ಪ್ರಚಾರಕ್ಕಾಗಿ ಸೀರೆ ಸೆರಗು ಜಾರಿಸಿದ ಕನ್ನಡ ನಟಿ ನೇಹಾ ಶೆಟ್ಟಿ! ಎಲ್ಲಾ ನೋಡಿ ಗರಮ್ ಆದ ನೆಟ್ಟಿಗರು!!

ಇತ್ತೀಚಿನ ದಿನಗಳಲ್ಲಿ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗಿ ಅದ್ಭುತ ಕಥೆ ಹಂದರ ಹೊಂದಿರುವುದು ಎಷ್ಟು ಮುಖ್ಯವೋ ಅದರ ಪ್ರಚಾರದ(Promotion) ಕೆಲಸಗಳು ಕೂಡ ಅಷ್ಟೇ ಮುಖ್ಯ. ಕಳಪೆ ಪ್ರಚಾರದ ಕೆಲಸಗಳೇನಾದರೂ ಮಾಡಿದರೆ ಸಿನಿಮಾ ಅಕ್ಟರ್ ಫ್ಲಾಪ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಸೆಲೆಬ್ರೆಟಿಗಳು ತಮ್ಮ ಸೋಶಿಯಲ್ ಮೀಡಿಯಾ (social media) ಹಾಗೂ ಇನ್ನಿತರ ಜಾಲಗಳನ್ನು ಉಪಯೋಗಿಸಿ ಚಿತ್ರದ ಭರ್ಜರಿ ಪ್ರಮೋಷನ್ ಕೆಲಸವನ್ನು ಮಾಡುತ್ತಿರುತ್ತಾರೆ.

ಹೀಗಿರುವಾಗ ನಟಿ ನೇಹಾ ಶೆಟ್ಟಿ (Neha Shetty) ಪ್ರಚಾರದ ಕಾರಣದಿಂದಾಗಿ ವೇದಿಕೆಯ ಮೇಲೆ ತಮ್ಮ ಸೆರಗನ್ನು ಬಿಚ್ಚಿ ನಟನ ಮೇಲೆ ಎಸೆದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ನೇಹ ಶೆಟ್ಟಿ (Neha Shetty) ವಿರುದ್ಧ ರುಚಿಗೆದ್ದಿದ್ದಾರೆ. ಹೌದು ಗೆಳೆಯರೇ ನಟಿ ನೇಹಾ ಶೆಟ್ಟಿ ವಿಶ್ವಾಕ್ ಸೇನ್ (Vishwak Sen) ಜೊತೆಗೆ ಗ್ಯಾಂಗ್ಸ್ ಆಫ್ ಗೋದಾವರಿ (Gangs of godavari) ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು.

ಈ ಸಿನಿಮಾದ ಶೂಟಿಂಗ್ ಕೆಲಸಗಳೆಲ್ಲವೂ ಮುಗಿದು ನೆನ್ನೆ ಅಷ್ಟೇ ಸುತ್ತಮ್ಮ ಸೂಸಿ ಎಂಬ ಹಾಡನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸ್ಟೆಪ್ ಹಾಕಿದಂತಹ ನೇಹಾ ಹಾಗೂ ವಿಶ್ವಕ್ ಬಹಳ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಹೀಗೆ ಹಾಡಿನ ಮಧ್ಯೆ ನೇಹಾ ತಮ್ಮ ಸೀರೆಯ ಸೆರಗನ್ನು ಮೆಚ್ಚಿ ನಾಯಕನ ಮೇಲೆ ಎಸೆದು ಹುಕ್ ಸ್ಟಾಪ್ ಹಾಕಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾ ಇದ್ದ ಹಾಗೆ ಪ್ರಚಾರಕ್ಕಾಗಿ ಎಂಥ ಕೆಲಸ ಬೇಕಾದರೂ ಮಾಡುತ್ತಿರಾ ಎಂದು ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಖುಷಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ನಟ ವಿಜಯ್ ದೇವರಕೊಂಡ (Vijay Devarakonda) ಸಮಂತಾ (Samantha) ಅವರೊಂದಿಗೆ ನೃತ್ಯ ಮಾಡುವಾಗ ತಮ್ಮ ಅಂಗಿಯನ್ನು ಬಿಚ್ಚಿ ಎಸೆದಿದ್ದರು. ಇದೀಗ ನಟಿ ನೇಹಾ ಶೆಟ್ಟಿ (Neha Shetty) ಕೂಡ ಇದೇ ರೀತಿಯಾದಂತಹ ಅಸಭ್ಯ ವರ್ತನೆಯನ್ನು ತೋರಿರುವುದು ನೆಟ್ಟಿಗರ ಮುಂಗೋಪಕ್ಕೆ ಗುರಿಯಾಗಿದೆ.

Leave a Reply

Your email address will not be published. Required fields are marked *