ನಮ್ಮ ಕನ್ನಡದ ಹುಡುಗಿ ನಿಶ್ವಿಕ ನಾಯ್ಡು(Nishvika Naidu) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಕ್ಯುಟೆಸ್ಟ್ ಫೋಟೋಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿರುತ್ತಾರೆ. ಅದರಂತೆ ಈಗ ನೀಲಿ ಹಾಗೂ ಗೋಲ್ಡನ್ ಬಣ್ಣ ಮಿಶ್ರಿತವಿರುವ ಲೆಹೆಂಗಾ ತೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಹೌದು ಗೆಳೆಯರೇ ಲೆಹಂಗಗೆ ಹೋಲಿಕೆ ಆಗುವಂತಹ ಕಿವಿ ಓಲೆ ಬಳೆ ಸರಗಳನ್ನು ಧರಿಸಿ ಪಕ್ಕ ಟ್ರಡಿಷನಲ್ ಹುಡುಗಿಯಂತೆ ಮಿಂಚಿದ್ದು, ಫೋಟೋಗೆ ವಿಭಿನ್ನವಾಗಿ ಪೋಸ್ ಕೊಡುವ ಮೂಲಕ ನೆಟ್ಟಿಗರ ಮನಸ್ಸನ್ನು ಸೆಳೆದಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್(Mount Carmel) ಕಾಲೇಜಿನಲ್ಲಿ ಸೈಕಾಲಜಿ ವ್ಯಾಸಂಗ ಮಾಡುತ್ತಿದ್ದಾಗಲೇ ಸಿನಿಮಾ ರಂಗದ ಅವಕಾಶಗಳು ಹರಸೆ ಬಂದ ಕಾರಣ ನಟಿ ನಿಶ್ವಿಕ ನಾಯ್ಡು, ಚಿರಂಜೀವಿ ಸರ್ಜಾ ಅವರ ಅಮ್ಮ ಐ ಲವ್ ಯು(Amma I Love you) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಂತಹ ನಟಿ. ಅನಂತರ ವಾಸು ನನ್ ಪಕ್ಕಾ ಕಮರ್ಷಿಯಲ್, ಪಡ್ಡೆ ಹುಲಿ, ಜೆಂಟಲ್ ಮ್ಯನ್, ರಾಮಾಂಜನ, ಸಕ್ಕತ್, ಗಾಳಿಪಟ ಟೂ, ಗುರು ಶಿಷ್ಯರು ಹಾಗೂ ದಿಲ್ ಪಸಂದ್ ಹೀಗೆ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರೆ..
ಹೀಗೆ ತಮ್ಮ ಅಪ್ರತಿಮ ಅಭಿನಯ ಹಾಗೂ ಸೌಂದರ್ಯದ ಮೂಲಕ ಬೆಳ್ಳಿ ಪರದೆಯ ಮೇಲೆ ಅಭಿಮಾನಿಗಳನ್ನು ರಂಜಿಸುವಂತಹ ಈ ನಟಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಇದ್ದು ಆಗಾಗ ತಮ್ಮ ವರ್ಕೌಟ್ ವಿಡಿಯೋ, ಯೋಗಾಸನದ ವಿಡಿಯೋ ಹೀಗೆ ಮುಂತಾದ ವಿಭಿನ್ನ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡ್ ಆಗುತ್ತಾರೆ. ಅದರಂತೆ ಈಗ ಸಾಂಪ್ರದಾಯಕವಾಗಿ ರೆಡಿಯಾಗಿ ಫೋಟೋಶೂಟನ್ನು ಮಾಡಿಸಿದ್ದು.
ಆ ಫೋಟೋಗಳನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ನಮ್ಮ ಕನ್ನಡದ ಹುಡುಗಿಯನ್ನು ಟ್ರೆಡಿಶನಲ್ ಲುಕ್(Traditional look) ನಲ್ಲಿ ಕಂಡಂತಹ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದು, ಗಾರ್ಜಿಯಸ್, ಬ್ಯೂಟಿಫುಲ್ ಏಂಜೆಲ್, ಮೋಸ್ಟ ಬ್ಯೂಟಿಫುಲ್ ಎಂದೆಲ್ಲಾ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯನ್ನು ಹರಿಸುವ ಮೂಲಕ ಮತ್ತು ನಿಷ್ವಿಕ ನಾಯ್ಡು ಅವರ ಅಂದ ಚಂದವನ್ನು ಹಾಡಿ ಹೋಗುತ್ತಿದ್ದಾರೆ.