ಒಂದೇ ಸ್ಕೂಲ್ ನಲ್ಲಿ ಓದುತ್ತಿದ್ದವರು, ಆದರೆ ಲಿಂಗ ಬದಲಾವಣೆ ಮಾಡಿಕೊಂಡ ಸ್ನೇಹಿತೆಯನ್ನು ಪ್ರೀತಿಸು ಎಂದು ಹಿಂದೆ ಬಿದ್ದ, ಒಲ್ಲೆ ಎಂದದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?

ಪ್ರೀತಿಯು ಯಾವತ್ತಿದ್ದರೂ ಕೂಡ ಕುರುಡು. ಹೀಗಾಗಿ ಪ್ರೀತಿಯ ಬಿದ್ದವರು ಆತುರಕ್ಕೆ ಬಿದ್ದು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇಂತಹದ್ದೆ ಒಂದು ಘಟನೆಯು ಸದ್ಯಕ್ಕೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಹೌದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತನ್ನ ಬಾಲ್ಯದ ಸಹಪಾಠಿ ಆರ್ ನಂದಿನಿ (R Nandini) ಯನ್ನು ಪ್ರೀತಿಸಿದವನೇ ಭೀಕರ ರೀತಿಯಲ್ಲಿ ಸ-ಜೀವ ದ-ಹನ ಮಾಡಿದ್ದು, ಈ ಘಟನೆಯು ಕಳೆದ ಶನಿವಾರ ಚೆನ್ನೈ (Chennai) ನ ದಕ್ಷಿಣ ಹೊರವಲಯದಲ್ಲಿರುವ ತಲಂಬೂರ್‌ನಲ್ಲಿ ನಡೆದಿದೆ.

ಇವರಿಬ್ಬರು ಬಾಲ್ಯದಿಂದಲೂ ಸ್ನೇಹಿತರು. ಚಿಕ್ಕಂದಿನಿಂದಲೇ ಮಧುರೈ (Madhurai) ನ ಒಂದೇ ಬಾಲಕಿಯರ ಶಾಲೆಯಲ್ಲಿ ಓದುತ್ತಿದ್ದರು. ಹೀಗಾಗಿ ಚಿಕ್ಕವರಿಂದಲೂ ಸ್ನೇಹಿತರಾಗಿದ್ದರು. ವೆಟ್ರಿಮಾರನ್ (Vetrimaran) ಲಿಂಗ ಬದಲಾವಣೆಯನ್ನು ಮಾಡಿಕೊಂಡಿದ್ದು, ಆದಾದ ಬಳಿಕ ನಂದಿನಿ ಅವನೊಂದಿಗೆ ಸಂಬಂಧ ಹೊಂದಲು ನಿರಾಕರಿಸಿದ್ದಳು. ಇಬ್ಬರೂ ಕೂಡ ದೂರವಾಗಿದ್ದರೂ ಕೂಡ ಸಂಪರ್ಕವನ್ನು ಇಟ್ಟುಕೊಂಡಿದ್ದರು.

ಐಟಿಯಲ್ಲಿ ಬಿಎಸ್ಸಿ ಪದವಿ ಪಡೆದು ಚೆನ್ನಾಗಿ ಓದಿಕೊಂಡಿದ್ದ ನಂದಿನಿಗೆ ಎಂಟು ತಿಂಗಳ ಹಿಂದೆ ಚೆನ್ನೈನಲ್ಲಿ ಕೆಲಸ ಸಿಕ್ಕಿತ್ತು. ಕೆಲಸದ ಕಾರಣಕ್ಕೆ ಅವಳು ತನ್ನ ಚಿಕ್ಕಪ್ಪನೊಂದಿಗೆ ಇದ್ದಳು. ಹೀಗಾಗಿರುವಾಗ ಶನಿವಾರದಂದು ವೆಟ್ರಿಮಾರನ್ ಕರೆ ಮಾಡಿ ನಂದಿನಿಯನ್ನು ಭೇಟಿಯಾಗುವ ಇಚ್ಛೆಯನ್ನು ಹೊರಹಾಕಿದ್ದನು. ಫೋನ್ ಬಳಿಕ ಇಬ್ಬರೂ ಕೂಡ ಭೇಟಿ ಕೂಡ ಆಗಿದ್ದರು. ಹೊಸ ಬಟ್ಟೆಗಳನ್ನು ಖರೀದಿಸಿ, ಅದನ್ನು ಅವಳಿಗೆ ನೀಡಿ ಖುಷಿ ಪಡಿಸಿದ್ದನು.

ಅಷ್ಟೇ ಅಲ್ಲದೇ ತಾಂಬರಂ (Tambaram) ಬಳಿಯ ಅನಾಥಾಶ್ರಮಕ್ಕೆ ಕರೆದೊಯ್ದು ಅಲ್ಲಿ ದೇಣಿಗೆ ನೀಡಿ ಅನಂತರದಲ್ಲಿ ಮನೆಗೆ ಡ್ರಾಪ್ ಮಾಡಲು ಮುಂದಾದನು. ಹೀಗಿರುವಾಗ ಪೊನ್ಮಾರ್ನಲ್ಲಿ ನಿ-ರ್ಜನ ಸ್ಥಳದಲ್ಲಿ ನಿಲ್ಲಿಸಿದ್ದು, ಫೋಟೋಗಳಿಗೆ ಪೋಸ್ ನೀಡುವಂತೆ ನಂದಿನಿಯನ್ನು ಕೇಳಿದ್ದನು.

ಅಷ್ಟೇ ಅಲ್ಲದೇ ತನ್ನ ಬೈಕ್‌ನಲ್ಲಿ ಸಾಗಿಸುತ್ತಿದ್ದ ಚೈನ್‌ಗಳನ್ನು ಬಳಸಿ ಅವಳ ಕೈಕಾಲುಗಳನ್ನು ಬಂ-ಧಿಸಿ ಅದು ತಮಾಷೆಗಾಗಿ ಎಂದಿದ್ದಾನೆ. ಬಂಧಿಸಿದ್ದ ಚೈನ್ ಅನ್ನು ಬಿಡಿಸಲು ನಿರಾಕರಿಸಿದ್ದು, ಬ್ಲೇ-ಡ್‌ನಿಂದ ಆಕೆಯ ಕು-ತ್ತಿಗೆ ಮತ್ತು ತೋಳುಗಳನ್ನು ಕೊ-ಯ್ದು, ಪೆಟ್ರೋಲ್ ಸುರಿದು ಬೆಂ-ಕಿ ಹಚ್ಚಿ ಎಸ್ಕೇಪ್ ಆಗಿದ್ದನು. ಅಲ್ಲಿನ ಸ್ಥಳೀಯರು ನಂದಿನಿಯನ್ನು ಆ ಸ್ಥಿತಿಯಲ್ಲಿ ಕಂಡು ಗಾ-ಬರಿಯಾಗಿ ಪೊಲೀಸರಿಗೆ ಕರೆ ತಿಳಿಸಿದ್ದರು.

ಅದೇ ವೇಳೆಯಲ್ಲಿ ಆಕೆಯು ಕರೆಮಾಡಲು ಒಂದು ನಂಬರ್ ನೀಡಿದ್ದಳು. ಆ ನಂಬರ್ ವೆಟ್ರಿಮಾರನ್ ಎನ್ನುವವನದ್ದು ಎನ್ನಲಾಗಿದೆ. ಪೊಲೀಸರು ಕರೆ ಮಾಡಿದಾಗ ಅವನು ಸ್ಥಳಕ್ಕೆ ಬಂದು ನಂದಿನಿಯನ್ನು ಸ್ನೇಹಿತೆ ಎಂದು ಗುರುತಿಸಿದ್ದು, ಕೊನೆಗೆ ಕ್ರೋಮ್‌ಪೇಟ್‌ (Krom Pet) ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದೇ ಶನಿವಾರ ತಡರಾತ್ರಿ ಆಕೆ ಸಾ-ವನ್ನಪ್ಪಿದ್ದು, ಆದರೆ ಈ ವೆಟ್ರಿಮಾರನ್ ನಾಪತ್ತೆಯಾಗಿದ್ದರು.

ಎಂಬಿಎ ಪದವೀಧರ ವೆಟ್ರಿಮಾರನ್ ಅವನನ್ನು ಭಾನುವಾರ ತನಿಖಾಧಿಕಾರಿಗಳು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದಿನಿ ತನ್ನೊಂದಿಗೆ ಸಂಬಂಧ ಹೊಂದಲು ನಿರಾಕರಿಸಿದ್ದರಿಂದ ಬೇಸರಗೊಂಡಿದ್ದಾಗಿ ಆತನು ಬಾಯಿಬಿಟ್ಟಿದ್ದಾನೆ. ಒಟ್ಟಿನಲ್ಲಿ ತನ್ನ ಸ್ವಾರ್ಥಕ್ಕಾಗಿ ಬದುಕಿ ಬಾಳಬೇಕಿದ್ದ ಹೆಣ್ಣಿನ ಜೀವಕ್ಕೆ ಕು-ತ್ತು ತಂದದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *