ಮೈಸೂರು ರಾಜಮನೆತನದ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗಳ ಮುದ್ದಾದ ಫೋಟೋ ವೈರಲ್, ಈ ಜೋಡಿ ಹೇಗಿದೆ ಗೊತ್ತಾ?

ರಾಜಮನೆತನದಲ್ಲಿ ಹುಟ್ಟಿ ಬೆಳೆದವರು ಎಂದ ಮೇಲೆ ಅವರಿಗೆ ಅವರದ್ದೇ ಪದ್ಧತಿ ರೀತಿ ರಿವಾಜುಗಳಿರುತ್ತವೆ. ಈ ವಿಚಾರದಲ್ಲಿ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishna Datta Chamaraja Wodeyar) ಹಾಗೂ ಯುವರಾಣಿ ತ್ರಿಷಿಕಾಕುಮಾರಿ (Yuvarani Trishika Kumari) ಕೂಡ ಹೊರತಾಗಿಲ್ಲ. ಇದೀಗ ಈ ದಂಪತಿಗಳ ಅಪರೂಪದ ಫೋಟೋವೊಂದು ವೈರಲ್ ಆಗಿವೆ. ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಯುವರಾಣಿ ತ್ರಿಷಿಕಾಕುಮಾರಿಯವರ ಸುಂದರ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹರಿದು ಬಂದಿವೆ.

ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ 2017 ರ ಡಿಸೆಂಬರ್ 6 ರಂದು ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆ ( Banglore Private Hospital) ಯಲ್ಲಿ ತ್ರಿಷಿಕಾ ಕುಮಾರಿ ಅವರಿಗೆ ಹೆರಿಗೆಯಾಗಿದ್ದು, ಮೈಸೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಗಮನವಾಗಿದ್ದ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲರ ಖುಷಿಯನ್ನು ದುಪ್ಪಟ್ಟು ಮಾಡಿತ್ತು.

ಅದಲ್ಲದೇ ದಂಪತಿಯ ಪುತ್ರನ ನಾಮಕರಣ ಕಾರ್ಯ 2018 ರಲ್ಲಿ ಅರಮನೆ ಮೈದಾನದಲ್ಲಿ ನೆರವೇರಿತ್ತು.ಮೈಸೂರ ಸಂಸ್ಥಾನದ ಕುಡಿಗೆ ಆದ್ಯ ವೀರ್ ನರಸಿಂಹರಾಜ ಒಡೆಯರ್ (Adya Veer Narasimharaja Wodeyar) ಎಂದು ನಾಮಕರಣ ಮಾಡಲಾಗಿತ್ತು. ನಾಮಕರಣ ಕಾರ್ಯಕ್ಕೆ ಎರಡೂ ಕುಟುಂಬಗಳ ಸೀಮಿತ ವ್ಯಕ್ತಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ರಾಜಮಾತೆ ಪ್ರಮೋದಾದೇವಿ ಒಡೆಯರ್​ (Rajamathe Pramodadevi Wodeyar) ಸಮ್ಮುಖದಲ್ಲೇ ಈ ಶುಭ ಕಾರ್ಯ ನಡೆದಿತ್ತು.

ಇನ್ನು, 2015 ರಲ್ಲಿ ರಾಜಮಾತೆ ಪ್ರಮೋದಾ ದೇವಿ ಅವರು ಯದುವೀರ್ ಅವರನ್ನು ದತ್ತು ಸ್ವೀಕರಿಸಿ ಮೈಸೂರು ಸಂಸ್ಥಾನದ ರಾಜವಂಶದ ಉತ್ತರಾಧಿಕಾರಿ ಮಾಡಿದ್ದರು. 2016 ರ ಜೂನ್ 27 ರಂದು ಯದುವೀರ್ ರಾಜಸ್ಥಾನ ರಾಜ ಕುಟುಂಬದ ತ್ರಿಷಿಕಾ ಕುಮಾರಿ ಅವರರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ ಹಾಗೂ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ರಾಜಮನೆತನದ ಗೌರವಕ್ಕೆ ಚ್ಯುತಿ ಬಾರದಂತೆ ಸಾಮಾನ್ಯರಂತೆಯೇ ಬದುಕುತ್ತಿದ್ದಾರೆ.

ಮೈಸೂರಿನ ರಾಣಿ ತ್ರಿಶಿಕಾ ಕುಮಾರಿಯವರು ಹುಟ್ಟಿ ಬೆಳೆದಿದ್ದೆಲ್ಲಾ ರಾಜಸ್ಥಾನದ ದುಂಗರ್‌ಪುರ್ (Rajastan dungarpur) ಅರಮನೆಯಲ್ಲಿ. ಹೀಗಾಗಿ ತ್ರಿಶಿಕಾರವರಿಗೆ ಅರಮನೆಗೆ ಪದ್ದತಿ, ರೀತಿ ರಿವಾಜುಗಳ ಬಗೆಗೆ ಮಾಹಿತಿಯಿದೆ. ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿಯವರಿಗೆ ಬಾಲ್ಯದಿಂದಲೂ ಬಾಸ್ಕೆಟ್‌ಬಾಲ್ ಮತ್ತು ಟೆನ್ನಿಸ್ ಆಡುವುದು ಎಂದರೆ ಇಷ್ಟ. ಇನ್ನು, ಭರತನಾಟ್ಯ ಮತ್ತು ಹೊಸಬಗೆಯ ಜಾಝ್ ಡ್ಯಾನ್ಸ್ ಕೂಡ ಬಲ್ಲವರಾಗಿದ್ದಾರೆ. ಮೈಸೂರು ಅರಮನೆಯ ಸೊಸೆಯು ತ್ರಿಶಿಕಾ ಕುಮಾರಿಯವರು ಒನ್ ಲೈನ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *