ಪ್ರೀತ್ಸೇ ಪ್ರೀತ್ಸೇ ಎಂದು ಯುವತಿಯ ಹಿಂದೆ ಬಿದ್ದಿದ್ದ ವಿವಾಹಿತ ಯುವಕ, ಇವನ ಕಾಟ ತಾಳಲಾರದೆ ಯುವತಿ ಏನು ಮಾಡಿದ್ದಾಳೆ ನೋಡಿ!!

ಪ್ರೀತಿ (Love) ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಸಿನಿಮಾ ಹಾಡು ಇಂದಿನ ಜನರೇಷನ್ ಅವರಿಗಾಗಿ ಬರೆದಂತಿದೆ. ಹೌದು ಈ ಪ್ರೀತಿ ಮಾಯೆ, ಈ ಪ್ರೀತಿಯಲ್ಲಿ ಬಿದ್ದು ಕಣ್ಣೀರಲ್ಲಿ ಕೈ ತೊಳೆಯುವವರೇ ಹೆಚ್ಚು ಎನ್ನಬಹುದು. ಅದಲ್ಲದೇ ಈ ಪ್ರೀತಿ ಕೂಡ ದು-ರಂತಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಪ್ರೀತಿಯಿಂದ ಈಗಾಗಲೇ ಸಾಕಷ್ಟು ಕೆ-ಟ್ಟ ಘಟನೆಗಳು ನಡೆದಿದೆ. ಹೀಗಾಗಿ ಹೆತ್ತವರು ಮಕ್ಕಳು ಪ್ರೀತಿ ಪ್ರೇಮ ಎಂದು ಸುತ್ತಿದ್ದರೆ ಭ-ಯ ಪಡುವುದು. ಇದೀಗ ಮದುವೆಯಾಗಿದ್ದ ಪುರುಷನೊಬ್ಬನು ಯುವತಿಯ ಹಿಂದೆ ಪ್ರೀತಿ ಹೆಸರಿನಲ್ಲಿ ಹಿಂದೆ ಬಿದ್ದಿದ್ದು, ಊ-ಹೆ ಮಾಡದ ಘಟನೆಯೊಂದು ನಡೆದಿದೆ.

ಆತನಿಗೆ ಮದುವೆಯಾಗಿ ಒಂದು ಮಗು ಇತ್ತು (married person). ಆದ್ರೂ ಕಿರಾತಕನಿಗೆ ಮತ್ತೊಂದು ಪ್ರೀತಿ ಹುಟ್ಟಿಕೊಂಡಿತ್ತು. ಹೀಗಾಗಿ ಹೀಗಾಗಿ ನಾಲ್ಕು ವರ್ಷಗಳಿಂದ ಒಂದು ಯುವತಿಯನ್ನು ಪ್ರೀತಿ ಮಾಡು ಎಂದು ಪೀಡಿಸುತ್ತಿದ್ದ. ಈತನ ಹುಚ್ಚು ಪ್ರೀತಿಗೆ ಈ ಯುವತಿಯೂ ಕೆ-ಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಹಾಗಾದ್ರೆ ಈ ಘಟನೆಯಿಂದಿನ ಅಸಲಿ ಕಥೆಯನ್ನು ನೀವಿಲ್ಲಿ ನೋಡಬಹುದು.

ಪ್ರೀತಿಸುವ ಎಂದು ಪೀಡಿಸುತ್ತಿದ್ದ ಈ ಭೂಪ ಆಕೆಯ ಮದುವೆಯನ್ನೂ ಮುರಿದಿದ್ದನು. ಪ್ರೀತಿಸು ಇಲ್ಲವಾದರೆ ಸಾ-ಯಿ ಎಂದಿದ್ದಾನೆ. ಕೊನೆಗೆ ಈ ಯುವತಿಯೂ ಜೀವವನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದಾಳೆ. ಆ ಕ್ಷಣವೇ ಈ ಯುವಕನು ಪರಾರಿಯಾಗಿದ್ದಾನೆ. ಇತ್ತ ಮಗಳನ್ನು ಕಳೆದುಕೊಂಡ ತಂದೆ ತಾಯಿಯೂ ಆಕ್ರಂದನವು ಹೇಳತೀರದಾಗಿದೆ. ಈ ಯುವತಿಯ ತಂದೆ, ‘ನಾನು ಆಟೋ ಓಡುಸ್ತಿದ್ರೂ ಆಫೀಸರ್ ಮಗಳಂಗೆ ಸಾಕಿದ್ವೀ ಸರ್… ಅನ್ಯಾಯ ಮಾಡಿಬಿಟ್ಟ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಈ ತಂದೆಯ ಮಾತು ಕೇಳಿದ್ರೆ ಎಂತಹವರಿಗಾದರು ಕರುಳು ಹಿಂಡುತ್ತದೆ.

ಇತ್ತ ಈ ಯುವತಿಯ ತಾಯಿ ಶೋಭಾ (Shobha) ಕೂಡ ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಇಂತಹದೊಂದು ಘಟನೆಗೆ ಮೈಸೂರಿ (Mysore) ನ ಗಣಗರ ಹುಂಡಿ (Ganagara Hundi) ಸಾಕ್ಷಿಯಾಗಿದೆ. ಹರ್ಷಿತಾ ಎಂಬ ಯುವತಿ ವಿ-ಷದ ಮಾ-ತ್ರೆ ಸೇವಿಸಿ ಜೀವ ಕಳೆದುಕೊಂಡಿದ್ದಾಳೆ. ಗಣಗರಹುಂಡಿ ಗ್ರಾಮದ ವೇಣುಗೋಪಾಲ್-ಶೋಭಾ ( Venugopal And Shobha) ದಂಪತಿ ಮಗಳಾದ 21 ವರ್ಷದ ಹರ್ಷಿತಾಳಿಗೆ ಇದೇ ಗ್ರಾಮದಲ್ಲಿ ಪ್ಲಂಬರಿಂಗ್ ಅಂಗಡಿ ನಡೆಸುತ್ತಿದ್ದ 26 ವರ್ಷದ ಶಿವು (Shivu) ಎಂಬುವವನು ಪ್ರೀತಿಯ ಹೆಸರಿನಲ್ಲಿ ಆಕೆಯ ಹಿಂದೆ ಬಿದ್ದಿದ್ದನು.

ಕೆಲವು ವರ್ಷಗಳ ಹಿಂದೆಯೇ ಕಾಲೇಜು ಓದಲು ಮೈಸೂರಿಗೆ ಹೋಗುತ್ತಿದ್ದ ಹರ್ಷಿತಾ ಅಲಿಯಾಸ್ ರಾಣಿ (Harshita Aliyas Rani) ಯನ್ನು ನಾಲ್ಕು ವರ್ಷಗಳ ಹಿಂದೆಯೇ ಪ್ರೀತಿಯ ಬ-ಲೆಗೆ ಬೀಳಿಸಿದ್ದ. ಕೊನೆಗೆ ಶಿವುಗೆ ರಾಣಿಯ ಮನೆಯವರು ಎ-ಚ್ಚರಿಕೆ ನೀಡಿದ್ದರು. ಆದರೆ ಕೊನೆಗೂ ರಾಣಿಯ ಬೆನ್ನು ಬಿಡದಿದ್ದನ್ನು ಕಂಡು ಬೇರೆ ಹುಡುಗನ ಜೊತೆ ಮದುವೆ ಮಾಡಲು ಮುಂದಾದರು. ಕೊನೆಗೆ ಆ ಮದುವೆಯನ್ನು ಶಿವು ಮುರಿದಿದ್ದನು. ಅಷ್ಟೇ ಅಲ್ಲದೇ ಇಬ್ಬರೂ ಒಟ್ಟಿಗೆ ಸಾ-ಯೋಣ ಅಂತ ಹೇಳಿ ಆಕೆಯ ತಲೆ ಕೆಡಿಸಿದ್ದಾನಂತೆ.

ಹೀಗಿರುವಾಗ ಜುಲೈ 1(July 1) ಶನಿವಾರದಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಬಂದಿದ್ದಳು ಹರ್ಷಿತಾ ಅಲಿಯಾಸ್ ರಾಣಿ. ಮಾತ್ರೆ ಸೇವಿಸಿ ಅ-ಸ್ವಸ್ಥಳಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡರೂ ಮಗಳು ಉಳಿಯಲಿಲ್ಲ. ಇತ್ತ ಮಗಳ ಫೋಟೋ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೈಸೂರಿನ ಇಲವಾಲ (Mysore Ilavala) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ-ರೋಪಿ ಶಿವು ಓಡಿ ಹೋಗಿದ್ದಾನೆ. ಸದ್ಯಕ್ಕೆ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದೇನೇ ಇರಲಿ, ತಂದೆತಾಯಿ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಪ್ರೀತಿಯ ಹಿಂದೆ ಬಿದ್ದು ಹರ್ಷಿತಾಳು ಜೀವವನ್ನು ತೆಗೆದುಕೊಂಡದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *