ಮದುವೆ ಆಯ್ತು, ಇನ್ನೇನು ಹೊಸ ಮನೆಗೆ ಹೋಗಿ ಹಾಲು ಉಕ್ಕಿಸಬೇಕು ಎಂದು ಕನಸು ಕಂಡಿದ್ದ ಈ ಮುದ್ದಾದ ಜೋಡಿಯ ಬಾಳಲ್ಲಿ ನಡೆದ ವಿಧಿಯಾಟ ಯಾರೂ ಕನಸಲ್ಲೂ ಊಹಿಸಿರಲಿಲ್ಲ! ಏನಾಗಿ ಹೋಯ್ತು ನೋಡಿ!!

ಬದುಕು ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಆದರೆ ಈ ಜೋಡಿಯ ಬಾಳಲ್ಲಿ ನಡೆದದ್ದು ಯಾವ ಶತ್ರುವಿಗೂ ಬೇಡ. ಹೌದು ಬಹುಷಃ ವಿಧಿ ಆಟ ಎಷ್ಟು ಘೋರ ಎನ್ನುವುದು ಈ ಜೋಡಿಯನ್ನು ನೋಡಿಯೇ ಹೇಳಿರುವುದು ಅಂತೇನಿಸುತ್ತದೆ. ಮದುವೆಯಾಗಿ ಕೆಲವೇ ಹದಿನೈದೇ ದಿನವಾಗಿದೆಯಷ್ಟೇ. ಸಾಕಷ್ಟು ಕನಸು ಕಂಡು ಬದುಕಿ ಬಾಳಬೇಕಿದ್ದವರ ಬಾಳಲ್ಲಿ ವಿಧಿ ಆಟವಾಡಿದೆ. ಈ ಮುದ್ದಾದ ಜೋಡಿಯ ಮೇಲೆ ಯಾರ ಕಣ್ಣು ಬಿತ್ತೊ ಗೊತ್ತಿಲ್ಲ.

ಆದರೆ ಆಗಬಾರದ ಅನಾಹುತವೊಂದು ಘಟಿಸಿ, ಪತಿಯನ್ನು ಈಕೆಯ ಬಾಳಿನಿಂದ ದೂರ ಮಾಡಿದೆ. ಅಂದಹಾಗೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಹಾಗೂ ಶೋಭಾ ದಂಪತಿ ಪುತ್ರ ಸಂಜಯ್ (28) ಹಾಗೂ ಬೈಲಹೊಂಗಲದ ಪ್ರೀತಿ ನವೆಂಬರ್ 28 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನೋಡಲು ಮುದ್ದಾಗಿದ್ದ ಜೋಡಿ ಬದುಕಿನ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.

ಮದುವೆಯಾದ ಬಳಿಕ ದೇವರ ದರ್ಶನಕ್ಕೆ ಈ ಜೋಡಿ ತೆರಳಿತ್ತು. ಆದರೆ ಈ ಜೋಡಿಯಲ್ಲಿ ಒಬ್ಬರನ್ನು ಆ ದೇವರನ್ನು ಕರೆದುಕೊಂಡು ಬಿಡುತ್ತಾನೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಹೌದು, ಪ್ರೀತಿ ಮತ್ತು ಸಂಜಯ್ ಡಿಸೆಂಬರ್ 10ರಂದು ಹರಿಹರದ ಜಿಗಳಿಯಿಂದ ಬೈಕ್​ನಲ್ಲಿ ಧಾರ್ಮಿಕ ಕ್ಷೇತ್ರಗಳ ಸುತ್ತುವುದರ ಜೊತೆಗೆ ಹನಿಮೂನ್​ ಗೆಂದು ತೆರಳಿದ್ದರು. ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ.

ಬಳಿಕ ಮುರುಡೇಶ್ವರಕ್ಕೆ ತೆರಳಿದ್ದು ರಾತ್ರಿ ಅಲ್ಲಿಯೇ ಉಳಿದಿದ್ದಾರೆ. ಆದರೆ ಡಿಸೆಂಬರ್ 11ರಂದು ಶಿರಸಿ ಮಾರಿಕಾಂಬ ದೇವಿ ದರ್ಶನ ಪಡೆದು ವಾಪಸ್ ಜಿಗಳಿಗೆ ಮರಳಿದ್ದಾರೆ. ಆದರೆ ವಿಧಿ ಮಾತ್ರ ಈ ಜೋಡಿಯ ಬದುಕಿನ ನೌಕೆಯನ್ನೇ ದಿಕ್ಕಾಪಾಲು ಮಾಡಿತ್ತು. ಹೌದು, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆಯಲ್ಲಿ ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀ’ವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲೂ ರ’ಕ್ತಸ್ರಾವವಾಗಿದೆ.

ಬೈಕ್​ನ ಹಿಂಬದಿಯಲ್ಲಿದ್ದ ಪ್ರೀತಿಗೂ ತೀವ್ರ ಗಾಯಗಳಾಗಿದೆ. ತಕ್ಷಣಕ್ಕೆ ಅವರಿಬ್ಬರನ್ನು ಹಂಸಬಾವಿ ಪೊಲೀಸರು, ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಾಯಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆಯೇ ಸಂಜಯ್ ಕೊ’ನೆಯುಸಿರುಳೆದಿದ್ದಾನೆ. ಇತ್ತ ಪತಿ ಅ’ಗಲಿದ ವಿಷಯವನ್ನು ಪ್ರೀತಿ ಬಳಿ ಮುಚ್ಚಿಡಲು ಅವರ ಕುಟುಂಬಸ್ಥರಿಗೆ ಸಾಧ್ಯವಾಗಲಿಲ್ಲ.

ಮನಸ್ಸು ಗಟ್ಟಿ ಮಾಡಿಕೊಂಡು ಸಂಜಯ್ ಅ’ಪಘಾತದಲ್ಲಿ ಮೃ’ತ ಪಟ್ಟ ವಿಚಾರವನ್ನು ಹೇಳಿದ್ದಾರೆ. ಆದರೆ ವಿಷಯ ತಿಳಿದ ಪ್ರೀತಿ, ಗಂಡನನ್ನು ಕೊನೆಯ ಬಾರಿಗೆ ನೋಡಲು, ತಾನು ದಾಖಲಾಗಿದ್ದ ಶ’ವಗಾರಕ್ಕೆ ಬಂದಿದ್ದರು. ದುರಂತವೆಂದರೆ ಸ್ಟ್ರೆಚರ್​​ನಲ್ಲಿ ಬಂದು ಗಂಡನ ಮುಖವನ್ನು ನೋಡಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೇ ಪತಿಯ ಸವರಿ ಬಿಕ್ಕಳಿಸಿದ ಪತ್ನಿ ಪ್ರೀತಿ ಅತ್ತಿದ್ದಾರೆ. ಈ ದೃಶ್ಯವು ನೋಡುಗರ ಮನಕಲಕುವಂತೆ ಮಾಡಿದೆ.

ಇತ್ತ ಕುಟುಂಬಸ್ಥರ ಆ’ಕ್ರಂದನ ಮುಗಿಲು ಮುಟ್ಟಿತ್ತು. ಅದಲ್ಲದೆ, ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ನೋಡಿದ್ದ ಹೊಸ ಮನೆಗೆ ಹೋಗಿ ಹಾಲು ಉಕ್ಕಿಸಬೇಕು ಎಂದು ಕೊಂಡಿದ್ದರು. ಆದರೆ ಸಂಜಯ್ ವಿ’ಧಿಯ ಆಟಕ್ಕೆ ಬ’ಲಿಯಾಗಿದ್ದಾನೆ. ಇತ್ತ ಪತಿಯನ್ನೇ ನಂಬಿಕೊಂಡು ಬಂದಿದ್ದ ಪ್ರೀತಿ ಬದುಕು ಅ’ಲ್ಲೋಲ ಕ’ಲ್ಲೋಲವಾಗಿದೆ. ಈ ಜೋಡಿಯ ಬದುಕಿನಲ್ಲಿ ನಡೆದ ಈ ಘ’ಟನೆಯನ್ನು ಎಲ್ಲರೂ ವಿ’ಧಿಗೆ ಹಿ’ಡಿ ಶಾಪ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *