ಮುದ್ದಿನ ಮಡದಿಯ ಹುಟ್ಟುಹಬ್ಬಕ್ಕೆ ವಿಶೇಷವಾದ ಪೋಸ್ಟ್ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ನಟ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರು ರಾಜ್ಯ ವಿಧಾನಸಭೆ ಚುನಾವಣೆ (Karnataka Elections) ಅಖಾಡಕ್ಕೆ ಧುಮುಕಿ ಸೋಲನ್ನು ಕಂಡಿದ್ದಾರೆ. ರಾಜಕೀಯ ರಂಗ ನಿಖಿಲ್ ಕುಮಾರಸ್ವಾಮಿಯವರನ್ನು ಕೈ ಹಿಡಿಯುವಂತೆ ಕಾಣುತ್ತಿಲ್ಲ. ಎರಡನೇ ಬಾರಿಯೂ ಜನರು ಕೈಹಿಡಿಯಲಿಲ್ಲ. ನಿಖಿಲ್ ಕುಮಾರಸ್ವಾಮಿಯವರ ಸೋಲು ಎಲ್ಲರಿಗೂ ಕೂಡ ಶಾಕ್ ತಂದಿದೆ.

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಯವರು ಸಿನಿಮಾ, ರಾಜಕೀಯ ಹಾಗೂ ತನ್ನ ವೈಯುಕ್ತಿಕ ಜೀವನವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ವೃತ್ತಿ ಜೀವನದ ಜೊತೆಗೆ ಮಡದಿ ಹಾಗೂ ಮಗನಿಗೆ ಕೂಡ ಅಷ್ಟೇ ಮಹತ್ವವನ್ನು ನೀಡುತ್ತಾರೆ. ಮುದ್ದಿನ ಮಡದಿ ಹಾಗೂ ಮಗನ ಜೊತೆಗೆ ಆಗಾಗ ಸುಂದರ ಕ್ಷಣಗಳನ್ನು ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗಷ್ಟೇ ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರು ಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ (Wife Revathi Nikhil Kumaraswami) ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯಗಳನ್ನು ಕೋರಿದ್ದರು. ಸಮುದ್ರ ತೀರದಲ್ಲಿ ಕುಳಿತು ಊಟ ಮಾಡುತ್ತಿರುವ ಫೋಟೋ ಹಂಚಿಕೊಂಡು, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರ ಅಭಿಮಾನಿಗಳು ಕೂಡ ತಮ್ಮ ಪ್ರೀತಿಯ ಅತ್ತಿಗೆ ರೇವತಿ ನಿಖಿಲ್ ಕುಮಾರಸ್ವಾಮಿಯವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಅಂದರೆ 2020 ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ (Nikhil Kumaraswami) ರವರು ರೇವತಿಯವರ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಬಿಡದಿ ಸಮೀಪದ ತೋಟದ ಮನೆಯಲ್ಲಿ ವಾಸವಾಗಿದ್ದರು.

2021 ಸೆಪ್ಟೆಂಬರ್ 24 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮುದ್ದಿನ ಮಗನಿಗೆ ಅವ್ಯಾನ್ ದೇವ್ ( vyan Dev) ಹೆಸರಿಟ್ಟಿದ್ದಾರೆ. 2022 ಸೆಪ್ಟೆಂಬರ್ 24 ಕ್ಕೆ ಮುದ್ದಿನ ಮಗನಿಗೆ ಒಂದು ವರ್ಷ ತುಂಬಿದ ಬೆನ್ನಲ್ಲೆಯಲ್ಲಿ ರಾಮನಗರದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಜೋಡಿಯೂ ಸುಖವಾಗಿ ಸಂಸಾರ ಮಾಡುತ್ತಿದ್ದು, ಮಗನ ಮುದ್ದಾದ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡು ಫ್ಯಾನ್ಸ್ ಗಳನ್ನು ಖುಷಿ ಪಡಿಸುತ್ತಿರುತ್ತಾರೆ.

Leave a Reply

Your email address will not be published. Required fields are marked *