ಒಡಿಸ್ಸಾದ ಕಟಕ್ ನಲ್ಲಿ ಹುಡುಗಿ ಒಬ್ಬಳು ಗೆಳೆಯನ ಹಿಂದೆ ಓಡಿ ಹೋಗಿ ಮನೆವರ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾಳೆ. ಈ ಒಂದು ವಿಷಯ ತಿಳಿದು ಮನೆಯವರು ಮಗಳಿಗೆ ಬುದ್ಧಿ ಕಲಿಸಲು ಮಾಡಿದ ಒಂದು ಕೆಲಸ ಏನು ಗೊತ್ತಾ ನಿಜಕ್ಕೂ ಆಶ್ಚರ್ಯಕರವಾಗಿದೆ.. ಕಟಕ್ ನ ಮಹಂಗಾದ ಉಮರ್ ಹಳ್ಳಿಯಲ್ಲಿರುವ ಪಾಯಲ್ ಎಂಬ ಹುಡುಗಿ ಅದೇ ಊರಿನ ಆಕಾಶ್ ಎಂಬ ಅಪ್ರಾಪ್ತ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.
ಪಾಯಲ್ ಅಪ್ರಾಪ್ತ ವಯಸ್ಸಿನಲ್ಲಿಯೇ ಆಕಾಶ್ ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದರಿಂದ ಇವರ ಮೇಲೆ ದೂರು ದಾಖಲಾಗಿತ್ತು.. ಇದೇ ಆಧಾರದ ಮೇಲೆ ಆಕಾಶ್ ಬಂಧನಕ್ಕೆ ಒಳಗಾಗಿದ್ದ. ನಂತರ ಜೈಲಿನಿಂದ ಹೊರಬಂದ ಮೇಲೆ ಆಕಾಶ್ ಪಾಯಲ್ ಜೊತೆ ಅವರ ಕುಟುಂಬಕ್ಕೆ ಗೊತ್ತಾಗದೆ ಮದುವೆಯಾದ.. ಮನೆಯವರ ವಿರೋಧ ಇದ್ದ ಕಾರಣ ಪಾಯಲ್ ಮನೆಯವರಿಗೆ ಈ ವಿಷಯ ಸೂಚಿಸದೆ ಆಕಾಶ್ ನನ್ನು ಮದುವೆಯಾದಳು.
ಈ ವಿಷಯ ಪಾಯಲ್ ಮನೆಯವರಿಗೆ ತಿಳಿಯಿತು. ತನ್ನ ಮಗಳಿಗೆ ಮತ್ತು ಸಮಾಜಕ್ಕೆ ಬುದ್ಧಿ ಕಲಿಸಬೇಕೆಂದು ಪಾಯಲ್ ಮನೆಯವರು ಯೋಚನೆ ಮಾಡಿದರು. ಮಗಳು ಪಾಯಲ್ ಬದುಕಿರುವಾಗಲೇ ಅವಳ ಅಂತ್ಯಸಂಸ್ಕಾರವನ್ನು ಮಾಡಿ ಅವಳಿಗೆ ಈ ವಿಷಯವನ್ನು ಸೂಚಿಸಿದರು. ಮಗಳ ಫೋಟೋ ಇಟ್ಟು ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಅವಳ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಸಂಬಂಧಿಕರನ್ನೆಲ್ಲ ಕರೆಸಿ ತನ್ನ ಮಗಳ ಅಂತ್ಯ ಸಂಸ್ಕಾರ ಮಾಡಿದ್ದಾಳೆ. ಮಗಳು ಅತ್ತೆ ಮನೆಯಲ್ಲಿ ಖುಷಿಯಿಂದ ಜೀವನ ನಡೆಸುತ್ತಿರುವಾಗಲೇ ತಂದೆ ತಾಯಿ ಮಗಳ ಅಂತಿಮ ಸಂಸ್ಕಾರ ಮಾಡಿರುವುದು ನಿಜಕ್ಕೂ ಬೇಸರದ ವಿಷಯ. ಅಷ್ಟಲ್ಲದೆ ತನ್ನ ಮಗಳನ್ನು ಅಪಹರಿಸಿ ಮದುವೆಯಾಗಿದ್ದಾನೆ ಎಂದು ಆಕಾಶ್ ಮೇಲೆ ಕೂಡ ದೂರನ್ನು ದಾಖಲೆ ಮಾಡಿದ್ದಾರೆ. ತಂದೆ ತಾಯಿ ಮಾಡಿದ ಈ ಕೆಲಸಕ್ಕೆ ಪಾಯಲ್ ಕಣ್ಣೀರು ಹಾಕುತ್ತಿದ್ದಾಳೆ ಅಲ್ಲದೆ ಪೊಲೀಸರಿಗೆ ತಾನು ಸ್ವಯಂ ಇಚ್ಛೆಯಿಂದ ಆಕಾಶ ನನ್ ಮದುವೆಯಾಗಿದ್ದೆನೆ.. ನನಗೆ ಇದೀಗ 18 ವರ್ಷ ತುಂಬಿದೆ ನಾನು ಅತ್ತೆ ಮನೆಯಲ್ಲಿ ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾಳೆ..