ಮದುವೆಯಾಗಿ ಆರೇ ತಿಂಗಳಿಗೆ ಗರ್ಭಿಣಿಯಾದ ಹೆಂಡತಿಯ ಶೀ ಲವನ್ನು ಶಂಕಿಸಿ ಗಂಡ ಮಾಡಿದ್ದೇನು ಗೊತ್ತಾ!! ಇಂತಹ ಅನುಮಾನ ಪಿಶಾಚಿ ಗಂಡಂದಿರು ಇರ್ತಾರೆ ನೋಡಿ !!!

ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಆರಂಭವಾಗುವ ಮುನಿಸು, ಭಿನ್ನಾಭಿಪ್ರಾಯ, ಅನುಮಾನ ಹಾಗೂ ಅಕ್ರಮ ಸಂಬಂಧಗಳು ಕೊನೆಗೆ ಜೀವ ತೆಗೆಯುವ ಹಂತಕ್ಕೆ ತಲುಪುತ್ತಿದೆ ಎನ್ನುವುದೇ ವಿಪರ್ಯಾಸ. ಹೌದು ಇತ್ತೀಚೆಗಿನ ದಿನಗಳಲ್ಲಿಯಂತೂ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿದೆ.

ಆದರೆ ಇಲ್ಲೊಬ್ಬನು ಶೀಲ ಶಂಕಿಸಿ ಪತ್ನಿಯನ್ನು ಹ- ತ್ಯೆಗೈದಿದ್ದಾನೆ. ಅಷ್ಟೇ ಅಲ್ಲದೇ ಆತನು ಪ್ರಿಯಕರನನ್ನೂ ಮುಗಿಸುವುದಾಗಿ ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಪರಾರಿಯಾಗಿದ್ದಾನೆ. ಈ ಘಟನೆಯೂ ನಗರದ ತಾವರೆಕೆರೆಯ ಸುಭಾಷ್ ನಗರದಲ್ಲಿ ನಡೆದಿದೆ. ನಾಜ್(22) ಜೀವ ಕಳೆದುಕೊಂಡವವಳು ಗೃಹಿಣಿಯಾಗಿದ್ದು,

ಈಕೆಯ ಪತಿ ನಾಸೀರ್ ಹುಸೇನ್ ಆರೋಪಿಯಾಗಿದ್ದಾನೆ. ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸುದ್ದುಗುಂಟೆ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕಾಗಿ ತನಿಖೆ ಕೈಗೊಂಡಿದ್ದಾರೆ.ನಾಜ್ ಮತ್ತು ನಾಸೀರ್ ಹುಸೇನ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ನಾಸೀರ್​ಗೆ ತಂದೆ ಮತ್ತು ತಾಯಿ ಯಾರೂ ಇರಲಿಲ್ಲ.

ಆತನನ್ನು ಇಷ್ಟಪಟ್ಟ ನಾಜ್ ಪೋಷಕರು ಪ್ರೇಮ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದರು. ಆರು ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿ ತಾವರೆಕೆರೆಯ ಸುಭಾಷ್ ನಗರದಲ್ಲಿ ಫ್ಲ್ಯಾಟ್​ ನಲ್ಲಿ ವಾಸಿಸುತ್ತಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದ್ದರು. ಆದರೆ ನಾಸೀರ್​ಗೆ ಅನುಮಾನವೊಂದು ಶುರುವಾಗಿದೆ. ನಾಜ್ ಗರ್ಭಿಣಿಯಾದಾಗ ಪತಿ ನಾಸೀರ್​ಗೆ ಅನುಮಾನ ಪಡಲು ಶುರು ಮಾಡಿದ್ದಾನೆ.

ಪತ್ನಿ ಗರ್ಭಿಣಿಯೆಂದು ಗೊತ್ತಾಗುತ್ತಿದ್ದಂತೆ ಅನುಮಾನ ಪಟ್ಟ ಪತಿ ನಾಸೀರ್, ಅದು ತನ್ನ ಮಗುವಲ್ಲ ಎಂದು ಹೇಳಿದ್ದು, ಈ ವಿಚಾರವಾಗಿ ದಂಪತಿಗಳ ನಡುವೆ ಜಗಳವಾಗಿದೆ.ಈ ಜಗಳವು ವಿಕೋಪಕ್ಕೆ ತಿರುಗಿದ್ದು, ನಾಸೀರ್ ಪತ್ನಿ ನಾಜ್​ಳನ್ನು ಉಸಿರುಗಟ್ಟಿಸಿ ಮುಗಿಸಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಆಗಮಿಸಿದ್ದಾರೆ. ಆ ವೇಳೆ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃ-ತ ನಾಜ್​ಳ ಮೃ-ತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಹೆಂಡತಿಯ ಶೀಲದ ಮೇಲೆ ಅನುಮಾನಗೊಂಡ ಪತ್ನಿಯ ಜೀವ ತೆಗೆದಿದ್ದು ಮಾತ್ರವಲ್ಲದೇ, ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶ ಕಳುಹಿಸಿದ್ದು, ತಪ್ಪಿಸಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು, ನಾಸೀರ್​ ಅವರ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *