ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿಯರ ಪೈಕಿ ನಯನಾತಾರಾ ಕೂಡ ಒಬ್ಬರು. ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ಗಳ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಕೇರಳದಲ್ಲಿ ಹುಟ್ಟಿದ್ದ ನಯನಾತಾರಾರವರು ಸಿನಿರಂಗಕ್ಕೆ ಬರುವ ಮುನ್ನ ನಯನಾ ತಾರಾ ಮೊಡಲಿಂಗ್ ಸಂಸ್ಥೆಯಲ್ಲಿ ಪಾರ್ಟಿ ಕೆಲಸವನ್ನು ಮಾಡುತ್ತಿದ್ದರು.
ಡೈರೆಕ್ಟರ್ ಸತ್ಯಂ ಅವರ ಸಹಾಯದಿಂದ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. 2003ರಲ್ಲಿ ಮಲಯಾಳಂನಲ್ಲಿ ಮನಸ್ಸಿನ ನಕ್ಕ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸಿನಿ ರಸಿಕರ ಮನಸ್ಸು ಗೆದ್ದ ನಟಿ ನಯನಾ ತಾರಾರವರು ಕಳೆದ ವರ್ಷ ಜೂನ್ 9 ರಂದು ಬಹುಕಾಲದಿಂದ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಅವರ ಜೊತೆಗೆ ಸಪ್ತ ಪದಿ ತುಳಿದಿದ್ದರು.
ಸೂಪರ್ ಸ್ಟಾರ್ ಮಹೇಶ್ ಬಾಬು ಮಗಳು 10 ನೇ ವಯಸ್ಸಿಗೆ ಸಂಪಾದನೆ ಮಾಡುತ್ತಿರುವ ಹಣವೆಷ್ಟು ಗೊತ್ತಾ!! ಕೇಳಿದರೆ ಸುಸ್ತಾಗಿ ತಲೆ ತಿರುಗಿ ಬೀಳುತ್ತೀರಿ !!!
ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ತಂದೆ ತಾಯಿಯಾದ ವಿಚಾರವನ್ನು ನಯನತಾರಾ ಪತಿ ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಕ್ಟೋಬರ್ 9 ರ ಸಂಜೆ 6.30 ಕ್ಕೆ ತಾವು ಅವಳಿ ಮಕ್ಕಳಿಗೆ ಅಪ್ಪ ಅಮ್ಮ ಆಗಿರುವುದಾಗಿ ಘೋಷಿಸಿದ್ದರು.
ಈ ಬಗ್ಗೆ ಅವಳಿ ಗಂಡು ಮಕ್ಕಳ ಜೊತೆ ತಾವಿರೋ ಪೋಟೋವನ್ನು ಶೇರ್ ಮಾಡಿಕೊಂಡಿರುವ ವಿಘ್ನೇಶ್ ಶಿವನ್ ಮತ್ತು ನಯನತಾರಾ ವಿಸ್ಕೃತವಾದ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದರು. ಆದರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಗ್ನೇಶ್ ಶಿವನ್ ಮದುವೆಗೂ ಮುನ್ನವೇ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರಂತೆ. ವೈವಾಹಿಕ ಜೀವನಕ್ಕೆ ಬಳಿಕ ತಾಯ್ತನದ ಬಗ್ಗೆ ರಿವೀಲ್ ಮಾಡಿದ್ದರು.
ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಯನಾತಾರಾ ಕನೆಕ್ಟ್ ಪ್ರಚಾರದ ಮಾಡುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆಯಲ್ಲಿ ಕಾಸ್ಟಿಂಗ್ ಕೌಚ್ ಕುರಿತು ನಟಿ ಮಾತನಾಡಿದ್ದಾರೆ. ತಾನು ಇಂಡಸ್ಟ್ರಿಗೆ ಹೊಸಬಳಾದ್ದಾಗ ಕಾಸ್ಟಿಂಗ್ ಕೌಚ್ ಎದುರಿಸಿದ್ದೆ ಎಂದು ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಕಮಿಟ್ ಮೆಂಟ್ ಮಾಡಿಕೊಳ್ಳುವಂತೆ ಕೆಲವರು ಕಿರುಕುಳ ನೀಡಿದ್ದಾರೆ.
ಅವರ ಬೇಡಿಕೆಗಳನ್ನು ನೇರವಾಗಿ ತಿರಸ್ಕರಿಸಿದ್ದೇನೆ. ಆ ಘಟನೆಯ ನಂತರ ನನ್ನೊಂದಿಗೆ ಯಾರೂ ಈ ರೀತಿ ಹುಚ್ಚುಚ್ಚಾಗಿ ವರ್ತಿಸಲಿಲ್ಲ. ತನ್ನ ಪ್ರತಿಭೆಯನ್ನು ನಂಬಿ ಈ ಮಟ್ಟಕ್ಕೆ ಬಂದಿದ್ದೇನೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದ ನಯನತಾರಾ.. ಅದು ನಮ್ಮ ನಡವಳಿಕೆಯ ಮೇಲೂ ಅವಲಂಬಿತವಾಗಿದೆ ಎಂಬುದು ಗಮನಾರ್ಹ. ನಮ್ಮ ನಡತೆ ಸರಿಯಿಲ್ಲದಿದ್ದರೂ ಇಂತಹ ಕಷ್ಟಗಳು ಬರುತ್ತವೆ ಎಂದಿದ್ದಾರೆ.
ನಟಿ ನಯನಾರವರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಹಿಂದೆ ನಡೆದಿದ್ದರೆ ಈಗ ಬಹಿರಂಗಪಡಿಸುವುದೇಕೆ? ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಇನ್ನು ಕೆಲವರು ಮೀಟೂ ಆಂದೋಲನದ ಸಂದರ್ಭದಲ್ಲಿ ಸುಮ್ಮನಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಬಹುತೇಕ ನಟಿಯರು ಸಿನಿಮಾರಂಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಆದರೆ ಬಾಯಿ ಬಿಡುವುದಿಲ್ಲ.