ್ರಥಮ್ ನನ್ನು ಮದುವೆಯಾಗಿರುವ ಭಾನುಶ್ರೀ ಕುರಿ ಮೇಯಿಸುತ್ತಾರಂತೆ. ವಿದ್ಯಾಭ್ಯಾಸ ಮಾಡುತ್ತಲೇ ಕುರಿ ಸಾಕಾಣಿಕೆಯಲ್ಲಿ ಕೂಡ ಇವರಿಗೆ ಆಸಕ್ತಿ ಇದೆ.

ಪ್ರಥಮ್ ಬಣ್ಣದ ಲೋಕದಲ್ಲಿ ಹೀರೋ ಆದರೆ ಭಾನುಶ್ರೀ ಕನ್ನಡದ ಅಚ್ಚ ಹಳ್ಳಿ ಹುಡುಗಿ. ಪ್ರಥಮ ಅವರ ಹೆಂಡತಿ ಹಳ್ಳಿಯಲ್ಲಿ ಇದ್ದುಕೊಂಡು ಕುರಿ ಮೇಯಿಸಿಕೊಂಡು ಜೀವನ ಮಾಡೋಕು ರೆಡಿ ಇದ್ದಾರಂತೆ. ಪ್ರಥಮ್ ಅವರಿಗೆ ಕೂಡ ಹಳ್ಳಿಯಲ್ಲಿ ತೋಟ ಕುರಿ ನೋಡಿಕೊಂಡು ಮುಂದಿನ ಜೀವನವನ್ನು ಕಳೆಯುವ ಆಸೆ ಇದೆಯಂತೆ. ಪ್ರಥಮ್ ವಟ ವಟ ಅಂತ ಸಿಕ್ಕಾಪಟ್ಟೆ ಮಾತನಾಡಿದರೆ ಪ್ರಥಮ್ ಅವರ ಹೆಂಡತಿ ಭಾನುಶ್ರೀ ತುಂಬಾ ಸೈಲೆಂಟ್ ಪ್ರಥಮ್ ಅವರ ತದ್ವಿರುದ್ಧ ವ್ಯಕ್ತಿತ್ವ.

ಪ್ರಥಮ್ ಅವರೇ ಹೇಳುವ ಹಾಗೆ ಅವರ ಹೆಂಡತಿ ರವಿಚಂದ್ರನ್ ಮತ್ತು ಸಿದ್ದರಾಮಯ್ಯ ಅವರ ಹೆಂಡತಿಯ ಹಾಗೆ ಎಲ್ಲಿಯೂ ಕೂಡ ಕಾಣಿಸಿಕೊಳ್ಳದೆ.. ಸೋಶಿಯಲ್ ಮೀಡಿಯಾ ಹಾಗೂ ಆಧುನಿಕ ಜಗತ್ತಿಗೆ ಸ್ವಲ್ಪ ದೂರ. ಒಟ್ಟಿನಲ್ಲಿ ಪ್ರಥಮ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ..ಮತ್ತು ಇವರ ಮದುವೆ ಇದೀಗ ಅದ್ದೂರಿಯಾಗಿ ನಡೆದಿದೆ ಮದುವೆಗೆ ಶಶಿಕುಮಾರ್ ಲವ್ಲಿ ಪ್ರೇಮ್ ರಕ್ಷಕ್ ಬುಲೆಟ್ ಸೇರಿದಂತೆ ಹಲವಾರು ಕನ್ನಡ ಚಿತ್ರರಂಗದ ನಟರು ಬಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *