Neeraj kumar and wife : ಪರಸ್ಪರರ ಪತ್ನಿಯರನ್ನು ಮದುವೆ ಮಾಡಿಕೊಂಡ ಪತಿರಾಯರು, ಕೊನೆಗೆ ಬಯಲಾಯ್ತು ಅಸಲಿ ಸತ್ಯ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.. ಇತ್ತೀಚೆಗಿನ ದಿನಗಳಲ್ಲಿ ಎರಡನೇ ಮದುವೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ನಡೆದಿರುವ ಘಟನೆಯನ್ನು ಗಮನಿಸಿದರೆ ಇಬ್ಬರು ಮಹಿಳೆಯರು ಪರಸ್ಪರರ ಗಂಡಂದಿರನ್ನೇ ಮದುವೆಯಾಗಿರುವ ಪ್ರಕರಣವೊಂದು ನಡೆದಿದೆ. ಈ ಘಟನೆಯೂ ಬಿಹಾರದಲ್ಲಿ ನಡೆದಿರುವುದು ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.
ನೀರಜ್ ಕುಮಾರ್ ಸಿಂಗ್ ಎನ್ನುವ ವ್ಯಕ್ತಿ 2009 ರಲ್ಲಿ ಚೌತಮ್‌ನಲ್ಲಿರುವ ಪಸ್ರಾಹ ಗ್ರಾಮದ ರೂಬಿದೇವಿ ಎನ್ನುವವರನ್ನು ವಿವಾಹವಾಗಿದ್ದರು. ನೀರಜ್ ಕುಮಾರ್ ಸಿಂಗ್ ದಂಪತಿಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ವರ್ಷ ರೂಬಿದೇವಿ ಪೋಷಕರ ಮನೆ ಬಳಿ ಇರುವ ಪ್ರಿಯಕರ ಮುಕೇಶ್ ಕುಮಾರ್ ಸಿಂಗ್ ಓಡಿ ಹೋಗಿದ್ದು, ಆತನನ್ನೇ ಮದುವೆಯಾಗಿದ್ದಳು.
ಆದರೆ ಒಂದು ಹೆಣ್ಣು ಮಗುವನ್ನು ನೀರಜ್ ನೊಂದಿಗೆ ಬಿಟ್ಟು ಹೋಗಿದ್ದಳು. ಅದಲ್ಲದೇ ಈ ಮುಕೇಶ್ ಕುಮಾರ್ ಸಿಂಗ್ ಅವರಿಗೆ ಈಗಾಗಲೇ ಮದುವೆಯಾಗಿ 2 ಮಕ್ಕಳಿದ್ದಾರೆ. ಮುಕೇಶ್ ಅವರ ಮೊದಲ ಪತ್ನಿಯ ಹೆಸರು ಕೂಡ ರೂಬಿದೇವಿಯಾಗಿರುವುದು ಮತ್ತೊಂದು ವಿಶೇಷ.ಅಂದಹಾಗೆ, ಮುಕೇಶ್ ಅವರ ಮೊದಲ ಪತ್ನಿ ರೂಬಿದೇವಿಯೂ ಪತಿಯಿಂದ ದೂರವಾಗಿದ್ದು ಬೇರೆ ವಾಸವಾಗಿದ್ದರು.
ಇತ್ತ ಮುಕೇಶ್ ತನ್ನ ಹೊಸ ಸಂಗಾತಿ ರೂಬಿದೇವಿ ಅವರೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದರು. ಇದಾದ ಕೆಲವು ತಿಂಗಳ ಬಳಿಕ ಈ ನೀರಜ್ ಕುಮಾರ್ ಸಿಂಗ್ ಅವರು ತನ್ನ ಪತ್ನಿ ರೂಬಿದೇವಿಯನ್ನು ಜೊತೆಗೆ ಮದುವೆಯಾಗಿರುವ ಮುಕೇಶ್ ಕುಮಾರ್ ಅವರ ಮೊದಲ ಪತ್ನಿ ರೂಬಿದೇವಿ ಅವರ ಪೋನ್ ನಂಬರ್ ಪಡೆದುಕೊಂಡಿದ್ದಾನೆ. ಮೊದಲ ಬಾರಿಗೆ ನೀರಜ್ ಹಾಗೂ ರೂಬಿದೇವಿ ಮಾತನಾಡಿದ್ದು,
ಕೊನೆಗೆ ಫೋನಿನಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಈ ಮಾತುಕತೆಯೂ ಇವರಿಬ್ಬರ ನಡುವೆ ಪ್ರೀತಿ ಚಿಗುರಲು ಕಾರಣವಾಯಿತು. ಕಳೆದ ತಿಂಗಳು ಫೆ.18 ರಂದು ಮುಕೇಶ್ ಮೊದಲ ಪತ್ನಿ ರೂಬಿದೇವಿಯ ಜೊತೆಗೆ ನೀರಜ್ ಕುಮಾರ್ ಮದುವೆಯಾಗಿದ್ದಾರೆ. ಇತ್ತ ನೀರಜ್ ಕುಮಾರ್ ರೂಬಿದೇವಿ ಮೂವರು ಮಕ್ಕಳೊಂದಿಗೆ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಆದರೆ ಇತ್ತ ನೀರಜ್ ಕುಮಾರ್ ತನ್ನ ಮೊದಲ ಪತ್ನಿಯೊಂದಿಗೆ ಓಡಿ ಹೋಗಿ ಮದುವೆಯಾದ ಮುಕೇಶ್ ಅವರಿಗೆ ಬುದ್ಧಿ ಕಲಿಸಬೇಕೆನ್ನುವ ಹೀಗೆ ಮಾಡಿದ್ದಾನೆಯಂತೆ. ಹೌದು ಮುಕೇಶ್ ಅವರ ಮೊದಲ ಪತ್ನಿಯನ್ನು ಪ್ರೀತಿಸಿ ನೀರಜ್ ಬಲೆಗೆ ಬೀಳಿಸಿಕೊಂಡಿದ್ದಾನೆ ಎನ್ನಲಾಗಿದೆ.