ಬೆಂಗಳೂರು ಜನಗಳೇ ಟೀ ಕುಡಿಯೋ ಜನರೇ ನೀವು ನೋಡಲೇಬೇಕಾದ ಸ್ಟೋರಿ!, ಎಲ್ಲವೂ ನಕಲಿ, ನಕಲಿ

ಇತ್ತೀಚೆಗಿನ ದಿನಗಳಲ್ಲಿ ಬ್ರಾಂಡೆಡ್ ಹೆಸರಿ (Branded Name) ನಲ್ಲಿ ನ-ಕಲಿ ಉತ್ಪನ್ನಗಳು ಮಾರುಕಟ್ಟೆಯನ್ನು ಆಳುತ್ತಿವೆ. ನ-ಕಲಿಯೋ ಅಸಲಿಯೋ ಎನ್ನುವುದು ಗೊತ್ತಾಗದಷ್ಟು ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಅದರಲ್ಲಿಯು ಬ್ರಾಂಡೆಡ್ ಟೀ, ಸರ್ಫ್ ಎಕ್ಸೆಲ್ ಹಾಗೂ ರಿನ್ ಪೌಡರ್ ಎಂದು ಮಾರುಕಟ್ಟೆಯಲ್ಲಿ ನ-ಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಇದೀಗ ಬೆಂಗಳೂರು (Banglore), ರಾಮನಗರ (Ramanagar), ಕೋಲಾರ (Kolar) ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ನಕಲಿ ಉತ್ಪನ್ನಗಳು ಸರಬರಾಜು ಆಗುತ್ತಿದ್ದು, ಮಾರಾಟಗಾರರು ಜನರನ್ನು ಮೋ-ಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ 3 ರೋಜಸ್, ಸರ್ಫ್ ಎಕ್ಸೆಲ್ ಹಾಗೂ ರಿನ್ ಪೌಡರ್ ಫ್ಯಾಕ್ಟರಿ ಮೇಲೆ ಮಾದನಾಯಕನಹಳ್ಳಿ ಪೊಲೀಸರು (Madanayakanahalli police) ದಾ-ಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಾಂಡೆಡ್ ಉತ್ಪನ್ನಗಳ ಸೇವಾ ಸಂಸ್ಥೆಯಾದ ಅನ್ವೇಶ್ ಐಪಿಆರ್ (Anvesh IPR) ಹಾಗೂ ಹಿಂದೂಸ್ಥಾನ ಯೂನಿ ಲಿವರ್ ಸಂಸ್ಥೆ (Hindustan Uni Lever Institute) ಮಾಹಿತಿಯನ್ನು ನೀಡಿದೆ. ಈ ಮಾಹಿತಿಯ ಅನುಸಾರವಾಗಿ ದಾ-ಳಿ ನಡೆದ ಸಿಸಿಬಿ ಪೊಲೀಸರು ಸಪ್ಲೈ ಆಗ್ತಿದ್ದ ಸ್ಟಾಕ್ ಮೇಲೆ ಗಮನ ಹರಿಸಿದ್ದಾರೆ.

ಆ ಬಳಿಕ ಈ ನಕಲಿ ಉತ್ಪನ್ನಗಳನ್ನು ಉತ್ಪಾದದಿಸುವ ಫ್ಯಾಕ್ಟರಿಗಳು ಹೊರವಲಯದಲ್ಲಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮೂರು ಅಕ್ರಮಗಳ ಫ್ಯಾಕ್ಟರಿ ಮೇಲೆ ದಾ-ಳಿ ನಡೆಸಲಾಗಿದೆ. ದಾಳಿಯ ವೇಳೆಯಲ್ಲಿ ಲಕ್ಷಾಂತರ ಮೌಲ್ಯದ ನಕಲಿ 3 ರೋಜಸ್ ಟೀ ಪೌಡರ್, ಸರ್ಫ್ ಎಕ್ಸೆಲ್ ಮತ್ತು ರಿನ್ ಡಿಟರ್ಜೆಂಟ್ ಪೌಡರ್ ಗಳನ್ನು ವ-ಶಕ್ಕೆ ಪಡೆದುಕೊಳ್ಳಲಾಗಿದೆ. ದಾ-ಳಿಯ ವೇಳೆಯಲ್ಲಿ ಬೂಮಾರಾಮ್ (Bumaram), ಮಾಧುಸಿಂಗ್ (Madhusingh) ವಿಕ್ರಂಸಿಂಗ್ ಹಾಗೂ ಶಿವಕುಮಾರ್ (Shivakumar) ಎಂಬುವವರನ್ನು ಬಂ-ಧಿಸಲಾಗಿದೆ.

ರಾಜಸ್ಥಾನ ಮೂಲದ ಈ ಅ-ಪರಾಧ ಜಾಲವಾಗಿದ್ದು, ಈಗಾಗಲೇ ಈ ತಂಡವು ತಮಿಳುನಾಡಿನ ಚೆನ್ನೈ, ಕೊಯಮತ್ತೂರು, ಸೇಲಂ, ವೆಲ್ಲೂರು ಮತ್ತು ಕರ್ನಾಟಕದ ದಾವಣಗೆರೆ, ಕೋಲಾರ ಮತ್ತು ರಾಮನಗರ ಸೇರಿದಂತೆ ಹಲವೆಡೆ ತನ್ನ ನ-ಕಲು ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಜನಸಾಮಾನ್ಯರು ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳೆಂದು ಈ ಉತ್ಪನ್ನಗಳನ್ನು ಖರೀದಿಸುವ ಮುನ್ನ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು.

Leave a Reply

Your email address will not be published. Required fields are marked *