ಬೆಡ್ ರೂಮ್ ವಿಡಿಯೋ ಶೇರ್ ಮಾಡಿಕೊಂಡ ನಾಗಿಣಿ ಖ್ಯಾತಿಯ ನಮ್ರತಾ ಗೌಡ, ವಿಡಿಯೋ ನೋಡಿ ಬೆರಗಾದ ಕನ್ನಡ ಜನತೆ!!

ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ನಟಿ ನಮ್ರತಾ ಗೌಡ (Namrutha Gowda) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಹೌದು, ರಿಯಾಲಿಟಿ ಶೋ ಹಾಗೂ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ನಮೃತಾ ನಾಗಿಣಿ ಪಾರ್ಟ್ 2 (Namrutha Nagini Part 2) ನಲ್ಲಿ ಅಭಿನಯಿಸಿ ಪ್ರೇಕ್ಷಕ ವರ್ಗಕ್ಕೆ ಚಿರಪರಿಚಿತವಾದ ಮುಖ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಮ್ರತಾ ಗೌಡರವರು ಯೂ ಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ನಟಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಇತ್ತೀಚೆಗಷ್ಟೇ ಸ್ವಂತ ಹಣದಿಂದ ಖರೀದಿ ಮಾಡಿರುವ ಮನೆಯ ಟೂರ್ ಮಾಡಿದ್ದಾರೆ. ಯೂ ಟ್ಯೂಬ್ ಚಾನೆಲ್ (Youtube Chanel) ನಲ್ಲಿ ಶೇರ್ ಮಾಡಿಕೊಂಡಿರುವ ಎರಡು ಭಾಗಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಎರಡನೇ ಭಾಗದಲ್ಲಿ ತಮ್ಮ ಬೆಡ್‌ರೂಮ್ ತೋರಿಸಿದ್ದು ಫ್ಯಾನ್ಸ್ ಖುಷಿಯಾಗಿದ್ದಾರೆ.

ಹೊಸ ಮನೆಯಲ್ಲಿ ಒಂದು ಹಾಲ್, ಒಂದು ಅಡುಗೆ ಮನೆ, ಒಂದು ದೇವರ ಮನೆ, ಒಂದು ಬೆಡ್‌ರೂಮ್, ಒಂದು ಬಾತ್‌ರೂಮ್‌ ಹಾಗೂ ಒಂದು ಯುಟಿಲಿಟಿ ರೂಮ್‌ ಇರುವುದನ್ನು ಕಾಣಬಹುದು. ನಟಿ ನಮ್ರತಾ ಗೌಡ (Actress Namratha Gowda) ರವರ ಬೆಡ್‌ರೂಮ್‌ (Bed Room) ಕೂಡ ತುಂಬಾ ಅಚ್ಚುಕಟ್ಟಾಗಿದೆ. ಹೌದು, ಡಬಲ್ ಬೆಸ್ ಹಾಸಿಗೆ ಹಾಕಿ ಅದರ ಮೇಲೆ ಸ್ಟಾರ್ ಫಿಶ್ ಬೊಂಬೆ ಇದೆ.

ಈ ಹಾಸಿಗೆ ಮತ್ತು ಬೆಡ್‌ನ ಕಸ್ಟಮ್‌ ಡಿಸೈನ್ ಮಾಡಿಸಿರುವುದು ಆದರೆ ಒಂದು ದಿನವೂ ಬಳಸಿಕೊಳ್ಳಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ತಮ್ಮ ಮೇಕಪ್‌ಗಳನ್ನು ಇಡಲು ಒಂದು ಬಾಕ್ಸ್ ಮಾಡಿಸಿದ್ದಾರೆ. ಅದಲ್ಲದೇ, ಮನೆಯಲ್ಲಿರುವ ಒಂದು ಕಬೋರ್ಡ್‌ನಲ್ಲಿ ಡಿಸೈನ್ ಮಾಡಿರುವ ಬಟ್ಟೆಗಳನ್ನು ಜೋಡಿಸಿ ಇಟ್ಟಿದ್ದಾರೆ.

ನಟಿ ನಮ್ರತಾ ಆಕಾಶ ದೀಪ (Akasha Deepa) ಧಾರವಾಹಿ ಮೂಲಕ ನಟನಾ ಬದುಕಿಗೆ ಎಂಟ್ರಿ ಕೊಟ್ಟರು. ಕಿರುತೆರೆಯಲ್ಲಿ ಪುಟ್ಟ ಗೌರಿ ಮದುವೆ (Putagowri Maduve) ಧಾರವಾಹಿಯಲ್ಲಿ ಹಿಮಾ (Hima) ಪಾತ್ರದಲ್ಲಿ ಮಿಂಚಿದರು. ಕನ್ನಡ ಕಿರುತೆರೆ ಲೋಕದಲ್ಲಿ ನಟಿಗೆ ಸಾಲು ಸಾಲು ಅವಕಾಶಗಳು ಬಂದವು. ಜೀ ಕನ್ನಡದ ನಾಗಿಣಿ ಭಾಗ 2 ಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ನಟಿ ನಮ್ರತಾ ಗೌಡರಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ. 

Leave a Reply

Your email address will not be published. Required fields are marked *