ಪ್ರೀತಿಸಿದ ಯುವಕ ಬೇರೆ ಯುವತಿಯ ಜೊತೆಗೆ ಸ್ನೇಹ ಬೆಳೆಸಿಕೊಂಡ, ಮಾನಸಿಕವಾಗಿ ನೊಂ-ದಿದ್ದ ನಿಸರ್ಗಾ ಮಾಡಿಕೊಂಡ ಎಡವಟ್ಟು ಏನು ಗೊತ್ತಾ? ಕೇಳಿದ್ರೆ ಅಯ್ಯೋ ಎನ್ನುತ್ತೀರಾ

ಪ್ರೀತಿಯೆನ್ನುವುದು ಮಾಯೆ, ಪ್ರೀತಿಯಲ್ಲಿ ಬಿದ್ದರೆ ಅದರಿಂದ ಹೊರಬರುವುದು ಕಷ್ಟ. ಆದರೆ ಕೆಲವೊಮ್ಮೆ ಈ ಪ್ರೀತಿ ಎನ್ನುವ ಮಾಯೆಯು ನಾನಾ ಅನಾಹುತಗಳಿಗೆ ದಾರಿ ಮಾಡಿಕೊಡಬಹುದು. ಕೆಲವೊಮ್ಮೆ ಈ ಪ್ರೀತಿಯು ಮದುವೆಗೆ ತಿರುಗಿ ಸುಖ ದಾಂಪತ್ಯಕ್ಕೆ ಸಾಕ್ಷಿಯಾದರೆ, ಇನ್ನು ಕೆಲವು ಪ್ರೀತಿ ಜೀವ ಕಳೆದುಕೊಂಡು ದು-ರಂತ ಅಂತ್ಯ ವನ್ನು ಕಾಣುತ್ತದೆ. ಇದೀಗ ಇಂತಹದ್ದೇ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಪ್ರೀತಿಯಲ್ಲಿ ಹುಡುಗ ಹುಡುಗಿಯು ಕೈಕೊಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಪ್ರೀತಿಸಿದ ಹುಡುಗ ಕೈಕೊಟ್ಟ ಎಂದು ನೋವಿನಲ್ಲಿ ಯುವತಿಯೊಬ್ಬಳು ಡೆ-ತ್​ ನೋಟ್​​ ಬರೆದಿಟ್ಟು ಜೀವ ಕಳೆದುಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮೈಸೂರಿ (Mysore) ನ ಕೆ. ಆರ್ ನಗರ (KR Nagara) ತಾಲೂಕಿನ ಗೌಡನಹಳ್ಳಿ (Gowdana Halli) ಯಲ್ಲಿ ಎನ್ನಲಾಗಿದೆ. ನಿಸರ್ಗಾ ಯುವತಿಯು ಪ್ರೀತಿಸಿದ ಹುಡುಗ ಕೈ ಕೊಟ್ಟದ್ದಕ್ಕೆ ಈ ರೀತಿಯಾಗಿ ಜೀವ ಕಳೆದುಕೊಂಡ ಯುವತಿ.

ನಿಸರ್ಗಾ (Nisarga) ಕೆ.ಆರ್ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ (Bcom) ಪದವಿ ವ್ಯಾಸಂಗ ಮಾಡುತ್ತಿದ್ದಳು. ಓದುತ್ತಿದ್ದ ವೇಳೆಯಲ್ಲಿ ನಿಸರ್ಗಾಳಿಗೆ ಸುಹಾಸ್ ರೆಡ್ಡಿ (Suhas Reddy) ಎಂಬ ಯುವಕನ ಪರಿಚಯವಾಗಿದೆ. ಕೊನೆಗೆ ಈ ಪರಿಚಯವು ಸ್ನೇಹಕ್ಕೆ ತಿರುಗಿದ್ದು, ಸ್ನೇಹವು ಪ್ರೀತಿಯಾಗಿ ಬದಲಾಗಿದೆ. ನಿಸರ್ಗಾ ಹಾಗೂ ಸುಹಾಸ್ ಒಬ್ಬರನ್ನೊಬ್ಬರೂ ಪ್ರೀತಿಸುತ್ತಿದ್ದರು. ಹೀಗಿರುವಾಗ ಇತ್ತೀಚಿಗೆ ಕೆಲದಿನಗಳಿಂದ ಪ್ರಿಯತಮ ಸುಹಾಸ್ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ. ಆ ಬಳಿಕ ಸುಹಾಸ್ ಬೇರೊಬ್ಬ ಯುವತಿಯೊಂದಿಗೆ ಸ್ನೇಹ ಬೆಳಸಿದ್ದಾನೆ ಎಂದು ನಿಸರ್ಗಳಿಗೆ ತಿಳಿದಿದೆ.

ತನ್ನ ಪ್ರಿಯಕರ ಬೇರೊಬ್ಬ ಯುವತಿಯ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದಾನೆ ಎಂದು ಮಾನಸಿಕವಾಗಿ ಖಿ-ನ್ನತೆ (Depression) ಗೊಳಗಾಗಿದ್ದಳು. ನಿಸರ್ಗಾ ಸುಹಾಸ್​ಗೆ ಇತ್ತೀಚಿಗೆ ಪರಿಚಯವಾಗಿದ್ದ ಮತ್ತೊಬ್ಬ ಯುವತಿಯ ಪೋಷಕರಿಗೂ ಈ ವಿಚಾರವನ್ನು ತಿಳಿಸಿದ್ದಾಳೆ. ಅವನು ತನ್ನನ್ನು ಪ್ರೀತಿಸುತ್ತಿದ್ದು, ನೀವು ನಿಮ್ಮ ಮಗಳ ಪ್ರೀತಿಗೆ ಸಪೋರ್ಟ್‌ ಮಾಡಬೇಡಿ ಎಂದು ಗಲಾಟೆ ಕೂಡ ಮಾಡಿದ್ದು, ಈ ವೇಳೆ ಇನ್ನೊಬ್ಬ ಯುವತಿಯ ಪೋಷಕರು ನಿಸರ್ಗಳಿಗೆ ಕೆ-ಟ್ಟದಾಗಿ ನಿಂ-ದಿಸಿ ಸಾ-ಯುವಂತೆ ಪ್ರೇರಣೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಜೀವ ಕಳೆದುಕೊಳ್ಳುವ ಮುನ್ನವೇ ಮುನ್ನ ನಿಸರ್ಗ ಡೆ-ತ್ ನೋಟ್ ಬರೆದಿಟ್ಟಿದ್ದು, ಸುಹಾಸ್ ತಂದೆ ತಾಯಿಗೆ ವಿಚಾರ ಹೇಳಿದರೂ ಸ್ಪಂದಿಸಲಿಲ್ಲ. ಅ-ವಮಾನಿಸದರೆಂದು ತಿಳಿಸಿದ್ದಾಳೆ. ಸಾ-ವಿಗೂ ಮುನ್ನ ಕೈ ಕೊಯ್ದುಕೊಂಡು ರೀಲ್ಸ್ ಮಾಡಿರುವ ಯುವತಿ, ನನ್ನ ಸಾ-ವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಗೋಪಾಲಕೃಷ್ಣ ಕಾರಣ, ಅವರನ್ನು ಸುಮ್ಮನೆ ಬಿಡಬೇಡಿ. ಅಪ್ಪ, ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದುಕೊಂಡಿದ್ದಾಳೆ.

ಮಾನಸಿಕವಾಗಿ ನೊಂದಿದ್ದ ಯುವತಿ ನಿಸರ್ಗಾ ಇಲಿ ಪಾ-ಷಾಣ ಸೇ-ವಿಸಿ ಜೀವ ಕಳೆದುಕೊಂಡಿದ್ದಾಳೆ. ಆ ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಇತ್ತ ಆ-ರೋಪಿ ಸುಹಾಸ್​​ ಪ-ರಾರಿಯಾಗಿದ್ದು ಆರೋಪಿಗಾಗಿ , ಪೊಲೀಸರು ಶೋಧ ನಡೆಸಿದ್ದಾರೆ. ಕೆ ಆರ್ ನಗರ ಪೊಲೀಸ್ ಠಾಣೆ KR Nagara Police Station) ಯಲ್ಲಿ ಸುಹಾಸ್, ಆತನಿಗೆ ಪರಿಚಯವಾದ ಯುವತಿ ಪೋಷಕರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *