ಕಳೆದ ವರ್ಷದಿಂದಲೇ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ತದನಂತರದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ಮದುವೆ ಸುದ್ದಿಯೂ ತಣ್ಣಗಾಗಿತ್ತು. ಆದರೆ ಹೊಸ ವರ್ಷದಂದೇ ಇವರಿಬ್ಬರೂ ವಿಡಿಯೋ ಮೂಲಕ ಸುದ್ದಿಯಾಗಿದ್ದರು.
ಹೊಸ ವರ್ಷದ ಪ್ರಾರಂಭದಲ್ಲಿ ನರೇಶ್ ಹೊಸ ಸುದ್ದಿ ಎಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ವಿಡಿಯೋದಲ್ಲಿ ನರೇಶ್ ಕ್ಯಾಂಡಲ್ ಲೈಟ್ನಲ್ಲಿ ಪವಿತ್ರಾ ಲೋಕೇಶ್ ಅವರೊಂದಿಗೆ ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿದ್ದರು. ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದರು. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ, ಈ ಹೊಸ ವರ್ಷಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕು. ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್ರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಈ ಬಗ್ಗೆ ಟಾಲಿವುಡ್ನ ಹಿರಿಯ ನಿರ್ಮಾಪಕ ಚಿಟ್ಟಿಬಾಬು ಬಹಿರಂಗಪಡಿಸಿದ್ದರು.ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಕುರಿತು ಮಾತನಾಡಿದ್ದರು. ಈ ವೇಳೆಯಲ್ಲಿ ಕೆಲವು ವಿಚಾರವನ್ನು ಬಹಿರಂಗ ಪಡಿಸಿದ ಚಿಟ್ಟಿಬಾಬು, ‘ 2019ರಲ್ಲಿ ನರೇಶ್ ಅವರ ತಾಯಿ ವಿಜಯ ನಿರ್ಮಲಾ ಮ-ರಣದ ನಂತರ ಅವರು ಒಬ್ಬಂಟಿಯಾದರು.
ಮತ್ತು ಅವರು ತಮ್ಮ ಬಯಲಾಜಿಕಲ್ ಅಥವಾ ಜನ್ಮ ಕೊಟ್ಟ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ನಾನಕ್ರಮ್‌ಗುಡದಲ್ಲಿರುವ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಸಾವಿನ ನಂತರವೂ ನರೇಶ್ ತೀವ್ರ ದುಃಖಿತರಾದರು. ಜೀವನದಲ್ಲಿ ಒಂಟಿಯಾಗಿ ಸಂಕಟ ಅನುಭವಿಸುತ್ತಿದ್ದರು.
ಹೀಗಾಗಿ ಮದುವೆಯಾಗಲು ನಿರ್ಧರಿಸಿ, ಪವಿತ್ರಾ ಅವರೊಂದಿಗಿನ ವಿವಾಹದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು ಎಂದು ಹೇಳಿದ್ದರು. ನಾಲ್ಕನೇ ಮದುವೆ ಸಜ್ಜಾಗುತ್ತಿರುವ ನಟ ನರೇಶ್ ಬಗ್ಗೆ ಹಿರಿಯ ನಟಿ ಆಮಾನಿ ಮಾತಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆಮಾನಿ ತಮ್ಮ ಸಿನಿಮಾಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ರಿವೀಲ್ ಮಾಡಿದ್ದಾರೆ.
ಪಂಬ ಚಿತ್ರದಲ್ಲಿ ನರೇಶ್ ಜೊತೆಗಿನ ಸೀನ್ ಬಗ್ಗೆ ಮಾತಾಡಿದ ನಟಿ ಆಮಾನಿ, ” ಸಿನಿಮಾದಲ್ಲಿ ಹಿರಿಯ ನಟ ನರೇಶ್ ನಾಯಕ ನಟರಾಗಿದ್ರು. ಸಿನಿಮಾದಲ್ಲಿ ಡ್ರಿಂಕ್ಸ್ ಮಾಡುವ ದೃಶ್ಯವಿತ್ತು. ನಟ ನಿಜವಾಗಿಯೇ ಡ್ರಿಂಕ್ಸ್ ಕುಡಿದು ನಟನೆ ಮಾಡಿದ್ರು. ಜಂಬಲಕಿಡಿ ಪಂಬಾ ಸಿನಿಮಾದಲ್ಲಿ ಡ್ರಗ್ ಸೀನ್ ಇರುತ್ತೆ ಅಂತ ಹೇಳಲೇ ಇಲ್ಲ. ಶೂಟಿಂಗ್ ಸ್ಪಾಟ್ ಗೆ ಹೋದ ಮೇಲೆ ಆ ಸೀನ್ ಮಾಡೋದು ಬೇಡ ಎಂದಿದ್ದೆ.
ಅದಲ್ಲದೇ ಬಾಟಲಿಯಲ್ಲಿ ಕೂಲ್ ಡ್ರಿಂಕ್ ಕೊಡ್ತಾರೆ ಎಂದುಕೊಂಡೆ. ಆದರೆ ನರೇಶ್ ನಿಜವಾದ ಬಿಯರ್ ಕೊಟ್ಟರು. ನಿರ್ದೇಶಕರು ಒಂದು ಶಾಟ್ ಹೇಳಿದರು. ಆಗ ನಾಯಕ ನರೇಶ್ ಕೂಡ ಬಿಯರ್ ಕುಡಿದೇ ನಟಿಸಿದ್ರು. ನಾನು ಕೂಡ ಬಿಯರ್ ಕುಡಿದೆ ನಟನೆ ಮಾಡಿದ್ದೇನೆ. ಅದರ ಜೊತೆಗೆ ಚಿತ್ರರಂಗಕ್ಕೆ ಬಂದ ವೇಳೆ ನನಗೆ ಕೆಲವರು ಹೊಸಬರು ಅಂತ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ.
ಒಮ್ಮೊಮ್ಮೆ ನಾನು ತಪ್ಪಾದ ಹಾದಿ ಆಯ್ಕೆ ಮಾಡಿಕೊಂಡಿದ್ದೇನೆ ಎನಿಸತೊಡಗಿತ್ತು” ಎಂದಿದ್ದಾರೆ. ನಟಿ ಆಮಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದರು. ಆದಾದ ಬಳಿಕ ಚಂದಮಾಮ ಕಥೆಗಳು ಚಿತ್ರದ ಮೂಲಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ ನಟಿ ಆಮಾನಿಯವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದೆ