ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಕೂರ್ಮಪೀಠ ದೇಣಿಗೆ ನೀಡಿದ ನಾರಾಯಣಮೂರ್ತಿ ದಂಪತಿಗಳು, ಇದರ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ!!

ಇನ್ಫೋಸಿಸ್ ಫೌಂಡೇಶನ್ (Infosys Foundation) ಮೂಲಕ ಸುಧಾಮೂರ್ತಿ (Sudhamurthi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳ ಸುದ್ದಿಯಾಗುವ ಮೂಲಕ ಸರಳವಾಗಿ ಬದುಕುತ್ತಿದ್ದಾರೆ. ಹೌದು, ನಾರಾಯಣಮೂರ್ತಿ ದಂಪತಿಗಳು ತಮ್ಮ ಸರಳ ಜೀವನದಿಂದಲೇ ಅನೇಕರಿಗೆ ಮಾದರಿಯಾಗಿದ್ದುಕೊಂಡು ಬಂದವರು. ಇತ್ತೀಚೆಗಷ್ಟೇ ಇನ್‌ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthi) ಮತ್ತು ಅವರ ಪತ್ನಿ, ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಕೂರ್ಮಪೀಠವನ್ನು ದಾನವಾಗಿ ನೀಡಿದ್ದಾರೆ.

ಕಳೆದ ಭಾನುವಾರ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರ ಆಶೀರ್ವಾದ ಪಡೆದ ನಾರಾಯಣಮೂರ್ತಿ ಹಾಗೂ ಸುಧಾ ದಂಪತಿ, ಸುಮಾರು 2 ಕೆಜಿ ತೂಕದ ಚಿನ್ನದ ಈ ವಸ್ತುಗಳನ್ನು ದೇಣಿಗೆಯಾಗಿ ದೇವಾಲಯಕ್ಕೆ ನೀಡಿದ್ದಾರೆ. ಇದರ ಬೆಲೆ ಸುಮಾರು 1.25 ಕೋಟಿ ರೂ. ಎನ್ನಲಾಗಿದೆ. ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಎವಿ ಧರ್ಮ ರೆಡ್ಡಿ (AV Dharma Reddy) ಅವರು ಇವುಗಳನ್ನು ದೇವಸ್ಥಾನದ ಪರವಾಗಿ ಸ್ವೀಕರಿಸಿದ್ದಾರೆ. ಆದಾದ ಬಳಿಕ ನಾರಾಯಣಮೂರ್ತಿ ದಂಪತಿಗೆ ಶೇಷವಸ್ತ್ರ ತೊಡಿಸಿ ಸನ್ಮಾನಿಸಿ ಪ್ರಸಾದ ನೀಡಿದ್ದಾರೆ.

ಇತ್ತೀಚೆಗಷ್ಟೇ ಹಿಂದಿ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ನಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ( Infosis Foundation Founder Sudha Moorthy) ಭಾಗವಹಿಸಿದ್ದರು. ಈ ವೇಳೆಯಲ್ಲಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ರಿವೀಲ್ ಮಾಡಿದ್ದರು. ಸುಧಾ ಮೂರ್ತಿಯವರು ಪತಿ ನಾರಾಯಣ್ (Narayan) ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದ ಸುಧಾ ಮೂರ್ತಿ, ‘’ಪುಣೆಯಲ್ಲಿ ನನ್ನ ಫ್ರೆಂಡ್‌ ಪ್ರಸನ್ನ ಅಂತ ಇದ್ದರು. ಕೆಲಸಕ್ಕೆ ನಾವು ಬಸ್‌ನಲ್ಲಿ ಹೋಗುತ್ತಿದ್ವಿ. ಅವರು ಪ್ರತಿ ದಿನ ಪುಸ್ತಕ ತರುತ್ತಿದ್ದರು” ಎಂದಿದ್ದರು.

ಸುಧಾಮೂರ್ತಿಯವರು ಮಾತು ಮುಂದುವರೆಸಿದ್ದು, “ಅದರಲ್ಲಿ ನಾರಾಯಣ ಮೂರ್ತಿ ಇಸ್ತಾನ್‌ಬುಲ್, ನಾರಾಯಣ ಮೂರ್ತಿ ಪ್ಯಾರಿಸ್, ನಾರಾಯಣ ಮೂರ್ತಿ ಪೇಶಾವರ್ ಅಂತೆಲ್ಲಾ ಬರೆದಿರುತ್ತಿತ್ತು. ಯಾರೀ ನಾರಾಯಣ ಮೂರ್ತಿ? ಬಸ್ ಕಂಡಕ್ಟರ್ ಇರಬಹುದಾ ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯಿತು.. ನಾರಾಯಣ ಮೂರ್ತಿ ಪ್ಯಾರಿಸ್‌ನಲ್ಲಿ 3 ವರ್ಷ ಇದ್ದರಂತೆ. ಅವರು ಹ್ಯಾಂಡ್ಸಮ್ ಆಗಿರಬಹುದು ಅಂತ ಅಂದುಕೊಂಡಿದ್ದೆ. ಆಮೇಲೆ ಒಂದು ದಿನ ಮೀಟ್ ಆದಾಗ ಚಿಕ್ಕ ಹುಡುಗನಂತೆ ನನಗೆ ಕಾಣಿಸಿದರು. ಮದುವೆಯಾದಾಗ ಅವರ ತೂಕ ಎಷ್ಟಿತ್ತೋ, ಈಗಲೂ ಅವರ ತೂಕ ಅಷ್ಟೇ ಇದೆ. ಯಾಕಂದ್ರೆ, ನಾನು ಚೆನ್ನಾಗಿ ಅಡುಗೆ ಮಾಡಲ್ಲ” ಎಂದಿದ್ದರು.

ಅದಲ್ಲದೇ, “ನಾವು ಆಗ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿದ್ವಿ. ನಮ್ಮ ಬಳಿ ದುಡ್ಡು ಇರಲಿಲ್ಲ. ‘ಸಾಫ್ಟ್‌ ವೇರ್ ಕಂಪನಿ ಶುರು ಮಾಡುತ್ತೇನೆ’ ಅಂತ ನಾರಾಯಣ ಮೂರ್ತಿ ಹೇಳಿದರು. ನಾವು ಮಧ್ಯಮ ವರ್ಗದ ಜನ. ನಮ್ಮ ಬಳಿ ದುಡ್ಡು ಇರಲಿಲ್ಲ. ದುಡ್ಡೆಲ್ಲಿದೆ ಅಂತ ಕೇಳಿದಾಗ ‘ಮುಂದಿನ ಮೂರು ವರ್ಷ ನಾನು ದುಡಿಯುವುದಿಲ್ಲ. ನೀನೇ ಕೆಲಸ ಮಾಡಬೇಕು, ದುಡ್ಡು ಸಂಪಾದಿಸಬೇಕು’ ಅಂತ ನನಗೆ ನಾರಾಯಣ ಮೂರ್ತಿ ಹೇಳಿದರು. ‘ಕಂಪನಿ ಶುರು ಮಾಡಲು ನೀನೇ ಹಣ ಕೊಡಬೇಕು’ ಅಂತ ನನ್ನನ್ನ ಕೇಳಿದರು. ನನ್ನ ಬಳಿ ಆಗ 10250 ರೂಪಾಯಿ ಇತ್ತು. ಪತಿಗೆ ಗೊತ್ತಿಲ್ಲದೆ ನಾನು ಅದನ್ನ ಕೂಡಿಟ್ಟಿದ್ದೆ.” ಎಂದಿದ್ದರು.

“ಅದರಲ್ಲಿ ನಾನು ಅವರಿಗೆ 10 ಸಾವಿರ ರೂಪಾಯಿ ಕೊಟ್ಟೆ. 250 ರೂಪಾಯಿಯನ್ನ ನಾನು ಎಮರ್ಜೆನ್ಸಿಗೆ ಅಂತ ಇಟ್ಟುಕೊಂಡೆ. ನಾನು ಇಂಡಿಯಾದ ಬೆಸ್ಟ್ ಇನ್ವೆಸ್ಟರ್. ಯಾಕಂದ್ರೆ, ಆಗ 10 ಸಾವಿರ ರೂಪಾಯಿ ಅಂದ್ರೆ, ನನಗೆ ಈಗ ಬಿಲಿಯನ್ಸ್ ಇದ್ದ ಹಾಗೆ. ನಾನು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ದೇವರು ನಮ್ಮನ್ನ ಚೆನ್ನಾಗಿ ಇಟ್ಟಿದ್ದಾನೆ. ನಾನು ನಾರಾಯಣ ಮೂರ್ತಿ ಅವರನ್ನ ಮದುವೆಯಾದಾಗ, ಅವರಿಗೆ ಕೆಲಸ ಇರಲಿಲ್ಲ. ‘ಏನು ಕೆಲಸ ಮಾಡುತ್ತಾರೆ ಅಂತ ಯಾರಾದರೂ ಕೇಳಿದರೆ ಏನು ಹೇಳೋದು’ ಅಂತ ಅಪ್ಪ ನನ್ನನ್ನ ಕೇಳಿದ್ದರು. ‘ಸುಧಾ ಪತಿ ಅಂತಷ್ಟೇ ಹೇಳಿ’ ಅಂತ ನಾನು ಹೇಳಿದ್ದೆ. ಇವತ್ತು ನಾವು ಚೆನ್ನಾಗಿದ್ದೇವೆ’’ಎಂದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು.

Leave a Reply

Your email address will not be published. Required fields are marked *