ಮದುವೆ ಅನ್ನೋದು ವಿಶೇಷವಾದ ಬಂಧ. ಕೆಲವರಿಗೆ ಮದುವೆ ಅನ್ನೋದು ದೊಡ್ಡ ಕನಸು. ತಾವು ಮದುವೆಯಾದ ಮೇಲೆ ಸಂಗಾತಿ (life Partner)ಯ ಜೊತೆ ಹಾಗಿರಬೇಕು, ಹೀಗಿರಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ. ಆದರೆ ಕೆಲವರ ಜೀವನದಲ್ಲಿ ಇದು ಕೇವಲ ಕನಸಾಗಿಯೇ ಉಳಿದಿಬಿಡುತ್ತದೆ. ಗಂಡ ಹೆಂಡತಿ (Husband-wife) ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಪರ್ಯಂತ ಒಟ್ಟಾಗಿ ಬಾಳಲು.
ಮದುವೆಯ ಮೊದಲ ದಿನ ಮೊದಲ ರಾತ್ರಿ ಶಾಸ್ತ್ರವನ್ನು ಕೂಡ ಮಾಡಲಾಗುತ್ತೆ. ಮನೆಯವರು ಹಾಗೂ ವಧು-ವರ ಇಬ್ಬರು ಒಪ್ಪಿ ಮೆಚ್ಚಿ ಮದುವೆಯಾಗಿದ್ದರೆ ಅಂತವರು ಮೊದಲ ರಾತ್ರಿಯ (First Night) ಮಧುರ ಕ್ಷಣಕ್ಕಾಗಿ ಕಾದು ಕುಳಿತಿರುತ್ತಾರೆ. ಅದರಲ್ಲೂ ಪುರುಷರಿಗೆ ಮೊದಲ ರಾತ್ರಿ ಎನ್ನುವುದು ಬಹಳ ಮುಖ್ಯವಾಗಿರುತ್ತೆ ಆದರೆ ಇಲ್ಲೊಂದು ಘಟನೆ ಇದಕ್ಕೆ ವಿರುದ್ಧವಾಗಿ ನಡೆದಿದೆ ನೋಡಿ.
ಮೊದಲ ರಾತ್ರಿಯ ದಿನ ತಲೆಮರಿಸಿಕೊಂಡ (Husband escape) ವರ ಎನ್ನುವ ವರದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಮದುವೆಯಾಗಿ ಮೊದಲ ರಾತ್ರಿಯ ಕೋಣೆ (Bed room) ಅಲಂಕಾರ ಮಾಡಲಾಗಿತ್ತು. ಆಕೆ ತನ್ನ ಪತಿಗಾಗಿ ಕೋಣೆಯಲ್ಲಿ ಕಾದು ಕುಳಿತಿದ್ದಳು. ಆದ್ರೆ ಆಸಾಮಿ ಮಾತ್ರ ಪತ್ತೇನೆ ಇಲ್ಲ.
ಈಗ ಬರ್ತಾನೆ ಆಗ ಬರ್ತಾನೆ ಅಂತ ಕಾದಿದ್ದೆ ಬಂತು. ರಾತ್ರಿಯಿಡೀ ಆತ ಮನೆಗೆ ಬರುವುದೇ ಇಲ್ಲ. ಅವನಿಗೆ ಮನೆಯವರು ಪತ್ನಿ ಕಾದು ಕಾದು ಸುಸ್ತಾಗುತ್ತಾರೆ. ಮನೆಯವರು ಕಂಗಾಲಾಗುತ್ತಾರೆ. ಮದುವೆಯಾದ ದಿನವೇ ಗಂಡ ಕಾಣೆಯಾಗಿದ್ದಕ್ಕೆ ಹುಡುಗಿಯೂ ಸಿಕ್ಕಾಪಟ್ಟೆ ಆತಂಕವಾಗುತ್ತದೆ. ಆತನಿಗೆ ಎಷ್ಟೇ ಫೋನ್ ಮಾಡಿದರೂ ಸ್ವಿಚ್ ಆಫ್ ಮಾಡಿ ಕುಳಿತಿದ್ದ. ಹಾಗಾಗಿ ಪೋನ್ ಕರೆಗೂ ಸಿಗಲಿಲ್ಲ. ರಾತ್ರಿ ಪೂರ್ತಿ ತಲೆಕೆಡಿಸಿಕೊಂಡು ಬಿಟ್ಟರು ಮನೆಯವರು.
ಹಾಗಾದರೆ ಅವರ ಮೊದಲ ರಾತ್ರಿಯಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗಿರಬಹುದು ಆತ ಎಂದು ನಿಮಗೂ ಆಶ್ಚರ್ಯವಾಗಿರಬಹುದು ಅಲ್ವಾ?ಅದು ಕೊನೆಗೂ ರಾತ್ರಿ ಪೂರ್ತಿ ಮನೆಗೆ ಬರಲೇ ಇಲ್ಲ ಬೆಳಗ್ಗೆ ಆಗುತ್ತಿದ್ದ ಹಾಗೆ ಸ್ವಿಚ್ ಆನ್ ಮಾಡಿಕೊಂಡಿದ್ದ ಮತ್ತೆ ಆತನಿಗೆ ಫೋನ್ ಮಾಡಿ ಮನೆಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ನನಗೆ ಸಿಕ್ಕಾಪಟ್ಟೆ ನಾಚಿಕೆಯಾಯಿತು ಅದನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡಿದೆ ಎಂದು ಉತ್ತರಿಸಿದ ಆತ ಬೇರೆ ಎಲ್ಲೂ ಹೋಗಿಲ್ಲ ಪಕ್ಕದ ಮನೆಯಲ್ಲಿಯೇ ಅವಿತು ಕುಳಿತಿದ್ದ.
ಸಾಕಷ್ಟು ಜನರು ಇದು ನಿಜವಾದ ಕಾರಣ ಇರಲಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಘಟನೆಯ ಅಸಲಿ ಏನು ಎಂದು ನಿಜಕ್ಕೂ ಯಾರಿಗೂ ಗೊತ್ತಿಲ್ಲ ಪುರುಷ ಮೊದಲ ರಾತ್ರಿಗೆ ಹೆದರಿ ಕಣ್ಣು ತಪ್ಪಿಸಿ ಕುಳಿತುಕೊಂಡಿದ್ದಾನೆ ಅಂದ್ರೆ ನಂಬುವುದಕ್ಕೂ ಅಷ್ಟು ಸುಲಭ ಅಲ್ಲ. ಇದರ ಹಿಂದೆ ಬೇರೆ ಯಾವುದು ಕಾರಣ ಇರಬೇಕು ಎಂದು ನೆಟ್ಟಿದರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮಹಾಪುರುಷನ ಸುದ್ದಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ.