ಗು-ಟ್ಕಾ ಕಂಪೆನಿಯ ಜಾಹೀರಾತಿನ ಸಂಬಂಧ ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್ ಜಾರಿ, ಇಲ್ಲಿದೆ ನೋಡಿ ಅಸಲಿ ವಿಚಾರ

ಕನ್ನಡದ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದ ನಟರಿಗಿಂತ ಬಾಲಿವುಡ್ ನಟರು ಗು-ಟ್ಕಾ ಕಂಪೆನಿ (Gutka Company) ಗಳ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ಗುಟ್ಕಾ ಕಂಪನಿಗಳ ಜಾಹೀರಾತಿಗಾಗಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ (Akshay Kumar), ಶಾರುಖ್ ಖಾನ್ (Sharukh Khan) ಮತ್ತು ಅಜಯ್ ದೇವಗನ್ (Ajay Devagan) ಅವರಿಗೆ ನೋಟಿಸ್ ನೀಡಲಾಗಿದೆ.

ಹೌದು, ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ (Central ವು ಅಲಹಾಬಾದ್ ನ್ಯಾಯಾಲಯದ ಲಖನೌ ಪೀಠಕ್ಕೆ ತಿಳಿಸಿದೆ. ಈ ಹಿಂದೆ ಮೋತಿಲಾಲ್ ಯಾದವ್ (Motilal Yadav) ಎನ್ನುವ ವಕೀಲರೊಬ್ಬರು ಅಲಹಾಬಾದ್ ಹೈಕೋರ್ಟ್‌ (Alahabad High court) ನಲ್ಲಿ ಕೆಲವು ಹಾ-ನಿಕಾರಕ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಚಾರ ಚಟುವಟಿಕೆಗಳಲ್ಲಿ ಪ್ರಮುಖ ನಟರು ಭಾಗಿಯಾಗಿರುವುದನ್ನು ವಿರೋಧಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಗೌರವ ಪ್ರಶಸ್ತಿಗಳನ್ನು ಪಡೆದವರು ಇಂತಹ ಜಾಹೀರಾತುಗಳಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದರು. ಈ ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಾಲಯವು ಅರ್ಜಿದಾರರ ಆಕ್ಷೇಪಣೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶವನ್ನು ನೀಡಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಹೀಗಾಗಿ ಮೋತಿಲಾಲ್ ಯಾದವ್ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.ಅರ್ಜಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುವ ಕುರಿತಾಗಿ ಕೇಂದ್ರಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಇತ್ತ ಸರ್ಕಾರದ ಪರವಾಗಿ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ (SB Pande) ನ್ಯಾಯಾಲಯಕ್ಕೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಕಳೆದ ಅ.22 ರಂದು ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಗು-ಟ್ಕಾ ಕಂಪನಿಯು ಅಮಿತಾಬ್ ಬಚ್ಚನ್ ಅವರ ಜಾಹೀರಾತುಗಳನ್ನು ಬಿತ್ತರಿಸಿದೆ, ಇದರೊಂದಿಗೆ ಈ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿರುವ ಬಗ್ಗೆ ತಿಳಿಸಿದ್ದಾರೆ. ಈ ಎಲ್ಲಾ ವಾ-ದ ವಿ-ವಾದಗಳ ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿ ಪಡಿಸಿದೆ

Leave a Reply

Your email address will not be published. Required fields are marked *