ಬಿಗ್ ಬಾಸ್ ಮನೆಗೆ ಸ್ನೇಹಿತ್ ಎಂಟ್ರಿ ಕೊಡುತ್ತಿದ್ದಂತೆ ನಾಚಿ ನೀರಾದ ನಮ್ರತಾ ಗೌಡ, ಕೊನೆಗೆ ನಮ್ರತಾ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ?

ಬಿಗ್ ಬಾಸ್ ಸೀಸನ್ 10 (Bigg Boss Sisan 10) ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಈಗಾಗಲೇ ಸ್ಪರ್ಧಿಗಳ ನಡುವೆ ಸ್ಪರ್ಧೆಯೂ ಏರ್ಪಟ್ಟಿದ್ದು ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎನ್ನುವ ಪ್ರಶ್ನೆಯೊಂದಿಗೆ ಮೂಡಿದೆ. ಇನ್ನೇನು ಕೆಲವೇ ವಾರಗಳು ಇರುವಾಗಲೇ ಬಿಗ್ ಬಾಸ್ ಮನೆಯ ಹಳೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.

ಮನೆಗೆ ಬಂದ ಹಳೆಯ ಸ್ಪರ್ಧಿಗಳು ಮನೆಯಲ್ಲಿರುವ ಕೆಲವು ಸ್ಪರ್ಧಿಗಳಿಗೆ ಧೈರ್ಯ ತುಂಬಿದ್ದಾರೆ. ತಪ್ಪುಗಳನ್ನು ತಿದ್ದಿ ಹೇಳಿ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ವೇಳೆ ಸ್ನೇಹಿತ್ ಎಂಟ್ರಿ ಕೊಡುತ್ತಿದ್ದಂತೆ ನಮ್ರತಾ ಗೌಡ (Namratha Gowda) ನಾಚಿ ನೀರಾಗಿದ್ದಾರೆ. ಅಷ್ಟೇ ಅಲ್ಲದೇ ಸ್ನೇಹಿತ್ (Snehith) ಮೇಲೆ ಬೇಸರವನ್ನು ಪಟ್ಟುಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಸ್ನೇಹಿತ್ ಇದ್ದಾಗ ನಮ್ರತಾ ಹಿಂದೆ ಮುಂದೆ ಸುತ್ತುತ್ತಾ ಇದ್ದರು. ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದ ಜೋಡಿಯನ್ನು ಕಂಡು ಪ್ರೇಕ್ಷಕರು ಖುಷಿಪಟ್ಟಿಕೊಂಡಿದ್ದರು. ಸ್ನೇಹಿತ್ ಮನೆಯಿಂದ ಹೊರ ಬಂದ ಬಳಿಕ ನಮ್ರತಾ ಮನೆಯವರ ಜೊತೆಗೆ ಹೆಚ್ಚು ಕಾಲ ಬೆರೆಯುತ್ತಿದ್ದಾರೆ. ಆದರೆ ಇದೀಗ ಸ್ನೇಹಿತ್ ಬಿಗ್ ಬಾಸ್ ಮನೆಗೆ ಬಂದಿದ್ದು ನಮ್ರತಾರವರಿಗೆ ಖುಷಿಯಾಗಿದೆ.

ಸ್ನೇಹಿತ್ ಅವರು ಬ್ಲ್ಯಾಕ್ ಟೀಶರ್ಟ್ ಹಾಗೂ ಬ್ಲ್ಯಾಕ್ ಫೇಸ್​ಮಾಸ್ಕ್ ಧರಿಸಿಕೊಂಡು ಕುಳಿತಿದ್ದು, ಅವರು ಕಣ್ಣುಗಳು ಮಾತ್ರ ಕಾಣುವಂತೆ ಸಂಪೂರ್ಣವಾಗಿ ತಮ್ಮ ಮುಖವನ್ನು ಕವರ್ ಮಾಡಲಾಗಿತ್ತು. ಸಡನ್ನಾಗಿ ಕವರ್ ತೆಗೆದು ಎಲ್ಲರಿಗೂ ಸರ್ಪೈಸ್ ಕೊಟ್ಟ ಪ್ರೊಮೊವೊಂದು ವೈರಲ್ ಆಗಿವೆ. ಅದಲ್ಲದೇ ಮುಖದ ಕವರ್ ತೆಗೆದು ಮನೆಯ ಸದಸ್ಯರಿಗೆ ವಿಶ್ ಮಾಡಿದ್ದು ಆದರೆ ನಮ್ರತಾರವರಿಗೆ ಮಾತ್ರ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

ನಮ್ರತಾ ಗೌಡ ಅವರಿಗೆ ಸ್ವಲ್ಪ ವಿಶೇಷವಾಗಿ ಲವ್ಲೀ ಆಗಿ ನಮಸ್ಕಾರ ಎಂದಿದ್ದಾರೆ. ಈ ವೇಳೆಯಲ್ಲಿ ನಮ್ರತಾ ಗೌಡ ಕೂಡ ನಾಚಿ ನೀರಾಗಿದ್ದು ಮುಖದಲ್ಲಿ ನಾಚಿಕೆಯೆನ್ನುವುದು ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲದೇ ಇದೇ ವೇಳೆಯಲ್ಲಿ ನಮ್ರತಾ ಸ್ನೇಹಿತ್ ಮೇಲೆ ಬೇಸರಗೊಂಡಿದ್ದಾರೆ.ಸ್ನೇಹಿತ್ ಅವರು ಬಿಗ್ ಬಾಸ್ ಶೋನಲ್ಲಿ ಯಾರೂ ಗೆಲ್ಲಬೇಕು ಎಂದು ಕೇಳಿದರೆ ನನ್ನ ಆಯ್ಕೆ ವಿನಯ್ ಎಂದಿದ್ದಾರೆ.

ಅಷ್ಟೇ ಅಲ್ಲದೇ ಸ್ನೇಹಿತ್ ನಮ್ರತಾ ಬಗ್ಗೆ ಮಾತನಾಡಿದ್ದು, ಇತ್ತೀಚಿಗೆ ನಮ್ರತಾ‌ ಡಿಮೋಟಿವ್ ಆಗಿದ್ದಾರೆ ಅವರು ಗೆದ್ದರೆ ನನ್ನಷ್ಟು ಖುಷಿಪಡುವವನು ಯಾರು ಇಲ್ಲ ಎನ್ನುತ್ತಿದ್ದಂತೆ, ನಮ್ರತಾ ಎಷ್ಟು ಜನರನ್ನ ಗೆಲ್ಲಿಸುತ್ತೀರಾ ಸ್ನೇಹಿತ್ ಎಂದು ಪ್ರಶ್ನಿಸಿದ್ದಾರೆ.

ಸ್ನೇಹಿತ್ ಮಾತು ಕೇಳಿ ನಮ್ರತಾ ಅತ್ತಿದ್ದು, ನನ್ನ ಜೊತೆಗೆ ಸ್ನೇಹದಿಂದ ಇದ್ದಿದ್ದು ಎಲ್ಲವೂ ಕೂಡ ಫೇಕ್. ವಿನಯ್ ಗೆಲ್ಲಬೇಕು ಎಂದರೆ ನಾನೇನು ಮಾಡಿದ್ದೆ ಇಲ್ಲಿ ಬಂದು ಅಟೆಂಶನ್ ಕ್ರಿಯೇಟ್ ಮಾಡಿಕೊಳ್ಳುತ್ತಾ ಇದ್ದಾರಾ ಎಂದು ನಮ್ರತಾ‌ ಸ್ನೇಹಿತ್ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ಸ್ನೇಹಿತ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ನಮ್ರತಾ ಮೊಗದಲ್ಲಿ ಖುಷಿ ಇತ್ತದಾದರೂ ಆ ಬಳಿಕ ಸ್ನೇಹಿತ್ ಮಾತು ಕೇಳಿ ಬೇಸರವಾಗಿರುವುದು ಪಕ್ಕಾ ಆಗಿದೆ.

Leave a Reply

Your email address will not be published. Required fields are marked *