ಈ ಊರಲ್ಲಿ ಫಸ್ಟ್ ನೈಟ್ ಆಗಬೇಕು ಅಂದ್ರೆ ಗಂಡ ಹೆಂಡತಿ ಜೊತೆ ಅತ್ತೆ ಕೂಡ ರೂಮಲ್ಲಿ ಇರಲೇಬೇಕು! ಇಲ್ಲಾ ಅಂದ್ರೆ ನೋ ಫಸ್ಟ್ ನೈಟ್, ಯಾವ ಊರು ನೋಡಿ!!

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ತಿರುವಿನ ಘಟ್ಟ..ಅದು ಭಾರತೀಯರು ಇರಲಿ, ವಿದೇಶಿಗರು ಇರಲಿ, ತಮ್ಮ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಮದುವೆ ಸಂಪದ್ರಾಯಗಳು ಸ್ವಲ್ಪ ಮಟ್ಟಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಕೆಲವು ಕಡೆಗಳಲ್ಲಿ ಆಚರಿಸಲು ಸಾಧ್ಯವಿಲ್ಲದ ಸಂಪ್ರದಾಯಗಳಿವೆ. ಕೆಲವು ಕಡೆಗಳಲ್ಲಿನ ಸಂಪ್ರದಾಯವನ್ನು ನೋಡಿದರೆ ಇದೇನಪ್ಪಾ ಹೀಗೆ ಎನ್ನುವ ಪ್ರಶ್ನೆಯೊಂದು ಮೂಡುತ್ತವೆ.

ಆದರೆ ಈ ಎಲ್ಲಾ ಸಂಪದ್ರಾಯಗಳನ್ನು ಒಂದೇ ಬಾರಿಗೆ ಒಪ್ಪಲು ಸಾಧ್ಯವಿಲ್ಲದಿದ್ದರೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ನಂಬಲು ಸಾಧ್ಯವಲ್ಲದೇ ಆಚರಣೆಗಳಿವೆ. ಅಂದಹಾಗೆ, ಈ ಆಚರಣೆಯ ಪ್ರಕಾರವಾಗಿ, ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರಬೇಕು.

ವಧುವಿನ ತಾಯಿ ಇಲ್ಲದಿದ್ದರೆ ಅವರ ಕುಟುಂಬದ ವಯಸ್ಸಾದ ಮಹಿಳೆ ಅವರೊಂದಿಗೆ ಒಂದು ದಿನ ಇರಬೇಕು. ಇದೇನಪ್ಪಾ ಹೀಗೆ ಒಂದು ಅಚ್ಚರಿಯಾದರೂ ಕೂಡ ಇದು ಸತ್ಯ. ವರದಿಯ ಪ್ರಕಾರ, ವಧುವಿನ ತಾಯಿ ಅಥವಾ ವಯಸ್ಸಾದ ಮಹಿಳೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಅವರು ತಮ್ಮ ಜೀವನವನ್ನು ಹೇಗೆ ಸಂತೋಷದಿಂದ ಕಳೆಯಲಿದ್ದಾರೆ ಎನ್ನುವುದನ್ನು ವಿವರಿಸುತ್ತಾರೆ.

ಅದರ ಜೊತೆಗೆ ಮೊದಲ ರಾತ್ರಿಯನ್ನು ಕಳೆಯುವ ವಿಧಾನವನ್ನು ಕೂಡ ವಧುವಿಗೆ ವಿವರಿಸಲಾಗುತ್ತದೆ. ಅಷ್ಟೇ ಅಲ್ಲದೇ, ಮೊದಲ ರಾತ್ರಿ ಕಳೆದ ನಂತರ ವಧುವಿನ ತಾಯಿ ಅಥವಾ ಹಿರಿಯ ಮಹಿಳೆಯೂ ಹೊಸದಾಗಿ ಮದುವೆಯಾದ ಈ ಜೋಡಿ ಸಂತೋಷದ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದಾರೆ ಎನ್ನುವುದನ್ನು ತಿಳಿಸುತ್ತಾರೆ.

ಅದಲ್ಲದೇ, ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯವಿದ್ದು, ಈ ಸಂಪ್ರದಾಯದಂತೆ ನವ ದಂಪತಿಗಳು ವಾಶ್‌ರೂಮ್‌ಗೆ ಹೋಗದೆ ಮೂರು ದಿನಗಳವರೆಗೆ ಇರಬೇಕಂತೆ. ವಿವಾಹಿತ ದಂಪತಿಗಳು ಸಂತೋಷ ಮತ್ತು ದೀರ್ಘಾವಧಿಯ ದಾಂಪತ್ಯವನ್ನು ಆನಂದಿಸಲು ಅಂದರೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹೆಚ್ಚಿನ ಸಮಯವನ್ನು ಮೀಸಲಿಡಲು ಈ ರೀತಿಯ ಆಚರಣೆಯನ್ನು ಮಾಡಲಾಗುತ್ತದೆ.

ಜನರ ಗುಂಪು ದಂಪತಿಯನ್ನು ಆಗಾಗ ವಿಚಾರಿಸಿಕೊಳ್ಳುತ್ತಾ ಇರುತ್ತಾರೆ. ದಂಪತಿಗೆ ವಾಶ್ ರೂಂ ಬಳಸುವ ಬಯಕೆ ಬರದಂತೆ ಅವರು ಕಡಿಮೆ ಪ್ರಮಾಣದ ಆಹಾರ ಮತ್ತು ನೀರನ್ನು ನೀಡುತ್ತಾರೆಯಂತೆ. ಈ ಆಚರಣೆ ಪಾಲಿಸುತ್ತಿರುವವರು ಟಿಡಾಂಗ್ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಆದರೆ ಈ ರೀತಿಯ ಸಂಪದ್ರಾಯವನ್ನು ದಂಪತಿಗಳು ಪರೀಕ್ಷೆಯಲ್ಲಿ ವಿಫಲರಾದರೆ ದಂಪತಿಗಳು ದೂರವಾಗುತ್ತಾರೆ. ಒಟ್ಟಿನಲ್ಲಿ ಇಂತಹ ಸಾಕಷ್ಟು ಆಚರಣೆಗಳು ಹಲವೆಡೆಯಿದ್ದರೂ ಕೂಡ ಈ ಬಗ್ಗೆ ಅಷ್ಟಾಗಿ ಮಾಹಿತಿಯೂ ಇರುವುದಿಲ್ಲ.

Leave a Reply

Your email address will not be published. Required fields are marked *