“ಹೊಡಿರಲೇ ಹಲಗಿ” ಹಾಡಿಗೆ ಎಲ್ಲರೂ ಎದ್ದು ನಿಲ್ಲುವಂತೆ ಸ್ಟೆಪ್ಸ್ ಹಾಕಿದ ನಟಿ ನಿಶ್ವಿಕಾ ನಾಯ್ಡು! ಮಸ್ತ್ ವಿಡಿಯೋ ನೋಡಿ!!

ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಿಶ್ವಿಕ ನಾಯ್ಡು (nishika Naidu) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟಿಯೆನಿಸಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.

ಮಾಡೆಲಿಂಗ್ (Modeling) ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಶ್ವಿಕಾರ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ( Vasu Nan Pakkaa Commercial) ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು. ಆದಾದ ಬಳಿಕ, ‘ಅಮ್ಮಾ ಐ ಲವ್ ಯು’ (Amma I Love You) ಸಿನಿಮಾದಲ್ಲಿ ನಟಿಸಿದರು. ನಟಿ ನಿಶ್ವಿಕಾರವರು ಗುರು ಶಿಷ್ಯರು (Guru Shishyaru), ದಿಲ್ ಪಸಂದ್ (Dil Pasand) , ಜೆಂಟಲ್ ಮ್ಯಾನ್ (Gental Man) ಮುಂತಾದ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ.

ನೋಡುವುದಕ್ಕೆ ಸುಂದರವಾಗಿದ್ದು ಒಂದು ಲುಕ್ ನೀಡಿದರೆ ಫ್ಯಾನ್ಸ್ ಫಿದಾ ಆಗುವುದು ಪಕ್ಕಾ.ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ನಟಿ ಗರಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಯೋಗರಾಜ್ ಭಟ್(yogaraj Bhat) ನಿರ್ದೇಶನದ ಗರಡಿ ಎನ್ನುವ ಸಿನಿಮಾದಲ್ಲಿ ಐಟಂ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಗರಡಿ ಸಿನಿಮಾದಲ್ಲಿ ಉತ್ತರ ಕರ್ನಾಟಕ ಶೈಲಿಯ ತಮಟೆ ಹಾಡೊಂದು ಇದ್ದು, ಉತ್ತರ ಕರ್ನಾಟಕ ಶೈಲಿಯ ಉಡುಗೆ ತೊಟ್ಟು ಸೊಂಟ ಬಳುಕಿಸಿದ್ದಾರೆ. ಈ ಡಾನ್ಸ್ ಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.ಇತ್ತೀಚೆಗಷ್ಟೇ ಗರಡಿ ಸಿನಿಮಾದ(garadi movie) ಟ್ರೈಲರ್ ರಿಲೀಸ್ ಕಾರ್ಯಕ್ರಮವು ನಡೆಯಿತು. ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದ ಟ್ರೈಲರ್ ರಿಲೀಸ್ ಇವೆಂಟ್ ನಲ್ಲಿ ನಿಶ್ವಿಕಾ ನಾಯ್ಡು ಕೂಡ ಭಾಗವಹಿಸಿದ್ದರು.

ನಿಶ್ವಿಕಾ ನಾಯ್ಡು ರವಿಶಂಕರ್ ಮಗನಿಗೆ (Ravishankar Son) ಗರಡಿಯ ಕುಸ್ತಿಯಲ್ಲಿ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ಅದಲ್ಲದೆ, ನಿಶ್ವಿಕಾ ನಾಯ್ಡು ಗರಡಿ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರೀಲ್ಸ್ ಹುಡುಗಿಯರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ನಿಶ್ವಿಕಾ ನಾಯ್ಡು ರಡಿ ಸಿನಿಮಾದ ಐಟಂ ಸಾಂಗ್ ನಲ್ಲಿ ಭರ್ಜರಿಯಾಗಿ ಕುಣಿದಿದ್ದು, ಈ ಡಾನ್ಸ್ ವಿಡಿಯೋ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *