ರಾಮ್ ಚರಣ್-ಉಪಾಸನಾ ಮುದ್ದಿನ ಮಗಳಿಗೆ ದುಬಾರಿ ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟ ಮುಕೇಶ್ ಅಂಬಾನಿ!! ಬೆಲೆ ಕೇಳಿದರೆ ತಲೆ ಹತ್ತು ಬಾರಿ ತಿರುಗುತ್ತೆ!!

ಟಾಲಿವುಡ್ ನ ಮೆಗಾ ಕುಟುಂಬಕ್ಕೆ ಮುದ್ದು ಕಂದನ ಆಗಮನವಾಗಿದೆ. ಸೂಪರ್​ಸ್ಟಾರ್​ ರಾಮ್​ಚರಣ್​ (Ramcharan) ಅವರ ಪತ್ನಿ ಉಪಾಸನಾ (Upasana) ಅವರು ಜೂನ್​ 20ರ ಬೆಳಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮುದ್ದು ಲಕ್ಷ್ಮಿ ಮನೆಗೆ ಬಂದ ಸಂಭ್ರಮ ಮನೆಯಲ್ಲಿ ಮನೆ ಮಾಡಿದೆ. ಹೀಗಿರುವಾಗ ಜೂನ್ 30 ರಂದು (ನಿನ್ನೆ) ಮೆಗಾ ಕುಟುಂಬದಲ್ಲಿ ನಾಮಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ರಾಮ್​ಚರಣ್​ ಅವರ ಮುದ್ದಿನ ಮಗಳಿಗೆ ಮುಕೇಶ್​ ಅಂಬಾನಿ (Mukesh Ambani) ಅವರು ದುಬಾರಿ ಬೆಳೆಯ ಉಡುಗೊರೆಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ.ಇತ್ತ ರಾಮ್​ಚರಣ್​ ದಂಪತಿಗೆ ಮುಕೇಶ್​ ಅಂಬಾನಿ ಅವರು ದುಬಾರಿ ಉಡುಗೊರೆ ನೀಡಿದ್ದು, ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಚಿನ್ನದ ತೊಟ್ಟಿಲಿನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿಯಾಗಿದ್ದು ಈ ಉಡುಗೊರೆಯ ಸುದ್ದಿಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಮುಖೇಶ್ ಅಂಬಾನಿ ನೀಡಿರುವ ಆ ಚಿನ್ನದ ತೊಟ್ಟಿಲಿನ ಬೆಲೆ 1 ಕೋಟಿ ರೂಪಾಯಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟಾಲಿವುಡ್​ ಸ್ಟಾರ್​ ನಟ ರಾಮ್​ ಚರಣ್​ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಮುಖೇಶ್ ಅಂಬಾನಿ ನೀಡಿರುವ ಆ ಚಿನ್ನದ ತೊಟ್ಟಿಲಿನ ಬೆಲೆ 1 ಕೋಟಿ ರೂಪಾಯಿ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮುದ್ದಾದ ಹೆಣ್ಣು ಮಗುವಿಗೆ ‘ಕ್ಲಿಂಕಾರ ಕೊನಿಡೆಲಾ’ (Clinkara Konidela) ಎಂದು ಹೆಸರಿಡಲಾಗಿದೆ. ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. ಕ್ಲಿನ್ ಕಾರ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ ಎಂದು ರಾಮ್ ಚರಣ್ ಕುಟುಂಬದವರು ತಿಳಿಸಿದ್ದಾರೆ. ರಾಮ್ ಚರಣ್ ಅವರ ಮಗಳ ನಾಮಕರಣ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಕಳೆದ ಜೂನ್ 23 ರಂದು ರಾಮ್ ಚರಣ್ ಹಾಗೂ ಉಪಾಸನಾ ತಮ್ಮ ಮುದ್ದಾದ ಮಗುವಿನೊಟ್ಟಿಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು.

ಈ ವೇಳೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ನಟ ರಾಮ್ ಚರಣ್, “ನನಗೆ ಸಂಪ್ರದಾಯಗಳ ಬಗ್ಗೆ ಹೆಚ್ಚು ಗೊತ್ತಿಲ್ಲ ಮಗುವಿಗೆ ಹೆಸರನ್ನು 12 ಅಥವಾ 13ನೇ ದಿನವು ಇಡುತ್ತಾರೆ. ಆ ದಿನ ನಾನೇ ಎಲ್ಲರಿಗೂ ನಾನೇ ಹೇಳುತ್ತೇನೆ. ಈಗಾಗಲೇ ನಾನು ಹಾಗೂ ಉಪಾಸನಾ ಹೆಸರುಗಳ ಬಗ್ಗೆ ಯೋಚನೆ ಮಾಡಿದ್ದೇವೆ. ಆದರೆ ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮ ನಡೆದಾಗ ಹೆಸರು ಇಡುತ್ತೇವೆ. ಅಂದು ನಾನೇ ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ” ಎಂದಿದ್ದರು.

ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡಾಗ ಆದ ಅನುಭವದ ಬಗ್ಗೆ ಮಾತನಾಡಿದ್ದ ರಾಮ್ ಚರಣ್, ”ಅದೊಂದು ವಿಶೇಷ ಅನುಭವ. ಎಲ್ಲ ತಂದೆಯರಿಗೂ ಆಗುವಂಥಹದ್ದೇ, ನಾನು ಅದನ್ನು ವಿವರಿಸಲು ಹೋದರೆ ಸಿನಿಮೀಯ ಎನಿಸುತ್ತದೆ, ಸ್ಕ್ರಿಪ್ಟ್ ರೀತಿ ಅನಿಸುತ್ತದೆ. ಆದರೆ ಎಲ್ಲರೂ ಸಂತೋಷವಾಗಿದ್ದಾರೆ. ಬಹಳ ವರ್ಷಗಳಿಂದ ಅಂದುಕೊಂಡಿದ್ದೆವು. ಸರಿಯಾದ ಸಮಯದಲ್ಲಿ ಆ ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ” ಎಂದಿದ್ದಾರೆ. ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎಂದು ಕೇಳಿದ್ದಕ್ಕೆ ‘ಮಗಳು ನನ್ನನ್ನೇ ಹೋಲುತ್ತಿದ್ದಾಳೆ’ ಎಂದು ಹೇಳಿದ್ದರು.

Leave a Reply

Your email address will not be published. Required fields are marked *