ಖ್ಯಾತ ಸುದ್ದಿ ವಾಚಕಿ ದಿವ್ಯಾ ಜ್ಯೋತಿಯವರ ಎಂಗೇಜ್ಮೆಂಟ್ ನ ಸುಂದರ ಕ್ಷಣ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ

ಕನ್ನಡ ಮಾಧ್ಯಮ ಲೋಕದಲ್ಲಿ ನಿರೂಪಕಿ ದಿವ್ಯಾ ಜ್ಯೋತಿ (Divya Jyothi) ಸಿಕ್ಕಾಪಟ್ಟೆ ಫೇಮಸ್ ಎಂದರೆ ತಪ್ಪಿಲ್ಲ. ಹೆಚ್. ಆರ್ ರಂಗನಾಥ್ (H.R Ranganath) ಅವರ ಜೊತೆಗೆ ಯಾವಾಗಲೂ ಕಾಣಿಸಿಕೊಳ್ಳುವ ದಿವ್ಯಾ ಜ್ಯೋತಿಯವರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ತಾಯಿಯಾದ ಬಳಿಕ ಮಾಧ್ಯಮ ಲೋಕದಲ್ಲಿ ಅಂತರ ಕಾಯ್ದುಕೊಂಡಿದ್ದ ಈ ಬೆಡಗಿಯೂ ಇದೀಗ ಮತ್ತೆ ಪಬ್ಲಿಕ್ ಟಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿರೂಪಕಿ ದಿವ್ಯಾ ಜ್ಯೋತಿ 2008 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮಗುವಿನ ಲಾಲನೆ ಪಾಲನೆ ಜೊತೆಗೆ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ನಿರೂಪಕಿ ದಿವ್ಯಾ ಜ್ಯೋತಿ ಅವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿತ್ತು. ಕಳೆದ ಒಂದೆರಡು ವರ್ಷಗಳ ಹಿಂದೆ ಮಾರ್ಚ್ 10ರಂದು, ದಿವ್ಯಾ ಜ್ಯೋತಿ ಅವರಿಗೆ ಮುದ್ದಾದ ಹೆಣ್ಣು ಮಗು ಜನಿಸಿತ್ತು.

ಮುದ್ದಿನ ಮಗಳು ಜನಿಸಿದ್ದ ಸಂಭ್ರಮದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದಾದ ಬಳಿಕ ನಿರೂಪಕಿ ದಿವ್ಯಾ ಜ್ಯೋತಿಯವರು ಮುದ್ದಾದ ಮಗುವಿನ ನಾಮಕರಣ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿತ್ತು. ಆದರೆ ಇದೀಗ ಖ್ಯಾತ ನಿರೂಪಕಿ ದಿವ್ಯಾ ಜ್ಯೋತಿಯವರ ಎಂಗೇಜ್ಮೆಂಟ್ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋ ನೋಡಿದ ಫ್ಯಾನ್ಸ್ ಜೋಡಿಯನ್ನು ಹಾಡಿ ಹೊಗಳಿದ್ದಾರೆ.

ಸುದ್ದಿ ನಿರೂಪಕಿಯಾಗಿ ತನ್ನ ನಗು ಹಾಗೂ ಗುಳಿ ಕೆನ್ನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದುಕೊಂಡಿದ್ದರು. ಬಿಕಾಂ ಪದವಿ (BCom Degree) ಯನ್ನು ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಪಡೆದುಕೊಂಡರು. ಬಿ. ಕಾಂ ಪದವಿಯನ್ನು ಪಡೆದುಕೊಂಡು ಪತ್ರಿಕೋದ್ಯಮ (Journalism) ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡರು.

ಪ್ರಾರಂಭದ ದಿನಗಳಲ್ಲಿ ನಿರೂಪಕಿಯಾಗಿ ಉದಯ ಮ್ಯೂಸಿಕ್ ಚಾನೆಲ್ ಕಾಣಿಸಿಕೊಂಡರು. ಇದಾದ ಬಳಿಕ ದಿವ್ಯಾ ಜ್ಯೋತಿ ಅವರು ಇನ್ನಿತರ ವಾಹಿನಿಗಳಲ್ಲಿಯೂ ಕೂಡ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಹೀಗಿರುವಾಗ ಪಬ್ಲಿಕ್ ಮ್ಯೂಸಿಕ್ ನಲ್ಲಿ ಕೆಲಸ ಮಾಡಿದ ಇವರಿಗೆ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

ದಿವ್ಯಾ ಜ್ಯೋತಿ ಅವರು ಕಿಚ್ಚ ಸುದೀಪ್ (Kiccha Sudeep), ರವಿ ಶಂಕರ್ (Ravi Shankar), ದರ್ಶನ್ (Darshan), ಅಪ್ಪು (Appu) ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರ ಸಂದರ್ಶನವನ್ನು ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಗನಾಥ್ ಅವರೊಂದಿಗೆ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಪಬ್ಲಿಕ್ ಟಿವಿಯಲ್ಲಿ 12 ಗಂಟೆ ಕೆಲಸ ಮಾಡುತ್ತಿದ್ದು, 3 ರಿಂದ 4 ಸಾವಿರ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿತ್ತು. ಆದರೆ ಇದೀಗ ನಿರೂಪಕಿ ದಿವ್ಯಾ ಜ್ಯೋತಿಯವರ ಸಂಭಾವನೆಯೂ ಹೆಚ್ಚಾಗಿದೆ.

ಅದಲ್ಲದೇ ತಾಯಿಯಾದ ಬಳಿಕ ವೃತ್ತಿ ಜೀವನದಿಂದ ಅಂತರ ಕಾಯ್ದುಕೊಂಡಿದ್ದ ನಿರೂಪಕಿ ದಿವ್ಯಾ ಜ್ಯೋತಿಯವರು ಮತ್ತೆ ಪಬ್ಲಿಕ್ ಟಿವಿಯಲ್ಲಿ ಸುದ್ದಿವಾಚಕಿಯಾಗಿ ಸಕ್ರಿಯರಾಗಿದ್ದಾರೆ. ತನ್ನ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಈ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದು, ನಿರೂಪಕಿ ದಿವ್ಯಾ ಜ್ಯೋತಿಯವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *