ಬುಲೆಟ್ ಪ್ರಕಾಶ್ ಮಗಳ ಮದುವೆಯಲ್ಲಿ ಸೀರೆಯಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ನಿಶ್ವಿಕಾ ನಾಯ್ಡು! ಇಲ್ಲಿದೆ ನೋಡಿ ನಿಶ್ವಿಕಾಳ ಗಮ್ಮತ್ತು!!

ಸ್ಯಾಂಡಲ್ ವುಡ್ ನಟ ಬುಲೆಟ್ ಪ್ರಕಾಶ್ ಪುತ್ರಿಯ ಮದುವೆಯಲ್ಲಿ ನಟಿ ನಿಶ್ವಿಕಾ ನಾಯ್ಡು, ಇಲ್ಲಿದೆ ನೋಡಿ ಸುಂದರ ಕ್ಷಣದ ಫೋಟೋಸ್.. ಸ್ಯಾಂಡಲ್ ವುಡ್ ನಟ ಬುಲೆಟ್ ಪ್ರಕಾಶ್ ( Sandalwood Actor Bulet Prakash) ಅವರು ಯಾರಿಗೆ ಗೊತ್ತಿಲ್ಲ ಹೇಳಿ?. ದೈಹಿಕವಾಗಿ ಪ್ರತಿಭಾವಂತ ನಟ ಬುಲೆಟ್ ಪ್ರಕಾಶ್ ಇಲ್ಲವಾದರೂ ಕೂಡ ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

ನಟ ಬುಲೆಟ್ ಪ್ರಕಾಶ್ ಅವರು ಹುಟ್ಟಿ ಬೆಳೆದದ್ದು ಮಾಯಾನಗರಿ ಬೆಂಗಳೂರಿನಲ್ಲಿ. ಬಣ್ಣದ ಲೋಕದಲ್ಲಿ ಬದುಕುಕಟ್ಟಿಕೊಂಡ ಇವರು, ತಮ್ಮ ನಟನೆ ಹಾಗೂ ಹಾಸ್ಯ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದರು.ಅದರ ಜೊತೆಗೆ, 2015 ರಲ್ಲಿ ಭಾರತ ಜನತಾ ಪಕ್ಷ (Janatha Party) ಗೆ ಸೇರಿದರು. ನೋಡಲು ದಪ್ಪವಾಗಿದ್ದ ಇವರು ತೂಕ ಇಳಿಸಿಕೊಂಡರು. ಹೌದು, ತೂಕ ಇಳಿಸುವ ಸಲುವಾಗಿ ಆಪರೇಷನ್ ಗೆ ಒಳಗಾಗಿದ್ದರು ಪ್ರಕಾಶ್. ಆದರೆ ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರು 2018ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

Nishvika naidu photos

105 ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ಬುಲೆಟ್ ಅವರು ಗುಣಮುಖರಾಗಿ ಹೊರಬಂದರು. ತದನಂತರದಲ್ಲಿ ಆರೋಗ್ಯ ಸಮಸ್ಯೆಯಿಂದ ನಿಧನರಾಗಿ ಇ’ಹಲೋಕ ತ್ಯಜಿಸಿದರು. ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನಲ್ಲಿ 2020 ಎಪ್ರಿಲ್ 6 ರಂದು ವಿ’ಧಿವಶರಾದರು.

ಚಂದನವನದಲ್ಲಿ ಖ್ಯಾತ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಹಾಗೂ ಮಂಜುಳ (Manjula) ದಂಪತಿಯ ಪುತ್ರ ರಕ್ಷಕ್ (Rakshak) ‘ಗುರು ಶಿಷ್ಯರು’ (Guru Shishyaru) ಚಿತ್ರದಲ್ಲಿ ನಟಿಸಿದ್ದಾರೆ. ಗುರು ಶಿಷ್ಯರು ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಒಂದೆರಡು ದಿನಗಳ ಹಿಂದೆಯಷ್ಟೇ ಬುಲೆಟ್ ಪ್ರಕಾಶ್ ಪುತ್ರಿ ಮೋನಿಕಾ ವರ್ಷಿಣಿ (Monika Varshini) ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

ಶ್ರವಣ್ ಕುಮಾರ್ (Shravan Kumar) ಎಂಬುವರನ್ನು ಮೋನಿಕಾ ವರ್ಷಿಣಿ ವಿವಾಹವಾಗಿದ್ದು, ಮೇ 6 ರಂದು ಬೆಂಗಳೂರಿನಲ್ಲಿ ಮೋನಿಕಾ ವರ್ಷಿಣಿ – ಶ್ರವಣ್ ಕುಮಾರ್ ಆರತಕ್ಷತೆ ನಡೆದಿದೆ. ಮೇ 7 ರಂದು ಮೋನಿಕಾ ವರ್ಷಿಣಿ ಕೊರಳಿಗೆ ಶ್ರವಣ್ ಕುಮಾರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

View this post on Instagram

 

A post shared by Nishvika Naidu (@nishvika_)

ಬೆಂಗಳೂರಿನಲ್ಲಿ ನಡೆದ ಮೋನಿಕಾ ವರ್ಷಿಣಿ – ಶ್ರವಣ್ ಕುಮಾರ್ ವಿವಾಹ ಸಮಾರಂಭಕ್ಕೆ ಶಿವರಾಜ್ ಕೆ ಆರ್ ಪೇಟೆ (Shivaraj K R Pete) ಹಾಜರಾಗಿದ್ದರು. ಅಷ್ಟೇ ಅಲ್ಲದೇ, ಮೋನಿಕಾ ವರ್ಷಿಣಿ – ಶ್ರವಣ್ ಕುಮಾರ್ ಮದುವೆಗೆ ನಟಿ ನಿಶ್ವಿಕಾ ನಾಯ್ಡು ( Actress Nishwikaa Naidu) ಆಗಮಿಸಿ ನವ ಜೋಡಿಗೆ ಶುಭ ಕೋರಿದರು. ಮೋನಿಕಾ ವರ್ಷಿಣಿ ಮದುವೆಯಲ್ಲಿ ಕಾಣಿಸಿಕೊಂಡ ನಟಿ ನಿಶ್ವಿಕಾ ನಾಯ್ಡು ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Leave a Reply

Your email address will not be published. Required fields are marked *