ರೋಹಿತ್ -ವಿರಾಟ್ ಆಟದ ಕಾಲವು ಅಂತ್ಯ!! ಇನ್ಮೇಲೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗೋದು ಈ ಆಟಗಾರನೇ!!

Next indian cricket captain  : ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ(Rohith Sharma) ಮತ್ತು ವಿರಾಟ್ ಕೊಹ್ಲಿಯ(Virat kohli) ಹೆಸರುಗಳಿಲ್ಲ.

ಇವರಿಬ್ಬರನ್ನು ತಂಡದಿಂದ ಹೊರಗಿಟ್ಟಿರುವುದು ಕ್ರಿಕೆಟ್ ಆಸಕ್ತರಿಗೆ ಅಚ್ಚರಿಯನ್ನುಂಟುಮಾಡಿದೆ. ಅನುಭವಿ ಆಟಗಾರರನ್ನು ಟಿ 20 ಸರಣಿಯ ಪಂದ್ಯದಿಂದ ಹೊರಗಿಡುವುದಾದರೆ ಕ್ಯಾಪ್ಟನ್ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ..

ಕ್ರಿಕೆಟ್ ಆಟದಲ್ಲಿ ಆಲ್ ರೌಂಡರ್ ಆದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಟಿ 20 ತಂಡದ ಕ್ಯಾಪ್ಟನ್ (Captain) ಎಂದು ಘೋಷಿಸಲಾಗಿದೆ. ಜನವರಿ 27ರಿಂದ ಪ್ರಾರಂಭವಾಗುವ ನ್ಯೂಜಿಲ್ಯಾಂಡ್ (New zealand) ವಿರುದ್ಧದ ಸರಣಿ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ಹಾರ್ದಿಕ ಪಾಂಡ್ಯ ಅವರಿಗೆ ವಹಿಸಲಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯವು ಜನವರಿ 18ರಂದು ಹೈದ್ರಾಬಾದ್ (Hyderabad)ನಲ್ಲಿ ನಡೆಯಲಿದೆ.

ಟಿ 20 ಸರಣಿಯು ರಾಂಚಿಯಲ್ಲಿ ಜನವರಿ 27ರಿಂದ ಆರಂಭಗೊಳ್ಳಲಿದೆ. ಎರಡನೇ ಪಂದ್ಯವು ಜನವರಿ 29ರಂದು ಲಕ್ನೋದಲ್ಲಿ ನಡೆಯಲಿದ್ದು, ಕೊನೆಯ ಪಂದ್ಯವು ಫೆಬ್ರುವರಿ ಒಂದರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾರ್ದಿಕ್ ನಾಯಕತ್ವದಲ್ಲಿ ಭಾರತ ತಂಡವು ಎದುರಾಳಿ ತಂಡವನ್ನು ಹೇಗೆ ಎದುರಿಸಲಿದೆ ಎಂದು ನೋಡಲು ಕ್ರಿಕೆಟ್ ಆಸಕ್ತರು ಕಾದು ಕುಳಿತಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಆಯ್ಕೆ ಸಮಿತಿಯು ಪಂದ್ಯಕ್ಕಾಗಿ 16 ಆಟಗಾರರ ತಂಡವನ್ನು ರಚಿಸಿದೆ. ತಂಡದ ಉಪನಾಯಕರಾಗಿ ಸ್ಟಾರ್ ಬ್ಯಾಟ್ಸ್ ಮ್ಯಾನ್ ಸೂರ್ಯ ಕುಮಾರ್ ಯಾದವ್ (Sooryakumar Yadav) ಆಯ್ಕೆಗೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಂದಾಳತ್ವವನ್ನು ವಹಿಸಲಿದ್ದಾರೆ. ಫೆಬ್ರುವರಿ 9 ರಿಂದ ಮಾರ್ಚ್ 22ರವರೆಗೆ ಭಾರತದ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಎದುರಿಸಲಿದೆ.

ಈ ಹಿಂದೆ ಮಹೇಂದ್ರ ಸಿಂಗ್ ಧೋನಿ (Mahendr Singh Dhoni)ಯವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ 2011ರ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಇದೀಗ ಪಂದ್ಯಾವಳಿಯನ್ನು ಗೆಲ್ಲಬೇಕೆಂಬ ಉದ್ದೇಶದೊಂದಿಗೆ ಮಂಡಳಿಯು ಆಟಗಾರರ ಆಯ್ಕೆಯಲ್ಲಿ ಗಮನಹರಿಸಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶುಭ ಕೋರೋಣ.

Leave a Reply

Your email address will not be published. Required fields are marked *