ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಅವರ ಮುದ್ದಿನ ಮಗಳು ಎಷ್ಟು ಕೋಟಿ ಒಡತಿ ಆಗಲಿದ್ದಾಳೆ ನೋಡಿ ಅಬ್ಬಾ!!

ತೆಲುಗಿನ ಸ್ಟಾರ್ ನಟ ರಾಮ್ ಚರಣ್ (Ram Charan) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿರುವ ರಾಮ್ ಚರಣ್ ಅವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಪತ್ನಿ ಉಪಾಸನಾ ಕಮ್ಮಿನೇನಿ ಕೋನಿಡೆಲಾ (Upasana Konidela) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜೂನ್ 20ರಂದು ಮಗು ಜನಿಸಿದ್ದು, ಜೂನ್ 23 ರಂದು ರಾಮ್ ಚರಣ್ ಹಾಗೂ ಉಪಾಸನಾ ತಮ್ಮ ಮುದ್ದಾದ ಮಗುವಿನೊಟ್ಟಿಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಅಭಿಮಾನಿಗಳು ಸೇರಿದ್ದರು.

ಅಂದಹಾಗೆ ಈಗಾಗಲೇ ತೆಲುಗು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ರಾಮ್ ಚರಣ್ ಅವರು ಬೇಡಿಕೆಯನ್ನು ಹೊಂದಿದ್ದು, ಸಿನಿಮಾಗಳಿಗೂ ಕೂಡ ಬಾರಿ ಸಂಭಾವನೆ (Remuneration) ಪಡೆಯುತ್ತಾರೆ. ಇದೀಗ ಅವರ ಮನೆಗೆ ಪುಟ್ಟ ಲಕ್ಷ್ಮೀಯ ಆಗಮನವಾಗಿದ್ದು, ನಟನ ಮಗಳು ಎಷ್ಟು ಕೋಟಿ ಆಗಲಿದ್ದಾಳೆ ಎಂದು ಕೇಳಿದರೆ ಶಾಕ್ ಆಗುವುದು ಪಕ್ಕಾ. ದಕ್ಷಿಣದ ಸೂಪರ್‌ಸ್ಟಾರ್ ರಾಮ್ ಚರಣ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

ಪ್ರಸ್ತುತ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದು ಇವರ ಒಟ್ಟು ಆಸ್ತಿಯ ಅಂದಾಜು 1,370 ಕೋಟಿ ರೂಪಾ ಯಿಯಾಗಿದೆ. ಅದಲ್ಲದೇ ಉಪಾಸನಾ ಮತ್ತು ರಾಮ್ ಚರಣ್ ಅವರ ಒಟ್ಟು ನಿವ್ವಳ ಆಸ್ತಿಯ ಮೌಲ್ಯ ಸುಮಾರು ರೂ. 2,500 ಕೋಟಿಯಾಗಿದೆ. ಹೀಗಾಗಿ ನಟ ರಾಮ್ ಚರಣ್ ಮಗಳು 2,500 ಕೋಟಿ ರೂಪಾಯಿಯ ಒಡತಿ ಆಗಲಿದ್ದಾಳೆ. ಆದರೆ ಮುಂಬರುವ ದಿನಗಳಲ್ಲಿ ನಟನ ಮಗಳ ಒಟ್ಟು ಆಸ್ತಿಯು ಹೆಚ್ಚಾಗಲಿದೆ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ.

ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ನಟ ರಾಮ್ ಚರಣ್, “ನನಗೆ ಸಂಪ್ರದಾಯಗಳ ಬಗ್ಗೆ ಹೆಚ್ಚು ಗೊತ್ತಿಲ್ಲ ಮಗುವಿಗೆ ಹೆಸರನ್ನು 12 ಅಥವಾ 13ನೇ ದಿನವು ಇಡುತ್ತಾರೆ. ಆ ದಿನ ನಾನೇ ಎಲ್ಲರಿಗೂ ನಾನೇ ಹೇಳುತ್ತೇನೆ. ಈಗಾಗಲೇ ನಾನು ಹಾಗೂ ಉಪಾಸನಾ ಹೆಸರುಗಳ ಬಗ್ಗೆ ಯೋಚನೆ ಮಾಡಿದ್ದೇವೆ. ಆದರೆ ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮ ನಡೆದಾಗ ಹೆಸರು ಇಡುತ್ತೇವೆ. ಅಂದು ನಾನೇ ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ” ಎಂದಿದ್ದಾರೆ.

ಅದಲ್ಲದೇ, ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡಾಗ ಆದ ಅನುಭವದ ಬಗ್ಗೆ ಮಾತನಾಡಿದ್ದ ರಾಮ್ ಚರಣ್, ”ಅದೊಂದು ವಿಶೇಷ ಅನುಭವ. ಎಲ್ಲ ತಂದೆಯರಿಗೂ ಆಗುವಂಥಹದ್ದೇ, ನಾನು ಅದನ್ನು ವಿವರಿಸಲು ಹೋದರೆ ಸಿನಿಮೀಯ ಎನಿಸುತ್ತದೆ, ಸ್ಕ್ರಿಪ್ಟ್ ರೀತಿ ಅನಿಸುತ್ತದೆ. ಆದರೆ ಎಲ್ಲರೂ ಸಂತೋಷವಾಗಿದ್ದಾರೆ. ಬಹಳ ವರ್ಷಗಳಿಂದ ಅಂದುಕೊಂಡಿದ್ದೆವು. ಸರಿಯಾದ ಸಮಯದಲ್ಲಿ ಆ ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ” ಎಂದಿದ್ದಾರೆ. ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎಂದು ಕೇಳಿದ್ದಕ್ಕೆ ‘ಮಗಳು ನನ್ನನ್ನೇ ಹೋಲುತ್ತಿದ್ದಾಳೆ’ ಎಂದು ಹೇಳಿ ನಗು ಬೀರಿದ್ದಾರೆ.

Leave a Reply

Your email address will not be published. Required fields are marked *